28, ಫೆಬ್ರವರಿ 2023 ಉಡುಪಿ: ಕಲಾವಿದರ ಗೂಡಾದ ಕೊಡವೂರು ಬೀಡಾಗಲಿ: ಜಯರಾಜ್ ಕಾಂಚನ್. ಸುಮಧುರ ಮನಸ್ಸಿನ ಎಲ್ಲರ ಸುಮನಸಾ ಸಂಸ್ಥೆಯು ಕೊಡವೂರಿನಲ್ಲಿ ಕಲಾವಿದರ ಗೂಡು ಕಟ್ಟಿದೆ. ಈ ಗೂಡು ಬೀಡಾಗಿ ಬೆಳೆಯಲಿ ಎಂದು ಹಿರಿಯ ನಾಟಕಕಾರ ಜಯರಾಜ್ ಎಸ್. ಕಾಂಚನ್ ಹೇಳಿದರು. ಸಾಂಸ್ಕøತಿಕ ಸಂಘಟನೆ ಸುಮನಸಾ ಕೊಡವೂರು ವತಿಯಿಂದ ಅಜ್ಜರಕಾಡು ಭುಜಂಗಪಾರ್ಕ್‍ನಲ್ಲಿ ಫೆಬ್ರವರಿ 27ರಂದು ಹಮ್ಮಿಕೊಂಡ ರಂಗಹಬ್ಬ-11 ಇದರ ಎರಡನೇ ದಿನದ ಕಾರ್ಯಕ್ರಮದಲ್ಲಿ ರಂಗಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಬಹಳ ಸಂಸ್ಥೆಗಳು ಹುಟ್ಟುತ್ತವೆ. ಆರಂಭಶೂರತ್ವ ತೋರಿಸುತ್ತವೆ. ಬಳಿಕ ಮುನ್ನಡೆಯುವುದಿಲ್ಲ. ಆದರೆ ಸುಮನಸಾ ಸಂಸ್ಥೆ ಈ ರೀತಿಯಾಗದೇ ಎಲ್ಲ ನೋವು ನಲಿವುಗಳನ್ನು ಸಮಾನವಾಗಿ ಸ್ವೀಕರಿಸಿ ಧೀರ ಕಲಾವಿದರನ್ನು ಸೃಷ್ಟಿಸಿ 21 ವರ್ಷಗಳಿಂದ ಮುಂದೆ ಸಾಗುತ್ತಿದೆ ಎಂದು ಅವರು ಶ್ಲಾಘಿಸಿದರು.
ಹೋಟೆಲ್ ಉದ್ಯಮಿ, ಕಲಾಪೋಷಕ ಟಿ. ರವೀಮದ್ರ ಪೂಜಾರಿ ಮಾತನಾಡಿ, ಸುಮನಸಾ ಸಂಸ್ಥೆಯು ಕೇವಲ ತನ್ನ ನಾಟಕಗಳನ್ನು ಪ್ರದರ್ಶಿಸುವುದಲ್ಲ. ರಾಜ್ಯ, ಬೇರೆ ರಾಜ್ಯಗಳ ತಂಡಗಳನ್ನು ಕರೆಸಿ ಅವರ ನಾಟಕಗಳನ್ನು ಪ್ರದರ್ಶಿಸಲು ಅವಕಾಶ ನೀಡುತ್ತದೆ. ಇಲ್ಲಿನ ಪ್ರೇಕ್ಷಕರಿಗೆ ಆ ಕಲೆಯನ್ನು ನೋಡುವ ಅವಕಾಶವನ್ನು ಮಾಡಿಕೊಡುತ್ತದೆ, ಅದೇ ರೀತಿ ಈ ಕ್ಷೇತ್ರದಲ್ಲಿ ಸಾಶಧನೆ ಮಾಡಿದವರನ್ನು ಗುರುತಿಸಿ ಸನ್ಮಾನಿಸುತ್ತಿದೆ. ಈ ಸಂಸ್ಥೆಯ ಮೂಲಕ ಇನ್ನಷ್ಟು ಕಲಾವಿದರು ಹುಟ್ಟಲಿ. ಅದೇ ರೀತಿ ಪೋಷಕರು ಕೂಡ ನಿರಂತರ ಪ್ರೋತ್ಸಾಹ ನೀಡಲಿ ಎಂದು ಹಾರೈಸಿದರು.
ಫೆಬ್ರವರಿ 27, ಸೋಮವಾರ – ಅರುಂಧತೀ ಆಲಾಪ – ಕನ್ನಡ ನಾಟಕ
ತಂಡ: ಸುಮನಸಾ ಕೊಡವೂರು ರಚನೆ: ರಾಮನಾಥ್ ಮೈಸೂರು ನಿರ್ದೇಶನ: ನಿತೀಶ್ ಬಂಟ್ವಾಳ