ಬೆಂಗಳೂರು : ಕರ್ನಾಟಕ ಲಲಿತಕಲಾ ಅಕಾಡಮಿಯಿಂದ ಕೊಡಮಾಡುವ 2022-23ನೇ ಸಾಲಿನ ‘ವರ್ಣಶ್ರೀ’ ಪ್ರಶಸ್ತಿಗೆ ಖ್ಯಾತ ಚಿತ್ರ ಕಲಾವಿದೆ ವೀಣಾ ಶ್ರೀನಿವಾಸ್ ಆಯ್ಕೆಯಾಗಿದ್ದಾರೆ.
ಮಂಗಳೂರು ಕೆ. ಎಸ್. ರಾವ್ ರೋಡ್ ನಿವಾಸಿಯಾಗಿರುವ ವೀಣಾ ಶ್ರೀನಿವಾಸ್ ಕಾವಿ ಕಲೆಯಲ್ಲಿ ಹೆಸರು ಗಳಿಸಿದ್ದಾರೆ. 16ನೆಯ ಶತಮಾನದ ಸಾಂಪ್ರದಾಯಕ ಕಲಾಪ್ರಕಾರವಾಗಿರುವ ಕಾವಿ ಕಲೆಯ ಪುನರುಜ್ಜಿವನ ಮತ್ತು ಪ್ರಚಾರದಲ್ಲಿ ದೊಡ್ಡ ಕೊಡುಗೆ ನೀಡಿರುವ ಇವರು ಯುವ ಜನಾಂಗದಲ್ಲಿಯೂ ಕಾವಿ ಕಲೆಯ ಬಗ್ಗೆ ಆಸಕ್ತಿ ಮೂಡಿಸುವಲ್ಲಿ ಶ್ರಮಿಸುತ್ತಿದ್ದಾರೆ. ಎಂ. ಆರ್. ಪಾವಂಜೆಯವರ ಶಿಷ್ಯೆ ಯಾಗಿರುವ ವೀಣಾ ಅವರ ಅಜ್ಜ ವೆಂಕಟ್ರಾಯ ಕಾಮತ್ ಮುಂಬಯಿಯ ಜೆ. ಜೆ. ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದರು.