ಮಂಗಳೂರು : ಅಸ್ತಿತ್ವ (ರಿ.) ಮಂಗಳೂರು ಹಾಗೂ ರಂಗ ಅಧ್ಯಯನ ಕೇಂದ್ರ, ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ಇದರ ರಂಗ ತಿರುಗಾಟ ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ನಡೆಯಲಿದೆ. ಸುಮಾರು 8 ನಾಟಕಗಳ 40ಕ್ಕೂ ಹೆಚ್ಚು ಪ್ರದರ್ಶನಗಳು ಈ ಎರಡು ತಿಂಗಳುಗಳಲ್ಲಿ ನಡೆಯಲಿದೆ. ಅಸ್ತಿತ್ವ ತಂಡ ಕಳೆದ ಎಂಟು ವರ್ಷಗಳಿಂದ ‘ಸುವಾರ್ತೆ ಭೊಂವ್ಡಿ’ ಎಂಬ ಶೀರ್ಷಿಕೆಯಲ್ಲಿ ನಾಟಕಗಳನ್ನು ಪ್ರದರ್ಶನ ನೀಡುತ್ತಾ ಬಂದಿದೆ. ಈವರೆಗೆ ಸುಮಾರು 12 ನಾಟಕಗಳ 250ಕ್ಕೂ ಹೆಚ್ಚು ಪ್ರದರ್ಶನಗಳನ್ನು ದೇಶ ವಿದೇಶದಲ್ಲಿ ಪ್ರದರ್ಶನ ಕಂಡಿವೆ. ಈ ವರ್ಷದ ತಿರುಗಾಟಕ್ಕೆ ಸಂತ ಅಲೋಶಿಯಸ್ ಕಾಲೇಜಿನ ರಂಗತಂಡದ ಸಹಭಾಗಿತ್ವ ಕೂಡ ಇದ್ದು, ಡಿಪ್ಲೋಮಾ ವಿಧ್ಯಾರ್ಥಿಗಳ ನಾಟಕ ‘ದಾದ್ಲ್ಯಾಂ ಮಧೆಂ ತುಂ ಸದೆಂವ್’ ಎಂಬ ನಾಟಕವೂ ಈ ತಿರುಗಾಟದಲ್ಲಿ ಪ್ರದರ್ಶನಗೊಳ್ಳುತ್ತಲಿದೆ. ಅಸ್ತಿತ್ವ ತಂಡದ ಮುಖ್ಯಸ್ಥರಾದ ವಂದನೀಯ ಡಾಕ್ಟರ್ ಆಲ್ವಿನ್ ಸೆರಾವೊರವರು ಬಹುತೇಕ ನಾಟಕಗಳನ್ನು ರಚಿಸಿದ್ದು, ರಂಗ ಅಧ್ಯಯನ ಕೇಂದ್ರದ ನಿರ್ದೇಶಕರಾದ ಕ್ರಿಸ್ಟಿ ಈ ತಿರುಗಾಟದ ಸಂಯೋಜಕರಾಗಿದ್ದಾರೆ.
ಈ ತಿರುಗಾಟಕ್ಕೆ ಕನ್ನಡ ವಿಭಾಗ ಸಂತ ಅಲೋಶಿಯಸ್ ಕಾಲೇಜು ಹಾಗೂ ಲೋಗೋಸ್ ಥಿಯೇಟರ್ ಟ್ರೂಪ್ ಮಂಗಳೂರು ಸಹಭಾಗಿತ್ವವನ್ನು ನೀಡಿದೆ. ಎಲ್ಲಾ ತಿರುಗಾಟದ ಪ್ರದರ್ಶನಗಳಿಗೆ ತಾಂತ್ರಿಕ ಸಹಾಯವನ್ನು ಆಹಾರ್ಯಂ, ದಿ ಡಿಸೈನರ್ಸ್ ಮಾಡುತ್ತಿದ್ದಾರೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : ಕ್ರಿಸ್ಟಿ: 9113226234 ಮತ್ತು ಬಾ.ದೊ. ಆಲ್ವಿನ್ ಸೆರಾಂವ್ : 8050310755
ಪ್ರದರ್ಶನಗೊಳ್ಳುವ ನಾಟಕ ಹಾಗೂ ಸ್ಥಳ ಈ ಕೆಳಗಿನಂತಿವೆ
ಜನವರಿ 2024
28th – ದಾದ್ಲ್ಯಾಂ ಮಧೆಂ ತುಂ ಸದೆಂವ್. (ಮಿಲಾಗ್ರಿಸ್ ಕಾಲೇಜು, ಕಲ್ಯಾಣ್ಪುರ್ ಉಡುಪಿ)
ಫೆಬ್ರವರಿ 2024
3 – ಜುಗಾರಿ (ಉದ್ಯಾವರ್, ನಿರಂತರ್ ನಾಟಕೋತ್ಸವ)
4 – ದಾದ್ಲ್ಯಾಂ ಮಧೆಂ ತುಂ ಸದೆಂವ್ (ಉದ್ಯಾವರ್, ನಿರಂತರ್ ನಾಟಕೋತ್ಸವ)
