ಕೊಣಾಜೆ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಹಿರಿಯ ತುಳು ಸಾಹಿತಿ, ನಿವೃತ್ತ ಉಪನ್ಯಾಸಕ ಕೆ. ಟಿ. ಆಳ್ವ ಇವರಿಗೆ ಚಾವಡಿ ತಮ್ಮನದ ಗೌರವ ಸಮರ್ಪಣೆಯ ಕಾರ್ಯಕ್ರಮವು ದಿನಾಂಕ 26 ಏಪ್ರಿಲ್ 2025ರಂದು ಸಂಜೆ ಘಂಟೆ 4.00ಕ್ಕೆ ಮುಡಿಪು ಪಜೀರು ಗ್ರಾಮದ ರಾಮ್ ಬಾಗ್‌ನಲ್ಲಿ ನಡೆಯಲಿದೆ.
ಸುದೀರ್ಘ ಕಾಲ ಸರಕಾರಿ ಪ. ಪೂ. ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಕುದುರೆಪ್ಪಾಡಿ ತಿಮ್ಮಣ್ಣ ಆಳ್ವ (ಕೆ. ಟಿ. ಆಳ್ವ) ‘ತುಳುನಾಡ ತುಡರ್’, ‘ತುಳು ಭಾಷೆದ ತಿರ್ಲ್ ‘ ಎಂಬ ಕೃತಿಯನ್ನು ಹೊರ ತಂದಿದ್ದಾರೆ. ತುಳು ಸಂಸ್ಕೃತಿ, ಭಾಷೆ, ಜನಪದ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಅನೇಕ ಲೇಖನಗಳ ಪ್ರಕಟಿಸಿದ್ದಾರೆ.
ಮಡಿಪು ಸರಕಾರಿ ಪದವಿ ಪೂರ್ವ ಕಾಲೇಜು ಹಳೆ ವಿದ್ಯಾರ್ಥಿ ಬಳಗದ ಸಹಯೋಗದಲ್ಲಿ ನಡೆಯುವ ಈ ಚಾವಡಿ ತಮ್ಮನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಳು ಅಕಾಡೆಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ವಹಿಸುವರು. ಪಜೀರ್ ಗ್ರಾ.ಪಂ. ಅಧ್ಯಕ್ಷ ರಫೀಕ್ ಪಜೀರ್ ಅತಿಥಿಯಾಗಿರುವರು. ಪತ್ರಕರ್ತ ಶಶಿಧರ ಪೊಯ್ಯತ್ತಬೈಲ್ ಅಭಿನಂದನಾ ಭಾಷಣ ಮಾಡಲಿರುವರು.
Subscribe to Updates
Get the latest creative news from FooBar about art, design and business.
ಸಾಹಿತಿ ಕೆ. ಟಿ. ಆಳ್ವರಿಗೆ ತುಳು ಸಾಹಿತ್ಯ ಅಕಾಡೆಮಿಯ ಚಾವಡಿ ತಮ್ಮನ | ಏಪ್ರಿಲ್ 26
No Comments1 Min Read
Previous Article‘ಕಾಸರಗೋಡು ಜಿಲ್ಲಾ ಚುಟುಕು ಕಾವ್ಯ ಪ್ರಶಸ್ತಿ – 2025’ ಪ್ರಕಟ
Next Article ಪೆರ್ಲದಲ್ಲಿ ಕವಿ ಕಾವ್ಯ ಸಂವಾದ | ಏಪ್ರಿಲ್ 26