ಬೆಂಗಳೂರು : ರಂಗಮಂಡಲ ಬೆಂಗಳೂರು ಮತ್ತು ಶುಭದ ಚಾರಿಟಬಲ್ ಟ್ರಸ್ಟ್, ಮಗ್ಗೆ ಸುಗ್ಗಿ ಟ್ರಸ್ಟ್ ಮತ್ತು ಸ್ನೇಹ ಸೇವಾ ಫೌಂಡೇಶನ್ ಇದರ ವತಿಯಿಂದ ಹಮ್ಮಿಕೊಂಡಿದ್ದ ‘ಬಣ್ಣದ ಬೇಸಿಗೆ’ ಮಕ್ಕಳ ರಂಗ ಶಿಬಿರದ ಸಮಾರೋಪ ಸಮಾರಂಭವನ್ನು ದಿನಾಂಕ 04 ಮೇ 2025ರಂದು ಸಂಜೆ 4-30 ಗಂಟೆಗೆ ಸಿವಗಂಗ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಬಸವ ಜಯಂತಿ, ಮಕ್ಕಳ ಸಾಂಸ್ಕೃತಿಕ ಉತ್ಸವ ಮತ್ತು ನಾಡಿನ ಖ್ಯಾತ ರಂಗಸಂಘಟಕ ಹಾಗೂ ಜನಪದ ಗಾಯಕ ಸಿ.ಎಂ. ನರಸಿಂಹಮೂರ್ತಿ ಇವರಿಗೆ ‘ ಸಿವಗಂಗ ರಂಗ ಪ್ರಶಸ್ತಿ ‘ ಪ್ರದಾನ ಮಾಡಲಾಗುವುದು. ಶಿಬಿರದ ಮಕ್ಕಳಿಂದ ‘ಭಕ್ತ ಪ್ರಹ್ಲಾದ’ ನಾಟಕ ಪ್ರದರ್ಶನ ಹಾಗೂ ಗೀತಾ ಭತ್ತದ್ ಬಳಗದಿಂದ ‘ವಚನ ಸಂಗೀತ’ ಪ್ರಸ್ತುತಗೊಳ್ಳಲಿದೆ.