14-03-2023,ಮಂಗಳೂರು: ಶ್ರೀ ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವದ ಸರಣಿ ಕಾರ್ಯಕ್ರಮ ದಿನಾಂಕ 12-03-2023 ರಂದು ಶ್ರೀ ಮಹಾಮ್ಮಾಯ ದೇವಸ್ಥಾನದ ಆವರಣದಲ್ಲಿ ಜರಗಿತು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸಹಯೋಗದಲ್ಲಿ ನಡೆದ ಕೆ. ದಿವಾಕರ ದಾಸ್ ಅವರ ಸಂಮಾನ ಕಾರ್ಯಕ್ರಮದಲ್ಲಿ ಸಿಎ. ಶಿವಾನಂದ ಪೈ ಅಧ್ಯಕ್ಷರಾಗಿದ್ದರು.ಹಿಂದಿನ ಕಾಲದಲ್ಲಿ ಇಲ್ಲಿನ ಜನರ ಮನೋರಂಜನೆಗೆ ಇದ್ದದ್ದು ಯಕ್ಷಗಾನ. ಇದರಿಂದ ಅಪಾರ ಪುರಾಣ ಜ್ಞಾನವನ್ನು ಕರಾವಳಿಯ ಜನತೆ ಹೊಂದಿದ್ದರು.ಈ ಸಂಘ ತಾಳಮದ್ದಳೆಯ ಮೂಲಕ ಜನರ ಮನರಂಜನೆಗೂ, ಮನೋವಿಕಾಸಕ್ಕೂ ಕಾರಣವಾಗಿ 100 ವರ್ಷ ಪೂರೈಸಿರುವುದು ಅತ್ಯಂತ ಸಂತೋಷ ಎಂದರು.
ಕೆ. ದಿವಾಕರ ದಾಸ್ ಇವರ ಅಭಿನಂದನೆಯನ್ನು ಸಂಘದ ಪ್ರಧಾನ ಕಾರ್ಯದರ್ಶಿ ಸಂಜಯ ಕುಮಾರ್ ರಾವ್ ಗೈದರು.ವೇಷಧಾರಿಯಾಗಿ, ಪ್ರಸಾದನ ತಯಾರಿಕೆಯ ಉದ್ಯಮಿಯಾಗಿ, ಯಕ್ಷಗಾನ ಸಂಘಟಕನಾಗಿ ಕಲಾ ಸೇವೆಯನ್ನು ಮಾಡಿದವರು ದಿವಾಕರ ದಾಸ್. ಅವರು ವಾಗೀಶ್ವರಿ ಸಂಘದಲ್ಲಿ ಸಲ್ಲಿಸಿದ ಸೇವೆಗಾಗಿ ಅವರನ್ನು ಸಂಮಾನಿಸುತ್ತಿದ್ದೇವೆ ಎಂದರು.
ಸಂಮಾನಕ್ಕೆ ಉತ್ತರವಾಗಿ ದಿವಾಕರ ದಾಸ್ ತಾನು ಇಲ್ಲಿ ಗೈದ ಅಳಿಲ ಸೇವೆಯನ್ನು ಗುರುತಿಸಿ ಸಂಮಾನಿಸಿದ್ದಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದರು.
ಸಂಮಾನ ಪತ್ರದ ವಾಚನವನ್ನು ಉಪಾಧ್ಯಕ್ಷೆ ಶೋಭಾ ಐತಾಳ್ ಗೈದರು. ಚೆಂಡೆ ಮದ್ದಳೆ ವಾದಕನಾಗಿ ಸಂಘದಲ್ಲಿ ಸೇವೆ ಸಲ್ಲಿಸಿದ್ದ ಕೀರ್ತಿಶೇಷ ಕೃಷ್ಣಪ್ಪ ಶೆಟ್ಟಿಗಾರರಿಗೆ ಸಂಘಟನಾ ಕಾರ್ಯದರ್ಶಿ ಅಶೋಕ ಬೋಳೂರು ನುಡಿ ನಮನ ಸಲ್ಲಿಸಿದರು. ಇನ್ನೋರ್ವ ಅತಿಥಿ ಕಾರ್ಪೋರೇಶನ್ ಬ್ಯಾಂಕ್ ನ ನಿವೃತ್ತ ಉದ್ಯೋಗಿ ಗಣೇಶ್ ಕಾಮತ್ ತನ್ನ ಬಾಲ್ಯದಲ್ಲಿ ಈ ಸಂಘದ ಕಾರ್ಯಕ್ರಮಗಳನ್ನು ಕಂಡದ್ದನ್ನು ಸ್ಮರಿಸಿಕೊಂಡರು. ಇನ್ನೂ ಹಲವು ಕಾಲ ಈ ಸಂಘ ಮುನ್ನಡೆಯಲೆಂದು ಹಾರೈಸಿದರು.
ಸಭಾ ಕಾರ್ಯಕ್ರಮಗಳ ಛಾಯಾಗ್ರಹಣವನ್ನು ಅತ್ಯಂತ ಮುತುವರ್ಜಿಯಿಂದ ನಿರ್ವಹಿಸುತ್ತಿದ್ದ ರವಿಚಂದ್ರ ಭಟ್ ಅವರನ್ನು ಸಂಮಾನಿಸಲಾಯಿತು.
ಸಂಘದ ಅಧ್ಯಕ್ಷ ಶ್ರೀನಾಥ್ ಪ್ರಭು, ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಸಿ. ಎಸ್. ಭಂಡಾರಿ, ಪ್ರೊ. ಜಿ. ಕೆ. ಭಟ್,ಜಯಂತಿ ದಾಸ್ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ಮಾರ್ಚ್ 12 – ಶ್ರೀ ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವದ ಸರಣಿ ಕಾರ್ಯಕ್ರಮ
Previous Articleಪುತ್ತೂರು “ನಾಟ್ಯ ರಂಗ”ದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ
Related Posts
1 Comment
-
ಯಶಸ್ವೀ ಶತಮಾನಗಳಾಚರಣೆ!
ಯಶಸ್ವೀ ಶತಾಧಿಕ ಸನ್ಮಾನ ಸಂಸ್ಮರಣೆ ಜೋಡಿ!
ಯಶಸ್ವೀ ಸಂಘಟಿತ ಕಲಾರಾಧನೆ!!
ಯಶಸ್ಸಿಗಾಗಿಯೇ ಹಾರಕೆ ಹಾರೈಕೆಗಳೈ!!
1 Comment
ಯಶಸ್ವೀ ಶತಮಾನಗಳಾಚರಣೆ!
ಯಶಸ್ವೀ ಶತಾಧಿಕ ಸನ್ಮಾನ ಸಂಸ್ಮರಣೆ ಜೋಡಿ!
ಯಶಸ್ವೀ ಸಂಘಟಿತ ಕಲಾರಾಧನೆ!!
ಯಶಸ್ಸಿಗಾಗಿಯೇ ಹಾರಕೆ ಹಾರೈಕೆಗಳೈ!!