ಧಾರವಾಡ : ದಿನಾಂಕ 26 ನವೆಂಬರ್ 2024ರಂದು ನಡೆದ 76ನೇಯ ಸಂವಿಧಾನ ದಿನಾಚರಣೆಯ ಅಂಗವಾಗಿ ‘ಗಣಕರಂಗ’ (ರಿ) ಧಾರವಾಡ ಇವರು ಏರ್ಪಡಿಸಿದ್ದ ಕಥಾ ಸ್ಪರ್ಧೆಯಲ್ಲಿ ಬರಹಗಾರ, ಮೂಲವ್ಯಾಧಿ ಹಾಗೂ ಚರ್ಮರೋಗ ತಜ್ಞ, ವೈದ್ಯಕೀಯ ನಿರ್ದೇಶಕ, ಕಣಚೂರು ಮತ್ತು ಮಂಗಳಾ ಆಸ್ಪತ್ರೆಯಲ್ಲಿ ಸಲಹಾ ವೈದ್ಯರಾಗಿರುವ ಡಾ. ಸುರೇಶ ನೆಗಳಗುಳಿ ಇವರು ಬರೆದ ‘ಸ್ವಯಂ ವಿಧಾನ’ ಶಿರೋನಾಮೆಯ ಕಥೆಗೆ ಪ್ರಥಮ ಬಹುಮಾನವನ್ನು ಲಭಿಸಿದೆ.
ರೂಪಾಯಿ ಐದು ಸಾವಿರ ನಗದು ಹಾಗೂ ಪ್ರಮಾಣ ಪತ್ರ ಹೊಂದಿರುವ ಈ ಪ್ರಶಸ್ತಿಯು ಅಂತರ್ಜಾಲ ಮಟ್ಟದಲ್ಲಿ ಲಭಿಸಿದ್ದು, ಪ್ರಥಮ, ದ್ವಿತೀಯ, ತೃತೀಯ ಹಾಗೂ ಹತ್ತು ಮೆಚ್ಚುಗೆಯ ಬಹುಮಾನಗಳನ್ನು ಒಳಗೊಂಡಿತ್ತು.
ರಾಜ್ಯ ರಾಷ್ಟ್ರಾದ್ಯಂತದ ಹಲವು ಮಂದಿ ಕನ್ನಡಿಗರು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಸಂವಿಧಾನದ ಮಹತ್ವ ಸಾರುವ ವಿಭಿನ್ನ ಕಥೆಗಳ ಬಿತ್ತರವಾಯಿತು.
ಧಾರವಾಡದಲ್ಲಿ ವಿಜೃಂಭಣೆಯಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭವು ಶೀಘ್ರದಲ್ಲೇ ನಡೆಯಲಿದೆ ಎಂದು ಸಂಘಟಕ ಸಿದ್ಧರಾಮ ಹಿಪ್ಪರಗಿ, ಗಣಪತಿ ಗೋ ಚಲವಾದಿ ಮತ್ತು ರವಿ ಚಲವಾದಿ ತಿಳಿಸಿರುತ್ತಾರೆ. ಈ ಸ್ಪರ್ಧೆಯಲ್ಲಿ ಡಾ ವಿ. ಜಿ. ಪೂಜಾರ ತೀರ್ಪುಗಾರರಾಗಿದ್ದರು.
Subscribe to Updates
Get the latest creative news from FooBar about art, design and business.