ಧಾರವಾಡ : ರಂಗಾಯಣ ಧಾರವಾಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧಾರವಾಡ ಹಾಗೂ ಡಾ. ಮಲ್ಲಿಕಾರ್ಜುನ ಮನ್ಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಚಿತ್ರಕಲಾ ಶಿಲ್ಪಿ ಶ್ರೀ ಡಿ.ವಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ ಟ್ರಸ್ಟ್, ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಧಾರವಾಡದ ಡಾ. ಎಂ.ಎಂ. ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನ ಇವರ ಸಹಯೋಗದಲ್ಲಿ ‘ಚಿಣ್ಣರಮೇಳ 2025’ ಮಕ್ಕಳ ಬೇಸಿಗೆ ರಂಗ ತರಬೇತಿ ಶಿಬಿರದ ಸಮಾರೋಪ ಹಾಗೂ ಚಿಣ್ಣರ ನಾಟಕೋತ್ಸವ ಸಮಾರಂಭವನ್ನು ದಿನಾಂಕ 03 ಮೇ 2025ರಿಂದ 05 ಮೇ 2025ರವರೆಗೆ ಧಾರವಾಡ ರಂಗಾಯಣದ ಪಂ. ಬಸವರಾಜ ಬಯಲು ರಂಗ ಮಂದಿರದಲ್ಲಿ ಆಯೋಜಿಸಲಾಗಿದೆ. ಪ್ರತಿದಿನ ಸಂಜೆ 5-00 ಗಂಟೆಗೆ ಶಿಬಿರ ಗೀತೆ, ರಂಗಗೀತೆಗಳು, ಮಕ್ಕಳ ಹಾಡುಗಳು ಹಾಗೂ ಸಮೂಹ ನೃತ್ಯಗಳು ಪ್ರಸ್ತುತಗೊಳ್ಳಲಿದೆ.
ದಿನಾಂಕ 03 ಮೇ 2025ರಂದು ಉದ್ಘಾಟನಾ ಸಮಾರಂಭ ನಡೆಯಲಿದ್ದು, ಧಾರವಾಡ ರಂಗಾಯಣದ ಅಧ್ಯಕ್ಷರಾದ ಡಾ. ರಾಜು ತಾಳಿಕೋಟಿ ಇವರು ಅಧ್ಯಕ್ಷತೆ ವಹಿಸಲಿದ್ದು, ಧಾರವಾಡದ ಸಿಸ್ಲೇಪ್ ಇದರ ನಿರ್ದೇಶಕರಾದ ಡಾ. ಬಿ.ಕೆ.ಎಸ್. ವರ್ಧನ ಇವರು ಉದ್ಘಾಟನೆ ಮಾಡಲಿದ್ದಾರೆ. ಸಂಜೆ 5-30 ಗಂಟೆಗೆ ಸಹೋದರತ್ವ ತಂಡದಿಂದ ‘ವೀರಗಾಸೆ’ ಜಾನಪದ ನೃತ್ಯ, ಸಮಾನತೆ ಚಿಣ್ಣರ ತಂಡದವರಿಂದ ಹರೀಶ್ ಜಿಂಕೆ ಇವರ ನಿರ್ದೇಶನದಲ್ಲಿ ‘ರಿಯಾಲಿಟಿ’ ನಾಟಕ ಪ್ರದರ್ಶನ, 7-45 ಗಂಟೆಗೆ ಪ್ರಜಾಪ್ರಭುತ್ವ ತಂಡದವರಿಂದ ‘ಹುಲಿ ಕುಣಿತ’, ಸ್ವಾತಂತ್ರ್ಯ ತಂಡದವರಿಂದ ಪೂಜಾ ಗಜಕೋಶ ಇವರ ನಿರ್ದೇಶನದಲ್ಲಿ ‘ಸಂವಿಧಾನ ಶರಣಂ ಗಚ್ಚಾಮಿ’ ನಾಟಕ ಪ್ರದರ್ಶನ ನಡೆಯಲಿದೆ.
ದಿನಾಂಕ 04 ಮೇ 2025ರಂದು ಸಂಜೆ 5-30 ಗಂಟೆಗೆ ಸಮಾನತೆ ತಂಡದಿಂದ ‘ದೊಡ್ಡಾಟದ ಹೆಜ್ಜೆಗಳು’, ಸಹೋದರತ್ವ ತಂಡದವರಿಂದ ಗಂಗಾ ಕಾಳೇನವರ ನಿರ್ದೇಶನದಲ್ಲಿ ‘ಅದಲ್ ಬದಲ್’ ನಾಟಕ ಪ್ರದರ್ಶನ, 7-45 ಗಂಟೆಗೆ ಸ್ವಾತಂತ್ರ್ಯ ತಂಡದವರಿಂದ ‘ಪರಿಸರದ ಗೀತೆಗಳು’, ಸಮಗ್ರತೆ ಚಿಣ್ಣರ ತಂಡದವರಿಂದ ಶೃತಿ ಶರಣಕುಮಾರ ಇವರ ನಿರ್ದೇಶನದಲ್ಲಿ ‘ಬೆಳಕು ಹಂಚಿದ ಬಾಲಕ’ ನಾಟಕ ಪ್ರದರ್ಶನ ನಡೆಯಲಿದೆ.
ದಿನಾಂಕ 05 ಮೇ 2025ರಂದು ಸಂಜೆ 6-45 ಗಂಟೆಗೆ ಸಮಗ್ರತೆ ತಂಡದಿಂದ ‘ಕಂಸಾಳೆ’, ಪ್ರಜಾಪ್ರಭುತ್ವ ಚಿಣ್ಣರ ತಂಡದವರಿಂದ ಶರಣು ಶೆಟ್ಟರ ನಿರ್ದೇಶನದಲ್ಲಿ ‘ಮಕ್ಕಳ ರಾಜ್ಯ’ ನಾಟಕ ಪ್ರದರ್ಶನ ಹಾಗೂ 5-30 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.