ಮಡಿಕೇರಿ : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಮಕ್ಕಳ ಕಥಾ ರಚನೆ ಕಾರ್ಯಾಗಾರ ನಡೆಯಲಿದೆ. ದಿನಾಂಕ 30 ಮೇ 2025ರಂದು ಸುಳ್ಯದ ಕನ್ನಡ ಭವನದಲ್ಲಿ ನಡೆಯುವ ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಅರೆಭಾಷಾ ಕತೆಗಾರ ಡಾ. ಪುನೀತ್ ರಾಘವೇಂದ್ರ ಕುಂಟುಕಾಡು ಹಾಗೂ ಚಿತ್ರಕಲಾ ಶಿಕ್ಷಕ, ತರಬೇತುದಾರ ಪ್ರಸನ್ನ ಐವರ್ನಾಡು ಭಾಗವಹಿಸಲಿದ್ದಾರೆ. ಕಾರ್ಯಾಗಾರದಲ್ಲಿ ಹನ್ನೆರಡರಿಂದ ಹದಿನೆಂಟು ವರ್ಷ ವಯೋಮಾನದ ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶವಿದ್ದು, ಉಚಿತ ತರಬೇತಿಯಾಗಿದ್ದು ಆಸಕ್ತ ಮೂವತ್ತು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದೆ. ಭಾಗವಹಿಸಿದ ಮಕ್ಕಳಿಗೆ ಆಕಾಡೆಮಿಯ ಪ್ರಮಾಣ ಪತ್ರ ನೀಡಿ ಗೌರವಿಸಲಾಗುತ್ತದೆ.
ಕಥಾ ಕಾರ್ಯಾಗಾರದಲ್ಲಿ ಅರೆಭಾಷೆಯಲ್ಲಿ ಕಥೆ ಬರೆಯುವ ಶೈಲಿ, ಓದುವ ಶೈಲಿ, ಕಥೆಯ ಹುಡುಕಾಟ, ಕಥೆಯ ಪಾತ್ರಗಳು, ನೀತಿ, ಜೊತೆಗೆ ಕಥೆಗೆ ಸಂಬಂಧಪಟ್ಟ ಚಿತ್ರಗಳ ಮೂಲಕ ಒಂದು ದಿನದ ಕಾರ್ಯಾಗಾರ ನಡೆಯಲಿದೆ ಎಂದು ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ತಿಳಿಸಿದ್ದಾರೆ. ಹೆಸರು ನೋಂದಾಯಿಸಿಕೊಳ್ಳಲು ಹಾಗೂ ಹೆಚ್ಚಿನ ಮಾಹಿತಿಗೆ ರಿಜಿಸ್ಟ್ರಾರ್ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕಾಫಿಕೃಪಾ ರಾಜಾಸೀಟ್ ರಸ್ತೆ, ಮಡಿಕೇರಿ -571201 ಹಾಗೂ ದೂರವಾಣಿ ಸಂಖ್ಯೆ : 9611355496, 6363783983ನ್ನು ಸಂಪರ್ಕಿಸಲು ಕೋರಲಾಗಿದೆ.