ಉಡುಪಿ: ಉಡುಪಿ ಜಿಲ್ಲಾ ನಾಟಕ ಕಲಾವಿದರ ಒಕ್ಕೂಟದ ಪ್ರಥಮ ವರ್ಷದ ವಾರ್ಷಿಕೋತ್ಸವ ‘ರಂಗ ಸಂಗಮ’ ವು ದಿನಾಂಕ 16-07-2023ರಂದು ಉಡುಪಿಯ ಎಂ.ಜಿ.ಎಮ್ ಕಾಲೇಜಿನ ಮುದ್ದಣ್ಣ ಮಂಟಪದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಆರು ಭಿನ್ನ ನಾಟಕಗಳ ಆಯ್ದ ಭಾಗಗಳ ರಂಗ ಪ್ರಯೋಗ ಯಶಸ್ವಿಯಾಗಿ ಪ್ರದರ್ಶನಗೊಂಡಿತು.
ದ.ಕ, ಉಡುಪಿ, ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಹಲವಾರು ವೃತ್ತಿಪರ ನಾಟಕ ತಂಡಗಳಿದ್ದು ಅದರಲ್ಲಿ ಉಡುಪಿಯ ವೃತ್ತಿಪರ ನಾಟಕ ತಂಡಗಳ ಕಲಾವಿದರು ನಿರ್ಮಿಸಿದ ‘ಉಡುಪಿ ಜಿಲ್ಲಾ ನಾಟಕ ಕಲಾವಿದರ ಒಕ್ಕೂಟ’ವು ತನ್ನ ಪ್ರಥಮ ವರ್ಷಾಚರಣೆಯ ಸಂದರ್ಭದಲ್ಲಿ ವಿಭಿನ್ನ ಪ್ರಯೋಗವಾಗಿ ನವ್ಯ ರಂಗಭೂಮಿಯ ನಾಟಕಗಳ ತುಣುಕುಳನ್ನು ಅಭ್ಯಾಸಿಸಿ ಪ್ರದರ್ಶಿಸಿದರು. ವೃತ್ತಿಪರ ನಾಟಕಗಳು ಹೆಚ್ಚಾಗಿ ಹಾಸ್ಯ ಪ್ರಧಾನ ನಾಟಕಗಳಾಗಿದ್ದು ಅದರಲ್ಲಿ ಅಭಿನಯಿಸುವ ಕಲಾವಿದರು ಮೊದಲ ಬಾರಿಗೆ ನಿರ್ದೇಶಕ ವಿದ್ದು ಉಚ್ಚಿಲ್ ಮಾ ರ್ಗದರ್ಶನದಲ್ಲಿ 3 ಇಂಗ್ಲೀಷ್ ನಾಟಕಗಳ ತುಳು ಅನುವಾದ ಮತ್ತು 3 ನವ್ಯ ನಾಟಕಗಳ ತುಣುಕುಗಳನ್ನು ಪ್ರದರ್ಶಿಸಿ ಪ್ರೇಕ್ಷಕರನ್ನು ರಂಜಿಸಿದರು.
ವಿಲಿಯಂ ಶೇಕ್ಸ್ ಪಿಯರ್ ಅವರ ‘ಮ್ಯಾಕ್ ಬೆತ್ ‘ನಾಟಕವನ್ನು ಸುನಿಲ್ ಪಲ್ಲಮಜಲು ತುಳುವಿಗೆ ಅನುವಾದಿಸಿ ಕಲಾವಿದರರಾದ ಪೂಜಾ ಪೂಜಾರಿ, ಪ್ರಥಮ್ ಶೆಟ್ಟಿ, ಶಶಿರಾಜ್ ಆಚಾರ್ಯ, ದಿನೇಶ್ ಅಮೀನ್, ಸತೀಶ್ ಕಲ್ಯಾಣಪುರ ಅಭಿನಯಿಸಿದ್ದಾರೆ.
ಚೆಕಾವ್ ಅವರ ‘The Seduction’ ಕಥೆ ಆದಾರಿತ ನಾಟಕವನ್ನ್ನು ವಿಧೇಯನ್ ತುಳುವಿಗೆ ಅನುವಾದಿಸಿ ಕಲಾವಿದರಾದ ಪ್ರವೀಣ್ ಕೊಡಕ್ಕಲ್ , ಯಶವಂತ್ ಉಪ್ಪೂರು, ಪ್ರಜ್ಞಾ ಕುರ್ಕಾಲು ಅಭಿನಯಿಸಿದ್ದಾರೆ.
