ಹುಬ್ಬಳ್ಳಿ : ರಂಗಭೂಮಿಯ ಹಿರಿಯ ಕಲಾವಿದೆ ತೆರೇಸಮ್ಮ ಡಿ’ಸೋಜಾ ಅನಾರೋಗ್ಯದಿಂದ ದಿನಾಂಕ 27 ಏಪ್ರಿಲ್ 2025ರ ಭಾನುವಾರ ಸಂಜೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು.
ರಂಗಭೂಮಿಯ ಖ್ಯಾತ ಕಲಾವಿದೆ ಹೆಲನ್ ಅವರ ತಾಯಿ. ಅಲ್ಲದೆ ತೆರೇಸಮ್ಮ ಅವರ ಪುತ್ರರಾದ ಬಾಬು ಮೈಸೂರು ಹಾಗೂ ಫ್ರಾನ್ಸಿಸ್ ಮೈಸೂರು ರಂಗಭೂಮಿ ಕಲಾವಿದರು. ಇನ್ನೊಬ್ಬ ಪುತ್ರಿ ಗೀತಾ ಖಾಸಗಿ ಉದ್ಯೋಗಿಯಾಗಿದ್ದಾರೆ.
ತೆರೇಸಮ್ಮ ಅವರು ಗುಬ್ಬಿ ವೀರಣ್ಣ, ಎಚ್. ಕೆ. ಯೋಗಾನರಸಿಂಹ, ಸುಳ್ಳದ ದೇಸಾಯಿ ಅವರ ಕಂಪನಿಗಳಲ್ಲಿ ಕಲಾವಿದೆಯಾಗಿದ್ದರು. ‘ಹರಕೆ’, ‘ಕರಿಮಾಯಿ’, ‘ನೆಂಟರು ಗಂಟು ಕಳ್ಳರು’, ‘ಮಾಗಿಯ ಕನಸು’, ‘ಹುಲಿ ಹೆಜ್ಜೆ’, ‘ಪಡುವಾರಳ್ಳಿ ಪಾಂಡವರು’, ‘ಅಮೃತ ಘಳಿಗೆ’, ‘ಸಂಗ್ಯಾಬಾಳ್ಯಾ’, ‘ಸಿಂಧೂರ ಲಕ್ಷ್ಮಣ’, ‘ಪತಿತ ಪಾವನಿ’ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದರು. ಇವರು ಹುಟ್ಟಿದ್ದು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬೊಮ್ಮನಹಳ್ಳಿ ಎಂಬ ಪುಟ್ಟ ಗ್ರಾಮದಲ್ಲಿ. 1971ರಲ್ಲಿ ಹುಬ್ಬಳ್ಳಿಯಲ್ಲಿ ನೆಲೆಸಿದರು. ಉತ್ತರ ಕರ್ನಾಟಕದಲ್ಲಿ ಮಹಿಳಾ ನಾಟಕ ತಂಡವನ್ನು ಕಟ್ಟಿದ ಪ್ರಥಮ ಕಲಾವಿದೆ ಇವರು ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕಿತ್ತೂರು ಚೆನ್ನಮ್ಮ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತರಾಗಿದ್ದರು.
Subscribe to Updates
Get the latest creative news from FooBar about art, design and business.