ಮಂಗಳೂರು : ತುಳು ಕೂಟ ಕುಡ್ಲ ಇದರ ‘ಬಂಗಾರ ಪರ್ಬ’ ಸರಣಿ ಕಾರ್ಯಕ್ರಮವು ಶ್ರೀ ಕ್ಷೇತ್ರ ಶರವು ದೇವಾಲಯದ ಸಭಾಂಗಣದಲ್ಲಿ ದಿನಾಂಕ 29-07-2023ನೇ ಶುಕ್ರವಾರ ಸಂಜೆ 4 ಗಂಟೆಗೆ ನಡೆಯಲಿದೆ.
ಶ್ರೀ ಕ್ಷೇತ್ರ ಶರವು ದೇವಾಲಯದ ಶಿಲೆ ಶಿಲೆ ಮೊಕ್ತೇಸರರಾದ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ತುಳು ಕೂಟದ ಅಧ್ಯಕ್ಷರಾದ ಶ್ರೀ ಬಿ.ದಾಮೋದರ ನಿಸರ್ಗ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ನಿನ ಅಧ್ಯಕ್ಷರು, ಅಖಿಲ ಭಾರತ ತುಳು ಒಕ್ಕೂಟದ ಉಪಾಧ್ಯಕ್ಷರು ಹಾಗೂ ಒಡಿಯೂರು ಸೇವಾ ಬಳಗದ ಕಾರ್ಯಾಧ್ಯಕ್ಷರಾದ ಶ್ರೀ ತಾರಾನಾಥ ಶೆಟ್ಟಿ ಬೋಳಾರ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘ(ನಿ.)ದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ ಮತ್ತು ಕ.ಸಾ.ಪ.ದ ಮಾಜಿ ರಾಜ್ಯಾಧ್ಯಕ್ಷರಾದ ಶ್ರೀ ಹರಿಕೃಷ್ಣ ಪುನರೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
‘ದೇವಕೀ ತನಯ’, ಹಿರಿಯ ನ್ಯಾಯವಾದಿಗಳು ಮತ್ತು ಹರಿಕಥಾ ಪರಿಷತ್ತಿನ ಅಧ್ಯಕ್ಷರೂ ಆದ ಶ್ರೀ ಮಹಾಬಲ ಶೆಟ್ಟಿ ಕೂಡ್ಲು ‘ತುಳು ಹರಿಕಥೆ ಸಾಹಿತ್ಯ’ದ ಪರಿಚಯ ಮಾಡಿಕೊಡಲಿದ್ದು, ಹರಿದಾಸರಾದ ಶ್ರೀ ಪುಷ್ಕಳ್ ಕುಮಾರ್ ತೋನ್ಸೆ ಇವರು ‘ಸೀತೆನ ಮದ್ಮೆ’ ಎಂಬ ಕಥಾಕೀರ್ತನೆ ಮಾಡುವರು. ಕಲಾವಿದರೂ ಯಕ್ಷಗಾನ ಅಕಾಡಮಿಯ ಮಾಜಿ ಸದಸ್ಯರೂ ಆದ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ‘ತುಳು ತಾಳಮದ್ದಳೆ’ಯ ಪರಿಚಯವನ್ನು ಮಾಡಲಿದ್ದಾರೆ.
ಮತ್ತೆ ನಡೆಯುವ ‘ಕಾರ್ನಿಕದ ಕೊರಗಜ್ಜೆ’ ತಾಳಮದ್ದಳೆಯ ಹಿಮ್ಮೇಳದಲ್ಲಿ ಶ್ರೀ ಅಶೋಕ್ ಬೋಳೂರು ಮತ್ತು ಬಳಗದವರು ಹಾಗೂ ಮುಮ್ಮೇಳದಲ್ಲಿ ಶ್ರೀ ದಯಾನಂದ ಕತ್ತಲ್ಸಾರ್, ಶ್ರೀ ಸದಾಶಿವ ಆಳ್ವ ತಲಪಾಡಿ ಮತ್ತು ಶ್ರೀ ಪುಷ್ಪರಾಜ ಕುಕ್ಕಾಜೆ ಸಹಕರಿಸಲಿರುವರು. ತುಳು ಕೂಟದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ತಮ್ಮೆಲ್ಲರಿಗೂ ಆದರದ ಸ್ವಾಗತ ಬಯಸಿದ್ದಾರೆ.