ಅಮೃತ ಸೋಮೇಶ್ವರರು ರಚಿಸಿದ ‘ಗೊಂದೋಳು’ ನಾಟಕವನ್ನು ಕಲಾವಿದರಾದ ಪ್ರಭಾಕರ್ ಆಚಾರ್ಯ, ಭವ್ಯ ಪ್ರಭು, ಮನೋಜ್, ಪೂಜಾ ಪೂಜಾರಿ ಅಭಿನಯಿಸಿದ್ದಾರೆ.
ಜಿ. ಶಂಕರ್ ಪಿಳ್ಳೈ ಅವರ ‘ಭರತವಾಕ್ಯಂ’ನಾಟಕವನ್ನು ವಿಧೇಯನ್ ತುಳುವಿಗೆ ಅನುವಾದಿಸಿ ಕಲಾವಿದರಾದ ಸುಜಿತ್ ಶೆಟ್ಟಿ ಕಾಪು, ಪ್ರಭಾಕರ್ ಕಲ್ಯಾಣಿ, ಸಾಗರ್ , ರಾಜೇಶ್ ಪಡುಬಿದ್ರಿ ಅಭಿನಯಿಸಿದ್ದಾರೆ.
ಯು.ಆರ್. ಚಂದರ್ ಬರೆದಿರುವ ‘ಕೋರ್ದಬ್ಬು ತನ್ನಿಮಾನಿಗ’ ನಾಟಕವನ್ನು ಕಲಾವಿದರಾದ ಸುಶ್ವಿತ ಕಲ್ಮಾಡಿ, ನಾಗರಾಜ್ ಉಪ್ಪೂರು, ರಾಜಾ ಕಟಪಾಡಿ, ಶಶಿಕಾಂತ್, ಪ್ರವೀಣ್ ಹೆಗ್ಡೆ, ಜಯಕರ್ ಅಭಿನಯಿಸಿದ್ದಾರೆ.
ಡಾ ಸಂಜೀವ ದಂಡಕೇರಿ ಬರೆದಿರುವ ‘ಬಯ್ಯಮಲ್ಲಿಗೆ’ ನಾಟಕವನ್ನು ಕಲಾವಿದರಾದ ಪೂಜ ಪೂಜಾರಿ, ಕುಸುಮಾ ಕಾಮತ್, ಆನಂದ ಎಲ್ಲೂರು, ರಾಜೇಶ್ ಪಡುಬಿದ್ರಿ, ರಮೇಶ್ ಆಚಾರ್ಯ, ಗಣೇಶ್ ಕುಲಾಲ್ ಅಭಿನಯಿಸಿದ್ದಾರೆ.
ಇಷ್ಟು ನಾಟಕಗಳ ಆಯ್ದ ಭಾಗಗಳನ್ನು ಉಡುಪಿ ಜಿಲ್ಲೆಯ ವಿವಿಧ ತಂಡಗಳ ಕಲಾವಿದರು ಅಭಿನಯಿಸಿ ಪ್ರದರ್ಶಿಸಿದರು. ಈ ಕಾರ್ಯಕ್ರಮ ಸಂಗೀತ ಮತ್ತು ನಿರ್ವಹಣೆಯಲ್ಲಿ ಶರತ್ ಉಚ್ಚಿಲ, ಶೋಧನ್ ಎರ್ಮಾಳ್, ಮೇಘನಾ ಕುಂದಾಪುರ, ಸುಜಾತಾ ಪ್ರಭಾಕರ ಆಚಾರ್ಯ, ರಂಗ ಸಜ್ಜಿಕೆಯಲ್ಲಿ ಸುಧೀಶ್, ಮಣಿ ಎನ್, ಪ್ರಸಾದನದಲ್ಲಿ ಪಾಂಡು ಪರ್ಕಳ ಮತ್ತು ಶಿವರಾಮ ಕಲ್ಮಡ್ಕ, ಬೆಳಕಿನ ವಿನ್ಯಾಸದಲ್ಲಿ ಅಭಿನಯಾ ಉಡುಪಿ, ಸಂದೀಪ್ , ಪ್ರದೀಪ್ ಹಾಗೂ ರಾಘು ಸಹಕರಿಸಿದರು. ಸಂದೀಪ್ ಶೆಟ್ಟಿ ಮಾಣಿಬೆಟ್ಟು ಮತ್ತು ನಾಗರಾಜ್ ವರ್ಕಾಡ ಕಾರ್ಯಕ್ರಮವನ್ನು ನಿರೂಪಿಸಿದರು.
ಇದೇ ಸಂದರ್ಭದಲ್ಲಿ ನಿರ್ದೇಶಕ ವಿದ್ದು ಉಚ್ಚಿಲ್ ರವರನ್ನು ಸಂಘದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು .