Subscribe to Updates

    Get the latest creative news from FooBar about art, design and business.

    What's Hot

    ಶಿವಪಾಡಿ ವೈಭವದಲ್ಲಿ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ‘ನರ್ತನ 2026’

    February 20, 2026

    ಕೊಂಚಾಡಿಯಲ್ಲಿ ಮಹಿಳಾ ಯಕ್ಷಗಾನ ತಾಳಮದ್ದಳೆ ಅಷ್ಟಾಹದ ಆಮಂತ್ರಣ ಪತ್ರಿಕೆ ಬಿಡುಗಡೆ

    February 20, 2026

    ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಹಿರಿಯ ಕವಿಗಳ ಕವಿಗೋಷ್ಠಿ

    February 20, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕಾಸರಗೋಡಿನ ಎಡನೀರು ಮಠದಲ್ಲಿ ‘ತಲೆಂಗಳ ಶಂಭಟ್ಟ ಪಾರ್ವತಿ ಭಾಗವತ ಪ್ರಶಸ್ತಿ’ ಪ್ರದಾನ ಸಮಾರಂಭ
    Awards

    ಕಾಸರಗೋಡಿನ ಎಡನೀರು ಮಠದಲ್ಲಿ ‘ತಲೆಂಗಳ ಶಂಭಟ್ಟ ಪಾರ್ವತಿ ಭಾಗವತ ಪ್ರಶಸ್ತಿ’ ಪ್ರದಾನ ಸಮಾರಂಭ

    July 30, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email
    ಕಾಸರಗೋಡು : ಪುತ್ತೂರು ಮುರದ ಸತ್ಯಶಾಂತ ಪ್ರತಿಷ್ಠಾನದ ಆಶ್ರಯದಲ್ಲಿ ನೀಡಲಾಗುವ ‘ತಲೆಂಗಳ ಶಂಭಟ್ಟ ಪಾರ್ವತಿ ಭಾಗವತ ಪ್ರಶಸ್ತಿ’ ಪ್ರದಾನ ಸಮಾರಂಭವು 29 ಜುಲೈ2024ರ ಸೋಮವಾರದಂದು ಕಾಸರಗೋಡಿನ ಎಡನೀರು ಮಠದಲ್ಲಿ ನಡೆಯಿತು.
    ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವಚನ ನೀಡಿದ ಎಡನೀರು ಮಠದ ಸಚ್ಚಿದಾನಂದ ಭಾರತಿ ಸ್ವಾಮೀಜಿ “ನಾಡಿನ ಹಿರಿಯ ಕಲಾವಿದರನ್ನು ಗುರುತಿಸಿ ಗೌರವಿಸಬೇಕು. ಇದರಿಂದ ಹೊಸ ಕಲಾವಿದರಿಗೆ ಹಿರಿಯ ಕಲಾವಿದರ ಪರಿಚಯ ಮತ್ತು ಅವರ ಆದರ್ಶಗಳನ್ನು ಅರಿಯಲು ಅವಕಾಶವಾಗುತ್ತದೆ.” ಎಂದು ಹೇಳಿದರು.
    ರಾಜೇಂದ್ರ ಕಲ್ಲೂರಾಯರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಪಾತಾಳ ವೆಂಕಟ್ರಮಣ ಭಟ್ಟ ಇವರಿಗೆ ‘ಶಂಭಟ್ಟ ಪಾರ್ವತಿ ಭಾಗವತ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪುರಸ್ಕೃತರ ಕುರಿತು ಪನೆಯಾಲ ರಾಮಚಂದ್ರ ಭಟ್ ಮಾತನಾಡಿದರು. ಉದಯಶಂಕರ ಭಟ್ ಸನ್ಮಾನ ಪತ್ರ ವಾಚಿಸಿದರು.
    ಯಕ್ಷಗಾನ ಕಲಾವಿದರಾದ ಭಾಸ್ಕರ ಭಾರ್ಯ, ಪಿ. ಜಿ. ಜಗನ್ನಿವಾಸ ರಾವ್, ಜ್ಯೋತಿಷಿ ಕೃಷ್ಣಮೂರ್ತಿ ಪುದುಕೋಳಿ, ಡಾ. ವಿಷ್ಣುಪ್ರಸಾದ್ ಬರೆಕರೆ, ಸತ್ಯಾತ್ಮ ಕುಂಟಿನಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
     ಪ್ರತಿಭಾ ಪುದುಕೋಳಿ ಪ್ರಾರ್ಥಿಸಿ, ಅನುಪಮಾ ರಾಘವೇಂದ್ರ ಉಡುಪುಮೂಲೆ ನಿರೂಪಿಸಿ, ನಾಟ್ಯಗುರು ಸಬ್ಬಣಕೋಡಿ ರಾಮ ಭಟ್ ವಂದಿಸಿದರು. ಸಭಾಕಾರ್ಯಕ್ರಮದ ಬಳಿಕ ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ಮಕ್ಕಳಿಂದ ಯಕ್ಷಗಾನ ಪ್ರದರ್ಶನಗೊಂಡಿತು.

    Share. Facebook Twitter Pinterest LinkedIn Tumblr WhatsApp Email
    Previous Articleಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಾಹಿತಿ ಟಿ. ಪಿ. ಕೈಲಾಸಂ ಅವರ 140ನೆಯ ಜನ್ಮದಿನಾಚರಣೆ 
    Next Article ಸಂದೇಶ ಸಭಾಂಗಣದಲ್ಲಿ ‘ಪಿಂಗಾರ -20’ ಹಾಗೂ ‘ಚಾರೊಳಿ’ 1000ದ ಸಂಭ್ರಮ
    roovari

    Comments are closed.

    Related Posts

    ಕನ್ನಡ ಭವನದಲ್ಲಿ ‘ಕಾಸರಗೋಡು-ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ 2026’ | ಫೆಬ್ರವರಿ 22

    February 20, 2026

    ‘ಸೇವಾ ಭೂಷಣ ಪ್ರಶಸ್ತಿ’ಗೆ ಹಿರಿಯ ಲೇಖಕ ಯು. ಶ್ರೀಧರ್ ಆಯ್ಕೆ

    February 19, 2026

    ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನ ಪ್ರಕಟ

    February 16, 2026

    ಕವಿ ಸುಬ್ರಾಯ ಚೊಕ್ಕಾಡಿಯವರಿಗೆ ಪ್ರೊ. ಎಸ್‌.ವಿ. ಪರಮೇಶ್ವರ ಭಟ್ಟ ಪ್ರಶಸ್ತಿ ಪ್ರದಾನ

    February 16, 2026

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.