ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಮತ್ತು ನಾಗರಿಕ ಸಲಹಾ ಸಮಿತಿ (ರಿ.) ಸುರತ್ಕಲ್ ಈ ಸಂಸ್ಥೆಗಳು ಜಂಟಿಯಾಗಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಪ್ರಸ್ತುತ ಪಡಿಸುವ ‘ಉದಯರಾಗ – 64’ನೇ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯು ದಿನಾಂಕ 13 ಸೆಪ್ಟೆಂಬರ್ 2026ರಂದು ಬೆಳಗ್ಗೆ 6-00 ಗಂಟೆಗೆ ಸುರತ್ಕಲ್ಲಿನ ನಾಗಬನ ರೋಡ್ ಇಲ್ಲಿರುವ ಅನುಪಲ್ಲವಿಯ ಶ್ರೀ ವಿಶ್ವೇಶತೀರ್ಥ ಸಭಾಂಗಣದಲ್ಲಿ ನಡೆಯಲಿದೆ.
ಮಂಗಳೂರಿನ ಮೇಧಾ ಉಡುಪ ಇವರ ಕೊಳಲು ವಾದನಕ್ಕೆ ಪುತ್ತೂರಿನ ಸುಪ್ರೀತಾ ಪಿ.ಎಸ್. ವಯಲಿನ್, ಯುವ ಕಲಾಮಣಿ ಕೃಷ್ಣ ಪವನ್ ಕುಮಾರ್ ಇವರು ಮೃದಂಗ ಹಾಗೂ ಸುರತ್ಕಲ್ಲಿನ ವಿದ್ವತ್ ರಾವ್ ತಂಬುರದಲ್ಲಿ ಸಾಥ್ ನೀಡಲಿದ್ದಾರೆ. ಮಣಿ ಕೃಷ್ಣಸ್ವಾಮಿ ಆಕಾಡೆಮಿಯ ಕಾರ್ಯದರ್ಶಿಯಾದ ಪಿ. ನಿತ್ಯಾನಂದ ರಾವ್ ಹಾಗೂ ಸುರತ್ಕಲ್ ನಾಗರಿಕ ಸಲಹಾ ಸಮಿತಿ ಅಧ್ಯಕ್ಷರಾದ ಡಾ. ಕೆ. ರಾಜಮೋಹನ್ ರಾವ್ ತಮಗೆಲ್ಲರಿಗೂ ಆದರದ ಸ್ವಾಗತ ಬಯಸಿದ್ದಾರೆ.

