ಸಾಲಿಗ್ರಾಮ : ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ – ಐರೋಡಿ ಇದರ ವತಿಯಿಂದ ‘ತ್ರಿಕೂಟ ಯಕ್ಷ ಸಂಭ್ರಮ’ವನ್ನು ದಿನಾಂಕ 20ರಿಂದ 22 ಮಾರ್ಚ್ 2025ರಂದು ಸಂಜೆ 6-00 ಗಂಟೆಗೆ ಗುಂಡ್ಮಿ-ಸಾಲಿಗ್ರಾಮದ ಸದಾನಂದ ರಂಗ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 20 ಮಾರ್ಚ್ 2025ರಂದು ಶ್ರೀ ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ ಕೊಂಡದಕುಳಿ ಕುಂಭಾಶಿ ಇವರಿಂದ ‘ಧರ್ಮಾಂದ ದಿಗ್ವಿಜಯ’, ದಿನಾಂಕ 21 ಮಾರ್ಚ್ 2025ರಂದು ಮಯ್ಯ ಯಕ್ಷ ಬಳಗ ಹಾಲಾಡಿ ಇವರಿಂದ ‘ಭೀಷ್ಮ ವಿಜಯ’, ದಿನಾಂಕ 22 ಮಾರ್ಚ್ 2025ರಂದು ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ – ಐರೋಡಿ ಇವರಿಂದ ‘ಅನುಸಾಲ್ವ ಗರ್ವಭಂಗ’ ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.