11 ಏಪ್ರಿಲ್ 2023, ಮಂಗಳೂರು: ಮಕ್ಕಳ ಶಿಕ್ಷಣದಲ್ಲಿ 25 ವರ್ಷಗಳ ಸಂಶೋಧನಾಧಾರಿತವಾದ ತನ್ನದೇ ವಿನೂತನ ಪರಿಕಲ್ಪನೆಗಳನ್ನು ಹೊಂದಿರುವ ಮತ್ತು ಅವುಗಳನ್ನು ಅನೌಪಚಾರಿಕ ಸ್ವರೂಪ ಅಧ್ಯಯನ ಕೇಂದ್ರದಲ್ಲಿ ಪ್ರಯೋಗಕ್ಕೆ ಒಳಪಡಿಸಿ ಅಪೂರ್ವ ಫಲಿತಾಂಶವನ್ನು ದಾಖಲಿಸಿರುವ ಗೋಪಾಡ್ಕರ್ ಸ್ವರೂಪ ಅಧ್ಯಯನ ಕೇಂದ್ರದಿಂದ ನಗರದ ಕೋಡಿಯಾಲ್ ಬೈಲಿನಲ್ಲಿ ಎಪ್ರಿಲ್ 23ರಿಂದ ಮೇ 7ರವರೆಗೆ 15 ದಿನಗಳ ‘ವಿಶೇಷ ಮೆಮೊರಿ ಕ್ಯಾಂಪ’ನ್ನು ಹಮ್ಮಿಕೊಳ್ಳಲಾಗಿದೆ. ನಾಲ್ಕನೇ ತರಗತಿಯಿಂದ ಆರಂಭಿಸಿ ಯಾವುದೇ ತರಗತಿಯ, ಪಿಯುಸಿ, ಡಿಗ್ರಿ ಯಾವುದೇ ವಿಭಾಗದ ವಿದ್ಯಾರ್ಥಿಗಳು, ಹೆತ್ತವರು, ಪೋಷಕರು, ಶಿಕ್ಷಕರು ಭಾಗವಹಿಸಬಹುದು.
ಶಿಬಿರದಲ್ಲಿ ಹತ್ತು ಚಟುವಟಿಕೆಗಳ ಮೂಲಕ ಹತ್ತು ಸ್ಮರಣ ತಂತ್ರಗಳಲ್ಲಿ ವಿದ್ಯಾರ್ಥಿಗಳ ಉನ್ನತ ಕಲಿಕೆಗೆ ಅನುಕೂಲವಾಗುವಂತೆ ತರಬೇತಿಯನ್ನು ನೀಡಲಾಗುವುದು. ಅವರ ಮಾನಸಿಕ ಹಾಗೂ ಭಾವನಾತ್ಮಕ ಬೆಳವಣಿಗೆಗೆ ಒತ್ತು ಕೊಡುವುದರಿಂದ ಬೌದ್ಧಿಕ ಕಲಿಕೆಯು ಸುಲಲಿತವಾಗುವುದು. ಈ ಶಿಬಿರದಲ್ಲಿ ಏನು ಕಲಿತಿದ್ದೀರಿ ಎನ್ನುವುದಕ್ಕಿಂತ ಯಾವುದರಲ್ಲಿ ಬದಲಾಗಿದ್ದೀರಿ ಎನ್ನುವುದು ಹೆಚ್ಚು ಮಹತ್ವದ್ದಾಗಲಿದೆ.
ದೂರದವರಿಗೆ ಪಿಜಿ ಅಥವಾ ಹಾಸ್ಟೆಲ್ ವ್ಯವಸ್ಥೆ ಇದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : ಗೋಪಾಡ್ಕರ್ 9845203472 ಮತ್ತು ಸುಮಾಡ್ಕರ್ 9901638372
ಪೋಷಕರಿಗಾಗಿ
ಸ್ವರೂಪ ರಜಾ ದಿನಗಳ ಈ ವಿಶೇಷ ತರಬೇತಿಯಲ್ಲಿ ಭಾವನಾತ್ಮಕ ಪರಿಜ್ಞಾನಕ್ಕೆ ಹೆಚ್ಚು ಒತ್ತು ಕೊಡುವ ಕಾರಣಕ್ಕಾಗಿ ವಿದ್ಯಾರ್ಥಿಗಳಲ್ಲಿ ವರ್ತನೆ, ಶಿಸ್ತು, ಸ್ವಕಲಿಕೆ ಸಾಧನೆ ಇಚ್ಛಾಶಕ್ತಿ ಬಲಗೊಂಡಿರುತ್ತದೆ. ಸ್ವರೂಪ ಅಧ್ಯಯನದಲ್ಲಿ ಭಾವನೆಗಳ ಹತೋಟಿಯಲ್ಲಿ 90% ಗೆಲುವು ಸಾಧಿಸಲಿದ್ದಾರೆ. ಇದರ ಸದುಪಯೋಗವಾಗಲು ಪೋಷಕರು ಕಾರಣರಾಗಬೇಕು. ಪೋಷಕರ ದೌರ್ಬಲ್ಯವನ್ನು ಅರಿತಿರುವ ವಿದ್ಯಾರ್ಥಿಗಳ ಬದಲಾವಣೆ ಕಷ್ಟ ಸಾಧ್ಯ. ಇಲ್ಲಿ ಪೋಷಕರೇ ಮುಖ್ಯವಾಗ್ತಾರೆ. ಪೋಷಕರ (ಧ್ವನಿ+ಭಾವನೆ) ಮಾತನಾಡುವ ಪದಗಳ ಬಳಕೆ ಅಂದರೆ ಧ್ವನಿಯ ಮೌಲ್ಯ ಕಳೆದು ಹೋಗಿದ್ದರೆ ಮಕ್ಕಳ ಬದಲಾವಣೆಗೆ ಸಮಸ್ಯೆಯಾಗಲಿದೆ. ಪೋಷಕರ ಮಾತಿಗೆ ವಿರುದ್ಧವಾಗಲಿದೆ.
ಶಿಬಿರದ ಫಲಿತಾಂಶ ಪಡಕೊಳ್ಳಬೇಕಾದವರು ಮಕ್ಕಳ ವರ್ತನೆಯ ಗೆಲುವು ನಿರಂತರವಾಗಲು ಸ್ವರೂಪದ ಒಂದು ದಿನದ ಕಾರ್ಯಾಗಾರಕ್ಕೆ ಅಗತ್ಯ ಬರಬೇಕು. ಇದು ನಮ್ಮ ಬದುಕಿನ ಕ್ಷಣ ಕ್ಷಣದ ಸಂತಸ, ನೆಮ್ಮದಿಗಾಗಿ, ಮಕ್ಕಳ ಶಿಕ್ಷಣದ ಅದ್ಭುತ ಫಲಿತಾಂಶ ಸಾಧನೆಗಾಗಿ ಅನಿವಾರ್ಯವಾಗಿದೆ.
30-04-2023 ಆದಿತ್ಯವಾರ, 10am to 4pm ಅಗತ್ಯ ಬನ್ನಿ
4 Comments
Shivakumar Hulipura family hade excellent experience of self awareness and motivation from Swaroop thank you so much and we are blessed to experience it.
Yes
Yes
Yes