Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ರಂಗಶಂಕರದಲ್ಲಿ ‘ರೊಶೊಮನ್’ ನಾಟಕ ಪ್ರದರ್ಶನ | ಮೇ 17

    May 13, 2025

    ಸಂವಾಹಿನಿ ಹಳೆ ವಿದ್ಯಾರ್ಥಿ ಸಂಘದ ಅಡಿಯಲ್ಲಿ ‘ಯಾದೇ’ ಸಂಭ್ರಮಾಚರಣೆ

    May 13, 2025

    ಸಂಪೆಕಟ್ಟೆಯಲ್ಲಿ ಯಶಸ್ವಿ ಕಲಾವೃಂದದ ಮಕ್ಕಳ ಮೇಳದ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ

    May 13, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » 4ನೇ ದಿನದ ಸುಮನಸ ರಂಗ ಹಬ್ಬ – ಏಕಲವ್ಯ – ಕನ್ನಡ ಯಕ್ಷಗಾನ
    News

    4ನೇ ದಿನದ ಸುಮನಸ ರಂಗ ಹಬ್ಬ – ಏಕಲವ್ಯ – ಕನ್ನಡ ಯಕ್ಷಗಾನ

    March 2, 2023Updated:August 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    02 ಮಾರ್ಚ್ 2023, ಉಡುಪಿ:  ಹಳೆಬೇರು ಹೊಸಚಿಗುರಿನ ಸಮಾಗಮವೇ ಸುಮನಸಾ: ಗೋಪಾಲ ಸಿ. ಬಂಗೇರ
    ಅನುಭವದಿಂದ ಮಾಗಿದ ಹಿರಿಯರನ್ನು, ಹೊಸಚೈತನ್ಯದ ಯುವಜನರನ್ನು, ಪುಟ್ಟ ಮಕ್ಕಳನ್ನು ಸೇರಿಸಿಕೊಂಡು ಮುನ್ನಡೆಯುತ್ತಿರುವ ಸುಮನಾಸವು ಹಳೆಬೇರು ಹೊಸಚಿಗುರಿನ ಸಮಾಗಮ ಎಂದು ಮಲ್ಪೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಾಲ ಸಿ. ಬಂಗೇರ ಹೇಳಿದರು. ಸಾಂಸ್ಕೃತಿಕ ಸಂಘಟನೆ ಸುಮನಸಾ ಕೊಡವೂರು ವತಿಯಿಂದ ಅಜ್ಜರಕಾಡು ಭುಜಂಗಪಾರ್ಕ್‍ನಲ್ಲಿ ಹಮ್ಮಿಕೊಂಡಿರುವ ರಂಗಹಬ್ಬ-11 ಇದರ ಬುಧವಾರದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಈ ಸಂಸ್ಥೆಗೂ ನನಗೂ ಅವಿನಾಭಾವ ಸಂಬಂಧ. ಸಂಘಟನೆಯಿಂದ ಬಲಯುತರಾಗಿರಿ ಎಂಬ ನಾರಾಯಣಗುರುಗಳ ಸಂದೇಶದಂತೆ ಸಂಘಟಿತರಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ. ಸುಮನಸಾದ ಶಿಸ್ತು, ಸಮಯ ಪ್ರಜ್ಞೆ ಎಲ್ಲರಿಗೂ ಮಾದರಿ’ ಎಂದು ಶ್ಲಾಘಿಸಿದರು.

    ರಂಗಸನ್ಮಾನ ಸ್ವೀಕರಿಸಿದ ನಾರಾಯಣ ಪ್ರಭು ಗುಳ್ಮೆ ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ನಾಟಕಗಳಲ್ಲಿ ಅಭಿನಯಿಸಿದವನು. ನಿರ್ದೇಶಿಸಿದವನು. ಆದರೂ ಯಕ್ಷಗಾನದ ಕಡೆಗೆ ಒಲವು ಜಾಸ್ತಿ. ಕರಾವಳಿಯ ಶ್ರೇಷ್ಠ ಕಲೆ ವಿಶ್ವಕ್ಕೆ ಮುಟ್ಟಿರುವ ಕಲೆ ಯಕ್ಷಗಾನ. ಅದು ತಾತ್ಕಾಲಿಕ ಮನರಂಜನೆ ಅಲ್ಲ. ಜನಮನಕ್ಕೆ ಸುವಿಚಾರವನ್ನು ಬೋಧಿಸುವ ಮೂಲಕ ಧರ್ಮಪ್ರಜ್ಞೆ ಜಾಗೃತಗೊಳಿಸುತ್ತದೆ. ಜೀವನದ ಮೌಲ್ಯ, ಜೀವನ ತತ್ವ, ನೀತಿ ಬೋಧನೆ, ಪುರಾಣಪ್ರಜ್ಞೆ, ಆತ್ಮೋಪದೇಶದ ಮೂಲಕ ಜನತಾ ಕಲ್ಯಾಣವನ್ನು ಸಾಧಿಸುವುದೇ ಯಕ್ಷಗಾನದ ಪ್ರಧಾನ ಉದ್ದೇಶ’ ಎಂದರು.

