ಉಡುಪಿ : ತುಳುಕೂಟ ಉಡುಪಿ (ರಿ.) ಇದರ ವತಿಯಿಂದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇವರ ಸಹಯೋಗದೊಂದಿಗೆ ಕೆಮ್ತೂರು ದೊಡ್ಡಣ್ಣ ಶೆಟ್ಟಿ ಇವರ ಸ್ಮರಣಾರ್ಥ ‘ತುಳು ನಾಟಕ ಹಬ್ಬ’ ಕಾರ್ಯಕ್ರಮವನ್ನು ದಿನಾಂಕ 05 ಜನವರಿ 2025ರಿಂದ 10 ಜನವರಿ 2025ರವೆರೆಗೆ ಪ್ರತಿದಿನ ಸಂಜೆ 6-30 ಗಂಟೆಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 05 ಜನವರಿ 2025ರಂದು ಸಂಜೆ 5-00 ಗಂಟೆಗೆ ತುಳುಕೂಟದ ಅಧ್ಯಕ್ಷರಾದ ಶ್ರೀ ಬಿ. ಜಯಕರ ಶೆಟ್ಟಿ ಇಂದ್ರಾಳಿ ಇವರ ಅಧ್ಯಕ್ಷತೆಯಲ್ಲಿ ಶಾಸಕರಾದ ಶ್ರೀ ಯಶ್ ಪಾಲ್ ಎ. ಸುವರ್ಣ ಇವರು ಈ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಇವರಿಂದ ರವಿರಾಜ್ ಎಚ್.ಪಿ. ನಿರ್ದೇಶನದಲ್ಲಿ ‘ತುದೆ ದಾಂಟಿ ಬೊಕ್ಕ’ ನಾಟಕ ಪ್ರದರ್ಶನ, ದಿನಾಂಕ 06 ಜನವರಿ 2025ರಂದು ಉಡುಪಿ ಮಲ್ಪೆಯ ಕರಾವಳಿ ಕಲಾವಿದರು (ರಿ.) ಇವರಿಂದ ಅಕ್ಷಯ್ ಆರ್. ಶೆಟ್ಟಿ ರಚಿಸಿರುವ ನಾಗರಾಜ್ ವರ್ಕಾಡಿ ನಿರ್ದೇಶನದಲ್ಲಿ ‘ಪೆರ್ಗ’, ದಿನಾಂಕ 07 ಜನವರಿ 2025ರಂದು ಪಟ್ಲದ ಭೂಮಿಗೀತ ಸಾಂಸ್ಕೃತಿಕ ವೇದಿಕೆ ಇವರಿಂದ ಸಂತೋಷ್ ನಾಯಕ್ ಪಟ್ಲ ಇವರ ನಿರ್ದೇಶನದಲ್ಲಿ ‘ದಿ ಫೈಯರ್’, ದಿನಾಂಕ 08 ಜನವರಿ 2025ರಂದು ಸುಮನಸಾ ಕೊಡವೂರು ಉಡುಪಿ (ರಿ.) ಇವರಿಂದ ವಿದ್ದು ಉಚ್ಚಿಲ್ ನಿರ್ದೇಶನದಲ್ಲಿ ‘ಈದಿ’, ದಿನಾಂಕ 09 ಜನವರಿ 2025ರಂದು ಮುಂಬಯಿಯ ರಂಗ ಮಿಲನ ತಂಡದವರಿಂದ ಮನೋಹರ ಶೆಟ್ಟಿ ನಂದಳಿಕೆ ಇವರ ನಿರ್ದೇಶನದಲ್ಲಿ ‘ಸೋಕ್ರಟಿಸ್’, ದಿನಾಂಕ 10 ಜನವರಿ 2025ರಂದು ಹಾರಾಡಿಯ ಭೂಮಿಕಾ (ರಿ.) ತಂಡದವರಿಂದ ಬಿ.ಎಸ್. ರಾಮ್ ಶೆಟ್ಟಿ ಹಾರಾಡಿ ಇವರ ನಿರ್ದೇಶನದಲ್ಲಿ ‘ಪೊರ್ತು ಕಂತಿನೆಡ್ದ್ ಪೊರ್ತು ಉದಿಪುನೇಟ’ ಎಂಬ ನಾಟಕಗಳ ಪ್ರದರ್ಶನ ನಡೆಯಲಿದೆ.