ಬೆಂಗಳೂರು : ತೊ. ನಂಜುಂಡಸ್ವಾಮಿ ಗೆಳೆಯರ ಬಳಗ ಇದರ ವತಿಯಿಂದ ತೊ. ನಂಜುಂಡಸ್ವಾಮಿ ನೆನೆಪಿನ ಪ್ರಶಸ್ತಿ ಪ್ರದಾನ ಸಮಾರಂಭ 2025’ವನ್ನು ದಿನಾಂಕ 10 ಫೆಬ್ರವರಿ 2025ರಂದು ಸಂಜೆ 5-30 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ಹಮ್ಮಿಕೊಳ್ಳಲಾಗಿದೆ.
ರಂಗ ಸಂಘಟಕರು, ರಂಗ ನಿರ್ದೇಶಕರು ಸಮಾಜ ಸೇವಕರಾದ ಶ್ರೀ ಪ್ರಭು ಗುರಪ್ಪನವರ ಇವರಿಗೆ ಮೂರನೇ ವರುಷದ ತೊ. ನಂಜುಂಡಸ್ವಾಮಿ ನೆನೆಪಿನ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಕೆ.ವಿ. ನಾಗರಾಜ ಮೂರ್ತಿಯವರು ವಹಿಸಲಿರುವರು. ಆನಂದ್ ಮಾಲೂರು ಮತ್ತು ತಂಡದವರಿಂದ ಅಂಬೇಡ್ಕರ್ ಹಾಗೂ ಸಂವಿಧಾನ ಗಾಯನ ಕಾರ್ಯಕ್ರಮ ಮತ್ತು ಲಹರಿ ಭಾರೀಘಾಟ್ ಇವರ ಪರಿಕಲ್ಪನೆ ಮತ್ತು ವಿನ್ಯಾಸದಲ್ಲಿ ಸಹಚಾರಿ ತಂಡದವರಿಂದ ‘ಶಾಂತಿ ಮತ್ತು ಪ್ರೀತಿಗಾಗಿ’ ಭರತನಾಟ್ಯ ಪ್ರಸ್ತುತಗೊಳ್ಳಲಿದೆ.