Subscribe to Updates

    Get the latest creative news from FooBar about art, design and business.

    What's Hot

    ಕನಕ ಕಾವ್ಯ ಗಮಕ ಸ್ಪರ್ಧೆಗೆ ಅರ್ಜಿ ಆಹ್ವಾನ

    July 10, 2026

    ಬೋಂದೆಲ್ ಕಲಾಗ್ರಾಮದಲ್ಲಿ ‘ಮಾರಿಕಾಡು’ ನಾಟಕ ಪ್ರದರ್ಶನ | ಜುಲೈ 13

    July 10, 2026

    ಮಹಮ್ಮಾಯಿ ಯಕ್ಷಗಾನ ಮೇಳದ ಕಲಾವಿದರಿಗೆ ‘ಕೆ.ವಿ. ಪೈ ಪ್ರಶಸ್ತಿ’ ಪ್ರದಾನ

    July 10, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಮಣಿಕೃಷ್ಣ ಸ್ವಾಮಿ ಅಕಾಡೆಮಿಯಿಂದ ‘ಉದಯರಾಗ’ – 47
    Music

    ಮಣಿಕೃಷ್ಣ ಸ್ವಾಮಿ ಅಕಾಡೆಮಿಯಿಂದ ‘ಉದಯರಾಗ’ – 47

    December 21, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಸುರತ್ಕಲ್ : ಮಣಿಕೃಷ್ಣ ಸ್ವಾಮಿ ಅಕಾಡೆಮಿ(ರಿ) ಮತ್ತು ನಾಗರಿಕ ಸಲಹಾ ಸಮಿತಿ(ರಿ) ಸುರತ್ಕಲ್ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಶಾಸ್ತ್ರೀಯ ಸಂಗೀತ ಸರಣಿ ‘ಉದಯರಾಗ’ ಇದರ 47ನೇ ಸಂಗೀತ ಕಛೇರಿಯು ಸುರತ್ಕಲ್ಲಿನ ಅನುಪಲ್ಲವಿಯಲ್ಲಿ ದಿನಾಂಕ 17- 12- 2023 ರಂದು ನಡೆಯಿತು.
    ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾದ ಭಾಗವಹಿಸಿದ ದೊಡ್ಡಕೊಪ್ಲ ಸ್ವಚ್ಛಸಾಗರ ಅಭಿಯಾನದ ಸಂಯೋಜಕ ಹಾಗೂ ಭಾರತೀಯ ಸ್ಟೇಟ್ ಬ್ಯಾಂಕ್ ನ ನಿವೃತ್ತ ಅಧಿಕಾರಿ ಕೃಷ್ಣ.ಕೆ.ಪೂಜಾರಿ ಮಾತನಾಡಿ “ಸನಾತನ ಧರ್ಮದ ಶ್ರೇಷ್ಠ ಮೌಲ್ಯಗಳನ್ನು ಸಾರುವ ಶಾಸ್ತ್ರೀಯ ಸಂಗೀತಕ್ಕೆ ಹೃದಯವನ್ನು ಅರಳಿಸುವ ಗುಣವಿದೆ. ಯುವಜನತೆ ಶಾಸ್ತ್ರೀಯ ಸಂಗೀತದತ್ತ ಆಕರ್ಷಿತರಾಗುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ.” ಎಂದು ನುಡಿದರು. ಸುರತ್ಕಲ್ ನಾಗರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ. ಕೆ. ರಾಜಮೋಹನ್‌ರಾವ್ ಉಪಸ್ಥಿತರಿದ್ದರು.

    ಬಳಿಕ ನಡೆದ ಕಛೇರಿಯಲ್ಲಿ ಪ್ರಣವ್ ಅಡಿಗ ಉಡುಪಿ ಅವರಿಂದ ಕೊಳಲು ವಾದನ ನಡೆಯಿತು. ಇವರಿಗೆ ವಯಲಿನ್‌ನಲ್ಲಿ ವಿಜೇತ ಸುಬ್ರಹ್ಮಣ್ಯ ಕಾಬೆಕ್ಕೋಡು ಹಾಗು ಮೃದಂಗದಲ್ಲಿ ಡಿ.ಆರ್ ಹರಿಕೃಷ್ಣ ಪಾವಂಜೆ ಸಹಕರಿಸಿದರು. ಮಣಿ ಕೃಷ್ಣ ಸ್ವಾಮಿ ಅಕಾಡೆಮಿಯ ಕಾರ್ಯದರ್ಶಿ ಪಿ.ನಿತ್ಯಾನಂದ ರಾವ್ ಸ್ವಾಗತಿಸಿದರು.

    ಪ್ರಣವ್ ಅಡಿಗ :
    ಉಡುಪಿ ಅಂಬಲಪಾಡಿಯ ಶ್ರೀ ಮತಿ ವೀಣಾ ಅಡಿಗ ಮತ್ತು ಶ್ರೀ ಪ್ರಕಾಶ ಅಡಿಗ ಅವರ ಸುಪುತ್ರನಾಗಿರುವ ಪ್ರಣವ್ ಅಡಿಗ ಉಡುಪಿಯ ಆನಂದ ತೀರ್ಥ ವಿದ್ಯಾಲಯದ ಏಳನೇ ತರಗತಿ ವಿದ್ಯಾರ್ಥಿ.
    ವಿದ್ವಾನ್ ಕೆ. ರಾಘವೇಂದ್ರ ರಾವ್ ಹಾಗೂ ವಿದ್ವಾನ್ ಕೆ. ರವಿಚಂದ್ರ ಕುಳೂರು ಇವರಲ್ಲಿ 6 ವರ್ಷಗಳಿಂದ ಕೊಳಲು ಹಾಗೂ ಸಂಗೀತಾಭ್ಯಾಸ ಮಾಡಿ, ಪ್ರಸ್ತುತ ವಿದುಷಿ ವಾರಿಜಾಕ್ಷಿ ಆರ್. ಭಟ್ ಇವರ ಬಳಿ ಸಂಗೀತ ಅಭ್ಯಾಸ ನಡೆಸುತ್ತಿದ್ದಾರೆ.
    ಇವರು ಉಡುಪಿಯ ಶ್ರೀ ಕೃಷ್ಣ ಮಠವು ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಆಯೋಜಿಸಿದ ಸ್ಪರ್ಧೆ, ಅಲೆವೂರು, ಗುಡ್ಡೆಯಂಗಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ನಡೆಸಿದ ಸ್ಪರ್ಧೆ, ವೀಣಾಧರಿ ಸಂಗೀತ ಶಾಲೆ ಆಯೋಜಿಸಿದ ಆನ್ಲೈನ್ ಸಂಗೀತ ಸ್ಪರ್ಧೆ, ಕೇರಳದ ‘ಸಪ್ತ ಸ್ವರಂಗಳ್’ ನಡೆಸಿದ ರಾಷ್ಟ್ರಮಟ್ಟದ ಸ್ಪರ್ಧೆ, ‘ವಿದ್ಯೇಶ ನಾದವೈಭವಂ’ ಆನ್ಲೈನ್ ಸ್ಪರ್ಧೆಯಲ್ಲಿ, ಪೂಣೆಯ ‘ಚಿನ್ಮಯ ನಾದಬಿಂದು’ ಆಯೋಜಿಸಿದ ರಾಷ್ಟ್ರಮಟ್ಟದ ಸ್ಪರ್ಧೆ, ಬೆಂಗಳೂರಿನ ಇಸ್ಕಾನ್ ಆಯೋಜಿಸಿದ ಸ್ಪರ್ಧೆಯಲ್ಲಿ, ಬೆಂಗಳೂರಿನ ‘ಆರ್ಟ್ ಆಫ್ ಲೀವಿಂಗ್’ ಆಯೋಜಿಸಿದ ಕೊಳಲು ವಾದನ ಸ್ಪರ್ಧೆ, ಕೇರಳದ ಗುರುವಾಯುರುವಿನಲ್ಲಿ ನಡೆದ ‘ನಾದೋಪಾಸನ’ ಸ್ಪರ್ಧೆ ಹಾಗೂ ‘ಕಾಪು ಬೀಚ್ ಉತ್ಸವ’ ಮುಂತಾದ ಪ್ರತಿಷ್ಠಿತ ವೇದಿಕೆಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ಭಾಗವಹಿಸಿದ ಇವರು ಹೆಚ್ಚಾಗಿ ಪ್ರಥಮ ತಪ್ಪಿದರೆ ದ್ವಿತೀಯ ಬಹುಮಾನದೊಂದಿಗೆ ಹಿಂದಿರುಗುತ್ತಾರೆ. ಬರಿಗೈಳಿ ಬಂದದ್ದೇ ಇಲ್ಲ.
    ಕನ್ನರ್ಪಾಡಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ, ಕಾವೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಎಲ್ಲಾರೆಯ ಲಕ್ಷ್ಮೀ ಜನಾರ್ಧನ ದೇವಸ್ಥಾನ, ಶಿವಪುರದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಉದ್ಯಾವರ, ಸುರತ್ಕಲ್ ಮುಂತಾದ ಕಡೆಗಳಲ್ಲಿ ಸಂಗೀತ ಕಛೇರಿಗಳನ್ನು ನಡೆಸಿದ್ದಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleಕ್ರಿಯೇಟಿವ್‌ ಕಾಲೇಜಿನಲ್ಲಿ ‘ನಿನಾದ’ ಸಂಚಿಕೆ – 5 ಬಿಡುಗಡೆ 
    Next Article ‘ಶ್ರೀಶ ಯಕ್ಷೋತ್ಸವ-2023’ದಲ್ಲಿ ಪ್ರಶಸ್ತಿ ಪ್ರದಾನ ಮತ್ತು ಯಕ್ಷಗಾನ ಪ್ರದರ್ಶನ
    roovari

    Add Comment Cancel Reply


    Related Posts

    ಕನಕ ಕಾವ್ಯ ಗಮಕ ಸ್ಪರ್ಧೆಗೆ ಅರ್ಜಿ ಆಹ್ವಾನ

    July 10, 2026

    ಕಿರೀಕ್ಕಾಡು ಸ್ಮಾರಕ ಸಭಾಭವನದಲ್ಲಿ ‘ಶರಸೇತುಬಂಧ’ ಯಕ್ಷಗಾನ ತಾಳಮದ್ದಳೆ

    July 10, 2026

    ಮಂಗಳೂರಿನ ಅಡ್ಯಾರ್ ಗಾರ್ಡನ್‌ನಲ್ಲಿ ‘ಭಾವ ಬಿಂಬ’ ಕವನ ಸಂಕಲನ ಲೋಕಾರ್ಪಣೆ

    July 10, 2026

    ಆಳ್ವಾಸ್‌ನಲ್ಲಿ ‘ಕನ್ನಡ ಗಾನ ಗುಚ್ಛ’ ವೈವಿಧ್ಯಮಯ ಹಾಡುಗಳ ವಿನೂತನ ರಂಗಪ್ರಸ್ತುತಿ | ಜುಲೈ 10 ಮತ್ತು 11

    July 10, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.