ಬಂಟ್ವಾಳ : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ವತಿಯಿಂದ ಸೂರಿಕುಮೇರು ಸಮೀಪದ ಬರಿಮಾರು ಶ್ರೀ ಮಹಾಮ್ಮಾಯಿ ದೇವಸ್ಥಾನದ ವಾರ್ಷಿಕ ಜಾತ್ರೆಯ ಅಂಗವಾಗಿ ದ್ವಾವಿಂಶತಿಃ ವರ್ಷದ ತಾಳಮದ್ದಳೆ ಕೂಟ ಶ್ರೀ ಗಣೇಶ್ ಕೊಲೆಕ್ಕಾಡಿ ವಿರಚಿತ ‘ಸಮರ ಸೌಗಂಧಿಕಾ’ ಎಂಬ ಆಖ್ಯಾನದೊಂದಿಗೆ ದಿನಾಂಕ 24 ಫೆಬ್ರವರಿ 2026ರಂದು ನಡೆಯಿತು.
ಹಿಮ್ಮೇಳದಲ್ಲಿ ಹೊಸಮೂಲೆ ಗಣೇಶ್ ಭಟ್, ವರ್ಷಿತ್ ಕಿಜೆಕ್ಕಾರು, ಮುರಳೀಧರ ಕಲ್ಲೂರಾಯ ಕುಂಜೂರು ಪಂಜ ಸಹಕರಿಸಿದರು. ಮುಮ್ಮೇಳದಲ್ಲಿ ಹರಿಣಾಕ್ಷಿ ಜೆ. ಶೆಟ್ಟಿ (ಹನೂಮಂತ), ಕಿಶೋರಿ ದುಗ್ಗಪ್ಪ ನಡುಗಲ್ಲು (ಭೀಮ), ಶಾರದಾ ಅರಸ್ (ಕುಬೇರ), ಭಾರತಿ ರೈ ಅರಿಯಡ್ಕ (ದ್ರೌಪದಿ) ಸಹಕರಿಸಿದರು. ಬೊಳುವಾರು ಬಾಬು ರಾಯ್ ಹೋಟೆಲ್ ಮಾಲಿಕರಾದ ಶಿವಾನಂದ ಪ್ರಭು ದಂಪತಿಗಳು ಪ್ರಾಯೋಜಿಸಿದರು. ಸಂಘದ ನಿರ್ದೇಶಕ ಭಾಸ್ಕರ್ ಬಾರ್ಯ ಸ್ವಾಗತಿಸಿ, ವಂದಿಸಿದರು. ಶ್ರೀ ದೇವಳದ ಧರ್ಮದರ್ಶಿ ಶ್ರೀ ರಾಕೇಶ್ ಪ್ರಭು ದಂಪತಿಗಳು ಕಲಾವಿದರಿಗೆ ಶ್ರೀ ದೇವರ ಪ್ರಸಾದವನ್ನಿತ್ತು ಗೌರವಿಸಿದರು.
