ಮಂಗಳೂರು : ಶ್ರೀ ಶನೈಶ್ಚರ ದೇವಸ್ಥಾನ ಬಜ್ಪೆ ಇದರ ವಾರ್ಷಿಕ ಜಾತ್ರಾ ಮಹೋತ್ಸವವು ದಿನಾಂಕ 06-01-2024ರಂದು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಇದೇ ಸಂದರ್ಭದಲ್ಲಿ ಅಪರಾಹ್ನ 2 ಗಂಟೆಯಿಂದ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹಾಗೂ ಬಳಗದವರಿಂದ ‘ಶ್ರೀ ಶನೈಶ್ಚರ ಮಹಾತ್ಮೆ – ವಿಕ್ರಮಾದಿತ್ಯ ಚರಿತ್ರೆ’ ಎಂಬ ತುಳು ಯಕ್ಷಗಾನ ತಾಳಮದ್ದಳೆಯನ್ನು ಏರ್ಪಡಿಸಲಾಗಿದೆ.
ಹಿಮ್ಮೇಳದಲ್ಲಿ ಭಾಗವತರು ತೋನ್ಸೆ ಪುಷ್ಕಳ ಕುಮಾರ್ ಮತ್ತು ಪ್ರಶಾಂತ ರೈ ಪುತ್ತೂರು, ಮೃದಂಗದಲ್ಲಿ ರೋಹಿತ್ ಉಚ್ಚಿಲ್ ಹಾಗೂ ಚೆಂಡೆಯಲ್ಲಿ ಜಿತೇಶ್ ಕೋಳ್ಯೂರು ಸಹಕರಿಸಲಿರುವರು. ಭಾಸ್ಕರ ರೈ ಕುಕ್ಕುವಳ್ಳಿ, ವಸಂತ ದೇವಾಡಿಗ, ಪಶುಪತಿ ಶಾಸ್ತ್ರಿ ಶಿರಂಕಲ್ಲು, ರವಿ ಅಲೆವೂರಾಯ ವರ್ಕಾಡಿ, ಡಾ. ದಿನಕರ ಎಸ್.ಪಚ್ಚನಾಡಿ ಅರ್ಥಧಾರಿಗಳಾಗಿ ಭಾಗವಹಿಸಲಿರುವರು. ವಾರ್ಷಿಕ ಪೂಜಾ ವಿಧಿಗಳನ್ನು ರಾಜೇಂದ್ರ ಪ್ರಸಾದ್ ಎಕ್ಕಾರ್, ಅಭಿಜಿತ್ ಆನಂದ ಭಟ್ ಅವರ ನೇತೃತ್ವದಲ್ಲಿ ರವಿ ಶಾಂತಿ, ಶ್ರೀಧರ ಶಾಂತಿ, ಯಶೋಧರ ಶಾಂತಿ, ಜಗದೀಶ ಶಾಂತಿ ಮೊದಲಾದ ಅರ್ಚಕ ವೃಂದದವರು ನಡೆಸಿ ಕೊಡಲಿದ್ದಾರೆ.