10- ಎಮ್ಮಾವ್ಸ್ (ಪಾಂಗ್ಳಾ, ಕಲಾರಾಧನ್ ನಾಟಕೋತ್ಸವ)
11 – ದಾದ್ಲ್ಯಾಂ ಮಧೆಂ ತುಂ ಸದೆಂವ್ (ಸಾಂ. ಲುವಿಸ್ ಕೊಲೆಜ್, ಮಂಗ್ಳುರ್) (ದೋನ್ ಪ್ರದರ್ಶನಾಂ)
17- ಎಮ್ಮಾವ್ಸ್ (ಅಮ್ಮೆಂಬಳ್)
18- ದಾದ್ಲ್ಯಾಂ ಮಧೆಂ ತುಂ ಸದೆಂವ್ (ಅಲಂಗಾರ್)
18 – ಎಮ್ಮಾವ್ಸ್ (ಉಡುಪಿ)
19- ಜುಗಾರಿ (ಪಾಂಬೂರು, ಪರಿಚಯ ನಾಟಕೋತ್ಸವ)
23- ದಾದ್ಲ್ಯಾಂ ಮಧೆಂ ತುಂ ಸದೆಂವ್ (ಪಾಂಬೂರು, ಪರಿಚಯ ನಾಟಕೋತ್ಸವ)
24- ದಾದ್ಲ್ಯಾಂ ಮಧೆಂ ತುಂ ಸದೆಂವ್ (ಬಿಜೈ)
25- ಝುಜ್ (ಚಿಕ್ಕಮಗಳೂರು)
25- ದಾದ್ಲ್ಯಾಂ ಮಧೆಂ ತುಂ ಸದೆಂವ್ (ಅಗ್ರಾರ್)
ಮಾರ್ಚ್ 2024
2 – ದಾದ್ಲ್ಯಾಂ ಮಧೆಂ ತುಂ ಸದೆಂವ್ (ಮಿಯಾರ್)
2- ಹಿಮ್ಟೊ (ನಾರಾವಿ)
3- ದಾದ್ಲ್ಯಾಂ ಮಧೆಂ ತುಂ ಸದೆಂವ್ (ಪುತ್ತೂರು)
3- ಹಿಮ್ಟೊ (ಮಿಯಾರ್)
3- ಎಮ್ಮಾವ್ಸ್ (ಕುಂದಾಪುರ)
7 – ದಾದ್ಲ್ಯಾಂ ಮಧೆಂ ತುಂ ಸದೆಂವ್ (ಗಂಟಲ್ ಕಟ್ಟೆ)
8- ದಾದ್ಲ್ಯಾಂ ಮಧೆಂ ತುಂ ಸದೆಂವ್ (ಪೆರ್ಮುದೆ)
9- ದಾದ್ಲ್ಯಾಂ ಮಧೆಂ ತುಂ ಸದೆಂವ್ (ಉರ್ವಾ)
9 – ಹಿಮ್ಟೊ (ಮಂಗಳೂರು)
10- ದಾದ್ಲ್ಯಾಂ ಮಧೆಂ ತುಂ ಸದೆಂವ್ (ಪಾಣೆ ಮಂಗಳೂರು)
10- ಎಮ್ಮಾವ್ಸ್ (ಕಿರೆಂ)
10- ಹಿಮ್ಟೊ (ಬೆಳ್ಮಣ್)
12- ಜುಗಾರಿ (ಎಂ.ಜಿ.ಎಂ. ಕಾಲೇಜು ಉಡುಪಿ)
15- ಝುಜ್ (ತಾಕೊಡೆ)
15- ದಾದ್ಲ್ಯಾಂ ಮಧೆಂ ತುಂ ಸದೆಂವ್ (ತೊಟ್ಟಂ)
16- ಎಮ್ಮಾವ್ಸ್ (ಸುರತ್ಕಲ್)
16- ದಾದ್ಲ್ಯಾಂ ಮಧೆಂ ತುಂ ಸದೆಂವ್ (ರಾಣಿಪುರ)
16- ಹಿಮ್ಟೊ (ಉದ್ಯಾವರ)
17- ದಾದ್ಲ್ಯಾಂ ಮಧೆಂ ತುಂ ಸದೆಂವ್ (ಮಂಜೇಶ್ವರ)
17- ಹಿಮ್ಟೊ (ಮಡಂತ್ಯಾರ್)
17- ಎಮ್ಮಾವ್ಸ್ (ಬೆಂದೂರ್)
24- ದಾದ್ಲ್ಯಾಂ ಮಧೆಂ ತುಂ ಸದೆಂವ್ (ಬೊಂದೇಲ್)
24- ಮತ್ತಾಯ 22:39 (ಸಾಂ ಲುವಿಸ್ ಕಾಲೇಜ್ ಮಂಗಳೂರು)
27- ದಾದ್ಲ್ಯಾಂ ಮಧೆಂ ತುಂ ಸದೆಂವ್ (ಕಿನ್ನಿಗೋಳಿ)
31- ಎಮ್ಮಾವ್ಸ್ (ಲೊರೆಟ್ಟೊ)
31- ಮತ್ತಾಯ 22:39 (ಚಿಕ್ಕ ಮಂಗಳೂರು)
ಎಪ್ರಿಲ್ 2024
7 – ಜುಗಾರಿ (ವಾಮಂಜೂರು)