ಉಡುಪಿ : ಹೋಂ ಡಾಕ್ಟರ್ ಫೌಂಡೇಶನ್ ಉಡುಪಿ ಇವರ ನೇತೃತ್ವದಲ್ಲಿ ಸುಮಾರು ಮೂರು ವರ್ಷಗಳಿಂದ ಉಡುಪಿಯ ಸಂತೆಕಟ್ಟೆ ಭಾಗದ ಜನರಿಗೆ ತಲೆನೋವಾಗಿರುವ ನಿತ್ಯ ಸಂಕಟ, ಅದೆಷ್ಟೋ ಜನರ ಪಾಲಿಗೆ ಪ್ರಾಣ ಸಂಕಟವಾಗಿರುವ ಈ ರಸ್ತೆ ನಿರ್ಮಾಣವನ್ನು ತಕ್ಷಣ ಮುಗಿಸುವಂತೆ… ಅಧಿಕಾರಿ ವರ್ಗವನ್ನು ಒತ್ತಾಯಿಸುವ ಒಂದು ವಿನೂತನ ಮಾದರಿಯ ಆಂದೋಲನಕ್ಕಾಗಿ ಹಮ್ಮಿಕೊಂಡ ಸ್ಪರ್ಧೆ ಇದಾಗಿದೆ. ಈ ರಸ್ತೆಯಲ್ಲಿ ನಿತ್ಯ ಸಂಚರಿಸುವ ವಿದ್ಯಾರ್ಥಿಗಳ, ಕೆಲಸಕ್ಕೆ ಹೋಗುವವವರ, ಗರ್ಭಿಣಿಯರ, ರೋಗಿಗಳ, ವೃದ್ಧರ ನಿತ್ಯ ಬವಣೆ ನಿಮ್ಮ ಬರವಣಿಗೆಯಲ್ಲಿ ಕತೆಯಾಗಿ ಮೂಡಿ ಬರಲಿ. ‘ಸಂತೆಕಟ್ಟೆ ರಸ್ತೆ ಬಿಚ್ಚಿಟ್ಟ ಕತೆಗಳು’ ಎನ್ನುವ ಹೆಸರಿನ ಮನ ಮುಟ್ಟುವ, ಮನ ಕಲಕುವ ಕಥೆಗಳಿಗಾಗಿ ಸಾರ್ವಜನಿಕರಿಗೆ ಆಹ್ವಾನ ನೀಡಲಾಗಿದೆ.
ಕತೆ ಸಣ್ಣ ಕತೆಯಾಗಿರಲಿ, ಕೊನೆಗೊಂದು ಸಂದೇಶವಿರಲಿ, ವ್ಯಕ್ತಿ ನಿಂದನೆ, ಪಕ್ಷ ನಿಂದನೆ, ಜಾತಿ ನಿಂದನೆ ಇರುವಂತಿಲ್ಲ, ಮನ ಮುಟ್ಟುವ ಮೂರು ಕಥೆಗಳಿಗೆ ತಲಾ ರೂ.1,000/- ದಂತೆ ನಗದು ಬಹುಮಾನಗಳಿವೆ. ಮನಸ್ಸಿಗೆ ನಾಟುವ 10 ಕಥೆಗಳಿಗೆ ಸಮಾಧಾನಕರ ಬಹುಮಾನವಾಗಿ ಪುಸ್ತಕವೊಂದು ಸಿಗಲಿದೆ. ಬೇರೆಯವರನ್ನು ದೂರದೆ, ನಮ್ಮ ಸಮಸ್ಯೆಗಳನ್ನಷ್ಟೇ ಸಂಬಂಧಪಟ್ಟವರ ಮನಮುಟ್ಟುವಂತೆ ವಿವರಿಸುವುದಷ್ಟೇ ನಮ್ಮ ಉದ್ದೇಶ. ‘ಜಾಣನಿಗೆ ಮಾತಿನ ಪೆಟ್ಟು, ಕೋಣನಿಗೆ ಕೋಲಿನ ಪೆಟ್ಟು’. ಹಾಗಾಗಿ ನಮ್ಮ ಜಾಣ ಅಧಿಕಾರಿ ವರ್ಗದವರಿಗೆ ಮನಮುಟ್ಟುವ –ವ- ಮಾತುಕತೆಯಾಗಿ ಅವರ ಮನ ಮುಟ್ಟಲಿ ಎಂಬ ಆಶಯ ನಮ್ಮದು.
ಕತೆ ಕಳಿಸಲು ಕೊನೆಯ ದಿನಾಂಕ 30 ಸೆಪ್ಟೆಂಬರ್ 2024
ಕಳಿಸಬೇಕಾದ ವಾಟ್ಸಪ್ ನಂಬರ್ 9945130630 ಡಾ. ಶಶಿಕಿರಣ್ ಶೆಟ್ಟಿ, ಹೋಂ ಡಾಕ್ಟರ್ ಫೌಂಡೇಶನ್, ಉಡುಪಿ.
ವಿಶೇಷ ಸೂಚನೆ : ಉತ್ತಮ ಬರಹಗಳನ್ನು ನಿಮ್ಮ ಹೆಸರು, ಫೋನ್ ನಂಬರಿನೊಂದಿಗೆ ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಡಲಾಗುವುದು.