Subscribe to Updates

    Get the latest creative news from FooBar about art, design and business.

    What's Hot

    ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್‌ನ ಪ್ರಥಮ ವಾರ್ಷಿಕೋತ್ಸವ ಸಮಾರಂಭ

    February 26, 2026

    ಉಷಾ ಕೆ.ವಿ. ಇವರ ‘ವೇದಾಂತ’ ಹಾಗೂ ‘ಸ್ಪಂದನ’ ಕೃತಿಗಳ ಲೋಕಾರ್ಪಣಾ ಸಮಾರಂಭ

    February 26, 2026

    ಸುಮನಸಾ ಕೊಡವೂರು ನಾಟಕೋತ್ಸವ ರಂಗಹಬ್ಬ-14ರ ಎರಡನೇ ದಿನದ ಕಾರ್ಯಕ್ರಮ

    February 26, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಉಡುಪಿಯಲ್ಲಿ 2 ದಿನಗಳ ರಂಗ ತರಬೇತಿ ಸರಣಿಯ 13ನೇ ಶಿಬಿರ | ಅಕ್ಟೋಬರ್ 14 ಮತ್ತು 15
    Camp

    ಉಡುಪಿಯಲ್ಲಿ 2 ದಿನಗಳ ರಂಗ ತರಬೇತಿ ಸರಣಿಯ 13ನೇ ಶಿಬಿರ | ಅಕ್ಟೋಬರ್ 14 ಮತ್ತು 15

    October 4, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ರಂಗಭೂಮಿ (ರಿ.) ಉಡುಪಿ ಆಯೋಜಿಸುತ್ತಿರುವ 2 ದಿನಗಳ ವಿವಿಧ ರಂಗ ತರಬೇತಿಯ ಸರಣಿ ಕಾರ್ಯಾಗಾರದ 13ನೇ ಶಿಬಿರವು
    ದಿನಾಂಕ 14-10-2023ನೇ ಶನಿವಾರ ಹಾಗೂ 15-10-2023ನೇ ಭಾನುವಾರ ಬೆಳಿಗ್ಗೆ 9.00 ರಿಂದ ಸಂಜೆ 7.00ರ ವರೆಗೆ ಉಡುಪಿಯ ಎಂ.ಜಿ.ಎಂ ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ನಡೆಯಲಿದೆ.

    ರಂಗಭೂಮಿ (ರಿ.) ಉಡುಪಿ ಉಡುಪಿಯಲ್ಲಿ 2021ರ ಅಕ್ಟೋಬರ್‌ನಿಂದ ಪ್ರತೀ ತಿಂಗಳ 2ನೇ ಯಾ 3ನೇ ವಾರಾಂತ್ಯದಲ್ಲಿ
    ರಾಜ್ಯದ ಹಲವಾರು ಹೆಸರಾಂತ ರಂಗಕರ್ಮಿಗಳ ಸಹಕಾರದೊಂದಿಗೆ 2 ದಿನಗಳ ವಿವಿಧ ರಂಗ ತರಬೇತಿಯ ಸರಣಿ ಕಾರ್ಯಾಗಾರವನ್ನು
    ಆಯೋಜಿಸುತ್ತಿದೆ. ಈ ಬಾರಿ ಹೆಸರಾಂತ ನಿರ್ದೇಶಕ ಮತ್ತು ತಂತ್ರಜ್ಞ ನೀನಾಸಂ ಪದವೀಧರರಾದ ಶ್ರೀ ರಿಯಾಜ್ ಸಿಹಿಮೊಗೆ ಹಾಗೂ ಹೆಸರಾಂತ ನಿರ್ದೇಶಕಿ, ತಂತ್ರಜ್ಞೆ ಮತ್ತು ಎನ್.ಎಸ್.ಡಿ. ಪದವೀಧರೆಯಾದ ಡಾ. ಸಹನ ಪಿಂಜಾರ್ ಈ ಶಿಬಿರವನ್ನು ನಡೆಸಿಕೊಡಲಿದ್ದಾರೆ.

    ಶ್ರೀ ರಿಯಾಜ್ ಸಿಹಿಮೊಗೆ:
    ನೀನಾಸಂ ರಂಗ ಶಿಕ್ಷಣ ಕೇಂದ್ರ ಪದವೀಧರರಾದ ಇವರು ನಾಟಕ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡಿದ್ದಿದ್ದಾರೆ. ಕಳೆದ 15ವರ್ಷಗಳಿಂದ ರಂಗ ಭೂಮಿಯಲ್ಲಿ ನಟ, ನಿರ್ದೇಶಕ ಹಾಗೂ ತರಬೇತುದಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಡಾ. ಸಹನ ಪಿಂಜಾರ್
    ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ಪದವೀಧರರಾದ ಇವರು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಪ್ರಸ್ತುತ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರದರ್ಶನ ಕಲೆ ನಾಟಕ ವಿಭಾಗದಲ್ಲಿ ಅತಿಥಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಈ ಶಿಬಿರದ ಊಟೋಪಚಾರಕ್ಕಾಗಿ ರೂಪಾಯಿ 300 ಶುಲ್ಕ ನಿಗದಿಪಡಿಸಿದ್ದು, 16 ವರ್ಷ ಮೇಲ್ಪಟ್ಟ, ನೈಜ ಆಸಕ್ತಿ ಇರುವ ಮೊದಲು ನೋಂದಾಯಿಸಿದ ನಿಗದಿತ ಸಂಖ್ಯೆಯ ಶಿಬಿರಾರ್ಥಿಗಳಿಗೆ ಅವಕಾಶಹೆಚ್ಚಿನ ಮಾಹಿತಿಗಾಗಿ ಪ್ರದೀಪ್‌ಚಂದ್ರ ಕುತ್ಪಾಡಿ-9448952847, ಶ್ರೀಪಾದ ಹೆಗಡೆ 9845111449, ಪೂರ್ಣಿಮಾ ಸುರೇಶ್ – 9731812468, ವಿವೇಕಾನಂದ -9449367595, ಆನಂದ ಮೇಲಂಟ-9886181209 ಇವರನ್ನು ಸಂಪರ್ಕಿಸಬಹುದು.

    Share. Facebook Twitter Pinterest LinkedIn Tumblr WhatsApp Email
    Previous Articleತುಳು ನಾಟಕ ಸ್ಪರ್ಧೆಗೆ ತಂಡಗಳಿಗೆ ಆಹ್ವಾನ | ಕೊನೆಯ ದಿನಾಂಕ ನವೆಂಬರ್ 5  
    Next Article ರಂಗಸಂಪದ ಬೆಳಗಾವಿಯ ಮೂರು ದಿನಗಳ ಹೆರಿಟೇಜ್ ಕಿಚನ್ ನಾಟಕೋತ್ಸವ
    roovari

    Add Comment Cancel Reply


    Related Posts

    ಸುಮನಸಾ ಕೊಡವೂರು ನಾಟಕೋತ್ಸವ ರಂಗಹಬ್ಬ-14ರ ಎರಡನೇ ದಿನದ ಕಾರ್ಯಕ್ರಮ

    February 26, 2026

    ಉಡುಪಿಯಲ್ಲಿ ಉದ್ಘಾಟನೆಗೊಂಡ ಸುಮನಸಾ ಕೊಡವೂರು ನಾಟಕೋತ್ಸವ ‘ರಂಗಹಬ್ಬ-14’

    February 26, 2026

    ನಾರಿ ಚಿನ್ನಾರಿಯಿಂದ ಪದ್ಮಗಿರಿ ಕಲಾಕುಟೀರದಲ್ಲಿ ‘ಪ್ರತಿಭಾನಂದಿನಿ’ | ಫೆಬ್ರವರಿ 25

    February 24, 2026

    ರಂಗ ವಿಮರ್ಶೆ | ಎಳೆ ಪ್ರತಿಭೆಗಳಿಗೆ ಸಾಕ್ಷಿಯಾದ ರಂಗ ಪ್ರಯೋಗಗಳು

    February 23, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.