ಮಂಗಳೂರು : ಸಂತ ಆಗ್ನೆಸ್ ಕಾಲೇಜು (ಸ್ವಾಯತ್ತ) ಮಂಗಳೂರು, ಗ್ರಂಥಾಲಯ ವಿಭಾಗ ಮತ್ತು ಕನ್ನಡ ವಿಭಾಗದ ವತಿಯಿಂದ ಡಾ. ಎಸ್.ಎಲ್. ಭೈರಪ್ಪನವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ದಿನಾಂಕ 26 ಸೆಪ್ಟೆಂಬರ್ 2025ರಂದು ನಡೆಯಿತು.
ಪ್ರಾಂಶುಪಾಲರಾದ ಸಿಸ್ಟರ್ ಡಾ. ಎಂ. ವೆನಿಸ್ಸಾ ಎ.ಸಿ. ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾರಂಭದಲ್ಲಿ ಭೈರಪ್ಪನವರ ಭಾವಚಿತ್ರಕ್ಕೆ ಪುಷ್ಪಗಳನ್ನು ಅರ್ಪಿಸಿ ಗೌರವಾರ್ಪಣೆ ಮಾಡಲಾಯಿತು. “ಸರಳ ವ್ಯಕ್ತಿತ್ವ ಮನುಷ್ಯರನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ. ಇದಕ್ಕೆ ಭೈರಪ್ಪನವರು ಉತ್ತಮ ಉದಾಹರಣೆ” ಎಂದು ಪ್ರಾಂಶುಪಾಲರು ನುಡಿನಮನಗಳನ್ನು ಅರ್ಪಿಸಿದರು. ಕನ್ನಡ ವಿಭಾಗದ ಡಾ. ಶೈಲಜಾ ಕೆ. ಇವರು ಭೈರಪ್ಪನವರ ಜೀವನ ಮತ್ತು ಸಾಹಿತ್ಯ ಸೇವೆಯನ್ನು ಕುರಿತು ಮಾತನಾಡಿದರು. ಪ್ರಥಮ ಬಿ.ಕಾಂ. ವಿದ್ಯಾರ್ಥಿನಿ ಅನುಶ್ರೀಯವರು ತಾವು ಓದಿದ ಭೈರಪ್ಪನವರ ಕೃತಿಗಳ ಬಗ್ಗೆ ವಿವರಿಸಿ, ಅವರ ವಿಶೇಷ ವ್ಯಕ್ತಿತ್ವ ಕುರಿತು ವಿವರಿಸಿದರು.
ಗ್ರಂಥಪಾಲಕಿಯಾದ ಡಾ. ವಿಶಾಲಾ ಬಿ.ಕೆ.ಯವರು ಮಾತನಾಡಿ “ಭೈರಪ್ಪನರಂತ ಸಾಹಿತಿಗಳಿಂದಾಗಿ ಕನ್ನಡ ಸಾಹಿತ್ಯ ಲೋಕ ಉತ್ತುಂಗಕ್ಕೇರಲು ಸಾಧ್ಯವಾಯಿತು” ಎಂದರು. ಕನ್ನಡ ವಿಭಾಗದ ಡಾ. ಬಸ್ತಿಯಂ ಪಾಯ್ಸ್ ಕಾರ್ಯಕ್ರಮ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಶ್ರೀಯುತ ಕ್ಲೆಮೆಂಟ್ ಡಿಸೋಜಾ, ಗ್ರಂಥಾಲಯ ಸಿಬಂಧಿಗಳು ಹಾಗೂ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.