Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರು ಇಂಟರ್ನ್ಯಾಷನಲ್ ಸೆಂಟರಿನಲ್ಲಿ ‘ಕ್ರಾಂತಿ ಬಂತು # ಕ್ರಾಂತಿ’ ನಾಟಕ ಪ್ರದರ್ಶನ | ಜುಲೈ 23

    July 21, 2025

    ಸಂತ ಅಲೋಶಿಯಸ್ ಕಾಲೇಜಿನಲ್ಲಿ ವಿಶ್ವ ದಾಖಲೆಗಾಗಿ ‘ಭರತನಾಟ್ಯ’ ಪ್ರದರ್ಶನ | ಜುಲೈ 21ರಿಂದ 28

    July 19, 2025

    ಭರತನಾಟ್ಯ ಕಲಾವಿದೆ ಕೆ. ಪಿ. ದಿಥ್ಯಗೆ ‘ಸ್ಟಾರ್ ಆಫ್ ಕರ್ನಾಟಕ’ ಪ್ರಶಸ್ತಿ

    July 19, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಡಿಕೇರಿಯ ಪತ್ರಿಕಾ ಭವನದಲ್ಲಿ ಕೊಡವ ಮಕ್ಕಳ ಕೂಟದ 91ನೇ ಪುಸ್ತಕ ‘ತಾಳ್ಮೆರ ತಾವರೆ’ ಲೋಕಾರ್ಪಣೆ
    Book Release

    ಮಡಿಕೇರಿಯ ಪತ್ರಿಕಾ ಭವನದಲ್ಲಿ ಕೊಡವ ಮಕ್ಕಳ ಕೂಟದ 91ನೇ ಪುಸ್ತಕ ‘ತಾಳ್ಮೆರ ತಾವರೆ’ ಲೋಕಾರ್ಪಣೆ

    May 29, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಡಿಕೇರಿ : ಕೊಡವ ಮಕ್ಕಡ ಕೂಟದ 91ನೇ ಪುಸ್ತಕವಾಗಿ ಚೇರಂಬಾಣೆಯ ಕೊಳಗದಾಳು ಗ್ರಾಮದವರಾದ ಲೇಖಕಿ ಚೀರಮ್ಮನ ವಾಣಿ ಚಂಗುವಮ್ಮಯ್ಯ ಅವರ 3ನೇ ಪುಸ್ತಕ ಕೊಡವ ಭಾಷೆಯ ‘ತಾಳ್ಮೆರ ತಾವರೆ’ ಇದರ ಲೋಕಾರ್ಪಣಾ ಸಮಾರಂಭವು ದಿನಾಂಕ 27-05-2024ರಂದು ಮಡಿಕೇರಿಯ ಪತ್ರಿಕಾ ಭವನದಲ್ಲಿ ನಡೆಯಿತು.
    ಪುಸ್ತಕ ಲೋಕಾರ್ಪಣೆಗೊಳಿಸಿದ ಹಿರಿಯ ಸಾಹಿತಿ ಬಾಚಮಂಡ ಗೌರಮ್ಮ ಮಾದಮ್ಮಯ್ಯ ಮಾತನಾಡಿ “’ತಾಳ್ಮೆರ ತಾವರೆ’ ಪುಸ್ತಕದ ಲೇಖಕಿ ಚೀರಮ್ಮನ ವಾಣಿ ಚಂಗುವಮ್ಮಯ್ಯ ವಿಶೇಷ ಚೇತನಳಾಗಿ ಮನೆಯಲ್ಲೇ ಅಕ್ಷರಭ್ಯಾಸ ಮಾಡಿ ಸಾಹಿತ್ಯ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ.” ಎಂದರು.

    ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಸಾಹಿತಿ ಪಿ. ಎಸ್. ವೈಲೇಶ್‌ ಮಾತನಾಡಿ “ಸಂಸ್ಕೃತಿ, ಪರಂಪರೆ, ಪದ್ಧತಿ ಮತ್ತು ಆಚಾರ ವಿಚಾರಗಳು ಉಳಿಯಬೇಕಾದರೆ ಸಾಹಿತ್ಯ ಕ್ಷೇತ್ರದ ಬೆಳವಣಿಗೆ ಅಗತ್ಯವಾಗಿದೆ. ಕೊಡಗಿನ ಆಚಾರ, ವಿಚಾರ, ಸಂಸ್ಕೃತಿ, ಪದ್ಧತಿ, ಪರಂಪರೆ ಇಂದಿಗೂ ಶ್ರೀಮಂತವಾಗಿರಲು ಸಾಹಿತ್ಯವೇ ಕಾರಣ. ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ, ಕೊಡಗಿನ ಗೌರಮ್ಮ ಸೇರಿದಂತೆ ಅನೇಕ ಹಿರಿಯ ಸಾಹಿತಿಗಳ ಹೆಸರು ಚಿರಸ್ಥಾಯಿಯಾಗಿ ಉಳಿದಿದೆ. ಅವರ ಹೆಸರು ಹಾಗೂ ಖ್ಯಾತಿ ಉಳಿದುಕೊಂಡಿರುವುದು ಸಾಹಿತ್ಯದಿಂದ. ಕನ್ನಡ ಭಾಷೆಯ ಸಹೋದರ ಭಾಷೆ ಕೊಡವ ಭಾಷೆಯಾಗಿದೆ. ಈ ಭಾಷೆಯಲ್ಲಿ ಸಾಹಿತ್ಯದ ಬೆಳವಣಿಗೆ ಇಲ್ಲದ ಕಾಲದಲ್ಲಿ ಸಂಘ ಸಂಸ್ಥೆಗಳು ಹಾಗೂ ಪತ್ರಿಕೆಗಳು ಕೊಡವ ಸಾಹಿತ್ಯವನ್ನು ಮೇರು ಮಟ್ಟದಲ್ಲಿ ತಂದಿರಿಸಿವೆ.” ಎಂದರು.

    ಲೇಖಕಿ ಚೀರಮ್ಮನ ವಾಣಿ ಚಂಗುವಮ್ಮಯ್ಯ ಮಾತನಾಡಿ “‘ತಾಳ್ಮೆರ ತಾವರೆ’ ಪುಸ್ತಕವು ಕಾವೇರಿ ಮಾತೆ, ಗಿಡ, ಪ್ರಕೃತಿ, ಪ್ರಾಣಿ, ಪಕ್ಷಿ, ಆಸೆ, ಭಾಷೆ, ಸುಖ, ದುಃಖ, ನೋವು, ನಲಿವು, ತಂದೆ ಹಾಗೂ ತಾಯಿಗೆ ಸಂಬಂಧಿಸಿದಂತೆ 201 ಕವನಗಳನ್ನು ಹೊಂದಿದೆ. ಹಿರಿಯ ಕವಿ ಮತ್ತು ಸಾಹಿತಿಗಳ ಪುಸ್ತಕಗಳನ್ನು ಪ್ರತಿಯೊಬ್ಬರು ಓದಬೇಕು, ಆ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಬೆಳೆದು ಮೌಲ್ಯಯುತ ಬರಹಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕು. ಪ್ರಸ್ತುತ ದಿನಗಳಲ್ಲಿ ಓದುಗರ ಸಂಖ್ಯೆ ಕಡಿಮೆಯಾಗಿದೆ. ಪುಸ್ತಕಗಳನ್ನು ಮೂಲೆ ಗುಂಪಾಗಿಸದೆ ಪ್ರತಿಯೊಬ್ಬರು ಓದಬೇಕು. ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಿದರೆ ಸಾಹಿತಿಗಳ ಸಂಖ್ಯೆಯೂ ಹೆಚ್ಚಾಗುತ್ತದೆ.” ಎಂದ ಅವರು, ಮತ್ತಷ್ಟು ಪುಸ್ತಕಗಳನ್ನು ಹೊರತರುವ ಹಂಬಲವಿದೆ ಎಂದರು.

    ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಮಾತನಾಡಿ “ಕೊಡವ ಮಕ್ಕಡ ಕೂಟ ಹೊಸ ಬರಹಗಾರರನ್ನು ಪ್ರೋತ್ಸಾಹಿಸುವ ಕೆಲಸವನ್ನು ನಿರಂತರವಾಗಿ ಮಾಡಲಿದೆ. ಸಾಮಾಜಿಕ ಕಳಕಳಿ, ಕೊಡಗಿನ ಅಭ್ಯುದಯದ ಕಾಳಜಿ, ಸಂಸ್ಕೃತಿ, ಸಾಹಿತ್ಯ ಬೆಳೆವಣಿಗೆಯ ಮೇಲಿನ ಆಸಕ್ತಿಯಿಂದ ನಿರಂತರ ಕಾರ್ಯನಿರ್ವಹಣೆಯಲ್ಲಿ ತೊಡಗಿದೆ. ಕೊಡವ ಮಕ್ಕಡ ಕೂಟ ಈಗಾಗಲೇ ಜಿಲ್ಲೆಯ ಹಲವು ಬರಹಗಾರರು ಹಾಗೂ ಸಾಹಿತಿಗಳು ಬರೆದ ಕೊಡವ, ಕನ್ನಡ, ಇಂಗ್ಲೀಷ್, ಹಿಂದಿ ಭಾಷೆಗಳಲ್ಲಿ ಒಟ್ಟು 91 ಕೃತಿಗಳನ್ನು ಬಿಡುಗಡೆ ಮಾಡಿದೆ.” ಎಂದರು 100 ಬರಹಗಾರರ ಲೇಖನವನ್ನೊಳಗೊ೦ಡ ನೂರನೇ ಪುಸ್ತಕವನ್ನು ಹೊರ ತರಲು ಕೂಟ ಸಿದ್ದತೆ ನಡೆಸಿದ್ದು, ಬರಹಗಾರರು ಬರಹ ಕಳುಹಿಸಬೇಕೆಂದು ಮನವಿ ಮಾಡಿದರು.

    ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಕೂಪ ಗೊಂಬೆ ಉತ್ತಪ್ಪ ಹಾಗೂ ಕೂಪದಿರ ಜುನಾ ವಿಜಯ ಉಪಸ್ಥಿತರಿದ್ದರು.

    Share. Facebook Twitter Pinterest LinkedIn Tumblr WhatsApp Email
    Previous Article‘ವೀಚಿ ಸಾಹಿತ್ಯ ಪ್ರಶಸ್ತಿ’ಗೆ ಲೇಖಕರ ಆಯ್ಕೆ
    Next Article ಪುಸ್ತಕ ವಿಮರ್ಶೆ | ಪಾಂಡಿತ್ಯಪೂರ್ಣ ನೋಟದ ವಿಮರ್ಶಾ ಸಂಕಲನ : ಡಾ. ವಸಂತಕುಮಾರ ಪೆರ್ಲ ಅವರ ‘ಮದಿಪುದ ಪಾತೆರೊಲು’
    roovari

    Add Comment Cancel Reply


    Related Posts

    ಹೇಮಂತ್ ಪಾರೇರ ರಚಿತ ‘ಬೆಳ್ಳಿಗೆಜ್ಜೆ’ ಕವನ ಸಂಕಲನ ಬಿಡುಗಡೆ

    July 19, 2025

    ಕೋಲಾರ ಪತ್ರಕರ್ತರ ಭವನದಲ್ಲಿ ‘ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನ-2025’ | ಜುಲೈ 19

    July 17, 2025

    ಬೆಂಗಳೂರಿನ ಗಾನ ಪಲ್ಲವಿ ಅಡಿಟೋರಿಯಂನಲ್ಲಿ ‘ನುಡಿಗೋಲು 3’ ಕೃತಿ ಲೋಕಾರ್ಪಣೆ ಸಮಾರಂಭ | 19 ಜುಲೈ

    July 16, 2025

    ಸೋಮವಾರಪೇಟೆಯ ಪತ್ರಿಕಾ ಭವನದಲ್ಲಿ ‘ಬೆಳ್ಳಿಗೆಜ್ಜೆ’ ಕೃತಿ ಬಿಡುಗಡೆ | ಜುಲೈ 15

    July 14, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.