ಪುತ್ತೂರು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಕೊಡಮಾಡುವ 2023-24 ಮತ್ತು 2024-25ನೇ ಸಾಲಿನ ಶಿಷ್ಯ ವೇತನಕ್ಕೆ ನೃತ್ಯದ ಭರತನಾಟ್ಯ ವಿಭಾಗದಲ್ಲಿ ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿಯ ಮೂರು ಮಂದಿ ವಿದ್ಯಾರ್ಥಿಗಳಾದ ತನುವಿ, ಸಿಂಚನಾ ಭಟ್ ಹಾಗೂ ತೇಜಸ್ವಿರಾಜ್ ಆಯ್ಕೆಯಾಗಿದ್ದಾರೆ.ಇವರುಗಳು ನೃತ್ಯ ಗುರು, ವಿದುಷಿ ಶಾಲಿನಿ ಆತ್ಮಭೂಷಣ್ ಇವರಲ್ಲಿ ನೃತ್ಯಾಭ್ಯಾಸ ನಡೆಸುತ್ತಿದ್ದಾರೆ.
ತನುವಿ ಇವರು ಉಪ್ಪಿನಂಗಡಿ ನಿವಾಸಿಯಾಗಿದ್ದು, ಶ್ರೀಮತಿ ಮತ್ತು ಶ್ರೀ ಯೋಗಾನಂದ ಮತ್ತು ಸುನೀತಾ ದಂಪತಿಯ ಪುತ್ರಿಯಾಗಿದ್ದಾರೆ. ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪ್ರಥಮ ವರ್ಷ ಬಿ. ಸಿ. ಎ. ವ್ಯಾಸಂಗ ಮಾಡುತ್ತಿದ್ದು, ಕಳೆದ 15 ವರ್ಷಗಳಿಂದ ಈ ಕೇಂದ್ರದಲ್ಲಿ ನೃತ್ಯ ಕಲಿಯುತ್ತಿದ್ದಾರೆ. ಭಾರತನಾಟ್ಯದಲ್ಲಿ ಸೀನಿಯರ್ ಆಗಿ ಈಗ ವಿದ್ವತ್ ಪೂರ್ವ ಪರೀಕ್ಷೆ ಬರೆದಿದ್ದಾರೆ.
ಸಿಂಚನಾ ಎಸ್. ಭಟ್ ಮಾಣಿಯ ನೇರಳಕಟ್ಟೆ ನಿವಾಸಿಯಾಗಿದ್ದು, ಶ್ರೀಮತಿ ಮತ್ತು ಶ್ರೀ ಶಂಕರನಾರಾಯಣ ಭಟ್ ಮತ್ತು ಪಾವನಾ ಎಸ್. ಭಟ್ ದಂಪತಿಯ ಪುತ್ರಿಯಾಗಿದ್ದಾರೆ. ಮಂಗಳೂರಿನ ವಳಚ್ಚಿಲ್ ಇಲ್ಲಿನ ಶ್ರೀನಿವಾಸ ಫಾರ್ಮಸಿ ವಿದ್ಯಾಲಯದಲ್ಲಿ ಪ್ರಥಮ ಸ್ನಾತಕೋತ್ತರ ಫಾರ್ಮಾ ಕಲಿಯುತ್ತಿದ್ದಾರೆ. ಭರತನಾಟ್ಯದಲ್ಲಿ ಸೀನಿಯರ್ ಪದವಿ ಪಡೆದಿರುವ ಇವರು ಈ ಕಲಾಕೇಂದ್ರದಲ್ಲಿ ಸುಮಾರು 10 ವರ್ಷಗಳಿಂದ ನೃತ್ಯ ಕಲಿಯುತ್ತಿದ್ದಾರೆ.
ದಿ.ಶಾಂತರಾಮ ಗೌಡ ಮತ್ತು ಶ್ರೀಮತಿ ಲಕ್ಷ್ಮೀ ದಂಪತಿಯ ಪುತ್ರರಾಗಿರುವ ತೇಜಸ್‌ರಾಜ್ ಇವರು ಕಡಬದ ನಿವಾಸಿಯಾಗಿದ್ದಾರೆ. ಪುತ್ತೂರಿನ ಫಿಲೋಮಿನಾ ಕಾಲೇಜಿನಲ್ಲಿ ಪದವಿ ಬಳಿಕ ಈಗ ಚಾರ್ಟೆಡ್ ಎಕೌಂಟ್ಸ್ ನಲ್ಲಿ ಇಂಟರ್ ಮೀಡಿಯೇಟ್ ಉತ್ತೀರ್ಣರಾಗಿದ್ದಾರೆ. ಭರತನಾಟ್ಯದಲ್ಲಿ ಸೀನಿಯರ್ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಈ ಕಲಾ ಕೇಂದ್ರದ ನೃತ್ಯ ವಿದ್ಯಾರ್ಥಿಯಾಗಿದ್ದಾರೆ.