ಮಂಜೇಶ್ವರ : ಅಸೋಸಿಯೇಶನ್ ಆಫ್ ದಿ ಎಮರ್ಜೆನ್ಸಿ ವಿಕ್ಟಿಮ್ಸ್ ಕಾಸರಗೋಡು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ವಿ.ರವೀಂದ್ರನ್ ಕುಂಬಳೆ ಬರೆದಿರುವ ‘ತುರ್ತು ಪರಿಸ್ಥಿತಿಯ ಕರಾಳ ದಿನಗಳು’ ಪುಸ್ತಕದ ಕನ್ನಡ ಆವೃತ್ತಿಯ ಬಿಡುಗಡೆ ಸಮಾರಂಭವು ಹೊಸಂಗಡಿಯ ಪ್ರೇರಣಾ ಸಭಾಂಗಣದಲ್ಲಿ ದಿನಾಂಕ 06-08-2023ರಂದು ಬೆಳಗ್ಗೆ 10 ಗಂಟೆಗೆ ಜರಗಲಿದೆ.
ಕೇಂದ್ರದ ಮಾಜಿ ಸಚಿವ ಮತ್ತು ಹಾಲಿ ಸಂಸದ ಶ್ರೀ ಡಿ.ವಿ.ಸದಾನಂದ ಗೌಡ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಲಿರುವರು. ಖ್ಯಾತ ವೈದ್ಯ, ಸಾಹಿತಿ ಡಾ. ರಮಾನಂದ ಬನಾರಿ ಮಂಜೇಶ್ವರ ಅಧ್ಯಕ್ಷತೆ ವಹಿಸಲಿದ್ದು, ನಿವೃತ್ತ ಪ್ರಾಧ್ಯಾಪಿಕೆ ಡಾ. ಪ್ರಮೀಳಾ ಮಾಧವ್ ಪುಸ್ತಕವನ್ನು ಪರಿಚಯಿಸುವರು. ಕೃತಿಕಾರ ಶ್ರೀ ವಿ.ರವೀಂದ್ರನ್ ಕುಂಬಳೆ ಲೇಖಕರ ಮಾತುಗಳನ್ನಾಡುವರು. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಶ್ರೀ ಪಿ.ಕೆ.ಕೃಷ್ಣದಾಸ್ ಪುಸ್ತಕವನ್ನು ಬಿಡುಗಡೆಗೊಳಿಸಲಿದ್ದು, ತುರ್ತು ಪರಿಸ್ಥಿತಿ ಸಂತ್ರಸ್ತ ಶ್ರೀ ಎಂ.ಕೆ.ಭಟ್ ಕಾಯರ್‌ಕಟ್ಟೆ ಪುಸ್ತಕವನ್ನು ಸ್ವೀಕರಿಸುವರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಆಮಂತ್ರಿತ ಸದಸ್ಯ ಶ್ರೀ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಪ್ರಧಾನ ಭಾಷಣ ಮಾಡುವರು. ಈ ಸಂದರ್ಭದಲ್ಲಿ ವಿವಿಧ ವಲಯಗಳ ಪ್ರಮುಖರಾದ ಶ್ರೀ ರವೀಶ ತಂತ್ರಿ ಕುಂಟಾರು, ಪ್ರೊ.ಪಿ.ನಾರಾಯಣ ಮೂಡಿತ್ತಾಯ, ಶ್ರೀ ಜಯದೇವ ಖಂಡಿಗೆ, ಶ್ರೀ ಎಂ.ಸಂಜೀವ ಶೆಟ್ಟಿ ಮೊಟ್ಟೆಕುಂಜ, ಶ್ರೀ ಆರ್.ಮೋಹನನ್ ಮೊದಲಾದವರು ಶುಭಹಾರೈಸುವರು. ಶ್ರೀ ಎಂ.ಹರಿಶ್ಚಂದ್ರ ಮಂಜೇಶ್ವರ ಹಾಗೂ ಶ್ರೀ ಮಹಾಬಲ ರೈ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ.