ಬಂಟ್ವಾಳ : ತುಳು ಕೂಟ ಬಂಟ್ವಾಳ ಇದರ ಆಶ್ರಯದಲ್ಲಿ ‘ತುಳುವೆರೆನ ತುಳುನಾಡ ಸಂತೆ’ ತುಳು ಸಾಹಿತ್ಯ ಸಾಂಸ್ಕೃತಿಕ ರಂಗ ಕಾರ್ಯಕ್ರಮವನ್ನು ದಿನಾಂಕ 20, 21 ಮತ್ತು 22 ಜೂನ್ 2025ರಂದು ಬಿ.ಸಿ. ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ವಿಚಾರ ಗೋಷ್ಠಿಗಳು, ಬಹುಭಾಷಾ ಕವಿಗೋಷ್ಠಿ, ಸ್ಪರ್ಧೆಗಳು, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ರಂಗಿನಲ್ಲಿ ತುಳು ಪದ ರಂಗಿತ, ಯಕ್ಷ ನೃತ್ಯ ರೂಪಕ, ತುಳು ನಾಟಕ, ಹಾಸ್ಯ, ಮಿಮಿಕ್ರಿ ಮತ್ತು ಪ್ರಹಸನ ಪ್ರದರ್ಶನಗೊಳ್ಳಲಿದೆ.