ಪುತ್ತೂರು : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ವತಿಯಿಂದ ಬನ್ನೂರು ಕರ್ಮಲದ ಭಾರತೀ ನಗರದ ಶ್ರೀ ಬಲಮುರಿ ವಿದ್ಯಾಗಣಪತಿ ದೇವಸ್ಥಾನದ ವಾರ್ಷಿಕ ಪ್ರತಿಷ್ಠಾವರ್ಧಂತಿ ಉತ್ಸವದ ಅಂಗವಾಗಿ ದಿನಾಂಕ 04 ಮಾರ್ಚ್ 2025ರಂದು ‘ದಕ್ಷಯಾಗ’ ತಾಳಮದ್ದಳೆ ನಡೆಯಿತು.
ಹಿಮ್ಮೇಳದಲ್ಲಿ ತೆಂಕಬೈಲು ಮುರಳೀಕೃಷ್ಣ ಶಾಸ್ತ್ರೀ, ಆನಂದ ಸವಣೂರು, ಪದ್ಯಾಣ ಜಯರಾಮ ಭಟ್, ಮುರಳೀಧರ ಕಲ್ಲೂರಾಯ, ಶರಣ್ಯ ನೆತ್ರಕೆರೆ, ಮಾಸ್ಟರ್ ಅಭಯ ಕೃಷ್ಣ ಸಹಕರಿಸಿದರು. ಮುಮ್ಮೇಳದಲ್ಲಿ ಈಶ್ವರ (ಶುಭಾ ಅಡಿಗ), ದಾಕ್ಷಾಯಿಣಿ (ಕಿಶೋರಿ ದುಗ್ಗಪ್ಪ ನಡುಗಲ್ಲು), ದಕ್ಷ (ಹರಿಣಾಕ್ಷಿ ಜೆ. ಶೆಟ್ಟಿ), ವಿಪ್ರರು (ಗಾಯತ್ರೀ ಹೆಬ್ಬಾರ್), ವೀರಭದ್ರ (ಶಾರದಾ ಅರಸ್), ದೇವೇಂದ್ರ (ಭಾರತೀ ರೈ ಅರಿಯಡ್ಕ) ಸಹಕರಿಸಿದರು. ನಿರ್ದೇಶಕ ಭಾಸ್ಕರ್ ಬಾರ್ಯ ಸ್ವಾಗತಿಸಿ, ಪುಳು ಈಶ್ವರ ಭಟ್ ವಂದಿಸಿದರು. ಶ್ರೀ ದೇವಳದ ವ್ಯವಸ್ಥಾಪಕ ಸುಬ್ರಹ್ಮಣ್ಯ ಭಟ್ ಹಾಗು ಬಡೆಕ್ಕಿಲ ಚಂದ್ರಶೇಖರ್ ಭಟ್ ಸಹಕರಿಸಿದರು.