    ಹೊಳ್ಳ ಅಸೋಸಿಯೇಟ್ಸ್‌ನ ಟಿ. ಪ್ರಶಾಂತ್‌ ಹೊಳ್ಳ, ಕಿದಿಯೂರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ ಅಧ್ಯಕ್ಷ ಹರೀಶ್‌ ಎಂ.ಕೆ. ಕಲ್ಮಾಡಿ, ಉದ್ಯಮಿ ವಿನಯ್ ಕರ್ಕೇರ, ಕೊಡವೂರು ವ್ಯವಸಾಯ ಸೇವಾ ಸಂಘದ ನಿರ್ದೇಶಕ ದಿನೇಶ್‌ ಪೈ, ಸುಮನಸಾ ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷ ಪ್ರಕಾಶ್‌ ಜಿ. ಕೊಡವೂರು ಉಪಸ್ಥಿತರಿದ್ದರು. ದಿವಾಕರ ಕಟೀಲು ಸ್ವಾಗತಿಸಿದರು. ಮುರುಗೇಶ್‌ ವಂದಿಸಿದರು. ಅಕ್ಷತ್‌ ಅಮಿನ್‌ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸುಮನಸಾ ಕೊಡವೂರು ವತಿಯಿಂದ ಏಕಲವ್ಯ ಯಕ್ಷಗಾನ ಪ‍್ರದರ್ಶನಗೊಂಡಿತು.

    ಮಾರ್ಚ್ 01, ಬುಧವಾರ – ಏಕಲವ್ಯ – ಕನ್ನಡ ಯಕ್ಷಗಾನ
    ತಂಡ: ಸುಮನಸಾ ಕೊಡವೂರು
    ನಿರ್ದೇಶನ: ಗುರು ಬನ್ನಂಜೆ ಸಂಜೀವ ಸುವರ್ಣ

    Share. Facebook Twitter Pinterest LinkedIn Tumblr WhatsApp Email
    Previous Articleಡಾ. ಎಂ. ಪ್ರಭಾಕರ ಜೋಶಿಗೆ “ಆನಂದ ಸಮಾಜ ಭೂಷಣ” ಪ್ರಶಸ್ತಿ
    Next Article 5ನೇ ದಿನದ ಸುಮನಸ ರಂಗ ಹಬ್ಬ – ಶೂದ್ರ ಶಿವ – ಕನ್ನಡ ನಾಟಕ
    roovari

    Add Comment Cancel Reply


    Related Posts

    ಸಂಪೆಕಟ್ಟೆಯಲ್ಲಿ ಯಶಸ್ವಿ ಕಲಾವೃಂದದ ಮಕ್ಕಳ ಮೇಳದ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ

    May 13, 2025

    ಶ್ರೀ ಆಂಜನೇಯ ಮಂತ್ರಾಲಯದಲ್ಲಿ ಪಾಕ್ಷಿಕ ತಾಳಮದ್ದಳೆ

    May 12, 2025

    ಬೆಂಗಳೂರಿನ ಶ್ರೀ ವಿನಾಯಕ ದೇವಸ್ಥಾನದಲ್ಲಿ ‘ಸುದರ್ಶನ ಗರ್ವಭಂಗ’ ಮತ್ತು ‘ಕುಶ ಲವ ಕಾಳಗ’ ಪ್ರದರ್ಶನ | ಮೇ 17

    May 10, 2025

    ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಾಜಗೋಪುರದಲ್ಲಿ ತಾಳಮದ್ದಳೆ

    May 7, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.