Subscribe to Updates

    Get the latest creative news from FooBar about art, design and business.

    What's Hot

    ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ‘ವಿವೇಕಸ್ಮೃತಿ’ ಉಪನ್ಯಾಸ ಕಾರ್ಯಕ್ರಮ

    June 12, 2025

    ವಿಶ್ವಕರ್ಮ ಒಕ್ಕೂಟದಿಂದ ಸಣ್ಣ ಕಥೆ – ಕವನ ಸ್ಪರ್ಧೆ – 2025 | 30 ಜೂನ್ ಕೊನೆಯ ದಿನ

    June 12, 2025

    ಮೈಸೂರಿನಲ್ಲಿ ಪ್ರೇರಣಾ ಕಲಾ ಕಾರ್ಯಾಗಾರ | ಜೂನ್ 28

    June 12, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ವಿಕಾಸ ಹೊಸಮನಿಯವರು ರಾಷ್ಟ್ರಮಟ್ಟದ ವಿಚಾರಗೋಷ್ಠಿಗೆ ಕನ್ನಡ ಭಾಷೆಯ ಪ್ರತಿನಿಧಿಯಾಗಿ ಆಯ್ಕೆ
    Literature

    ವಿಕಾಸ ಹೊಸಮನಿಯವರು ರಾಷ್ಟ್ರಮಟ್ಟದ ವಿಚಾರಗೋಷ್ಠಿಗೆ ಕನ್ನಡ ಭಾಷೆಯ ಪ್ರತಿನಿಧಿಯಾಗಿ ಆಯ್ಕೆ

    July 8, 2023Updated:August 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಆಂಧ್ರ ಪ್ರದೇಶ: ನವದೆಹಲಿಯ ಗೋಲ್ಡನ್ ಗ್ಲೋಬ್ ಟ್ರಸ್ಟ್ ಮತ್ತು ವಿಶಾಖಪಟ್ಟಣದ ಪ್ರತಿಮಾ ಫೌಂಡೇಶನ್ ಜಂಟಿ ಸಹಯೋಗದಲ್ಲಿ ಆಗಸ್ಟ್ ತಿಂಗಳ 5 ಮತ್ತು 6ನೇ ತಾರೀಕಿನಂದು ಆಂಧ್ರ ಪ್ರದೇಶದ ಗುಂಟೂರಿನಲ್ಲಿ ‘ದಕ್ಷಿಣ ಭಾರತೀಯ ಭಾಷೆಗಳ ಸಮಕಾಲೀನ ಕಥನ ಸಾಹಿತ್ಯ’ದ ಕುರಿತು ನಡೆಯಲಿರುವ ಒಂದು ದಿನದ ರಾಷ್ಟ್ರಮಟ್ಟದ ವಿಚಾರಗೋಷ್ಠಿಗೆ ಯುವ ವಿಮರ್ಶಕ ಮತ್ತು ಲಲಿತ ಪ್ರಬಂಧಕಾರರಾದ ವಿಕಾಸ ಹೊಸಮನಿಯವರು ಕನ್ನಡ ಭಾಷೆಯ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದು ‘ಸಮಕಾಲೀನ ಕನ್ನಡ ಕಥಾ ಸಾಹಿತ್ಯ’ ಎಂಬ ವಿಷಯದ ಬಗ್ಗೆ ಪ್ರಬಂಧವನ್ನು ಮಂಡಿಸಲಿದ್ದಾರೆ.

    ಮೂಲತಃ ಅರ್ಥಶಾಸ್ತ್ರದ ವಿದ್ಯಾರ್ಥಿಯಾಗಿದ್ದರೂ ಆಧುನಿಕ ಕನ್ನಡ ಸಾಹಿತ್ಯ, ಭಾರತೀಯ ಸಾಹಿತ್ಯ ಮತ್ತು ಇಂಗ್ಲಿಷ್ ಸಾಹಿತ್ಯವನ್ನು ಓದಿಕೊಂಡಿರುವ ವಿಕಾಸ ಹೊಸಮನಿಯವರು ಹೊಸ ಒಳನೋಟಗಳಿಂದ ಕೂಡಿದ ಸಾಹಿತ್ಯಿಕ ಲೇಖನಗಳ ಮೂಲಕ ಕನ್ನಡ ವಿಮರ್ಶಾ ಕ್ಷೇತ್ರದಲ್ಲಿ ಭರವಸೆಯನ್ನು ಮೂಡಿಸಿದ ಯುವ ಪ್ರತಿಭೆಯಾಗಿದ್ದಾರೆ. ಸಾಹಿತ್ಯ ಗಂಗಾ ಧಾರವಾಡ ಸಂಸ್ಥೆಯ ಮುಖ್ಯಸ್ಥರಾಗಿ ಮತ್ತು ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸಂಚಾಲಕರಾಗಿ, ರಾಜ್ಯಮಟ್ಟದ ಸಾಹಿತ್ಯಿಕ ಸ್ಪರ್ಧೆ ಮತ್ತು ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಇವರ ‘ಕನ್ನಡಿ ಮತ್ತು ಕಂದೀಲು’ ಎಂಬ ವಿಮರ್ಶಾ ಲೇಖನಗಳ ಸಂಕಲನ ಶೀಘ್ರದಲ್ಲೇ ಪ್ರಕಟವಾಗಲಿದೆ. ‘ಉತ್ತರ ಕರ್ನಾಟಕದ ಮಂದಿ’ ಮತ್ತು ‘ಹೃದಯದ ಹಾದಿ’ ಕೃತಿಗಳು ಈ ವರ್ಷ ಪ್ರಕಟವಾಗಲಿವೆ.

    Share. Facebook Twitter Pinterest LinkedIn Tumblr WhatsApp Email
    Previous Articleಸುಬ್ರಹ್ಮಣ್ಯ ಎಸ್‌ಎಸ್‌ಪಿಯು ಕಾಲೇಜಿನಲ್ಲಿ ಸಾಂಸ್ಕೃತಿಕ ಸಂಘ ಉದ್ಘಾಟನೆ ಮತ್ತು ಪ್ರತಿಭಾ ಪ್ರದರ್ಶನ
    Next Article ‘ಘಾಂದ್ರುಕ್’ ಕಾದಂಬರಿ ಲೋಕಾರ್ಪಣೆ ಹಾಗೂ ಲೇಖಕರ ಜತೆ ಸಂವಾದ
    roovari

    Add Comment Cancel Reply


    Related Posts

    ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ‘ವಿವೇಕಸ್ಮೃತಿ’ ಉಪನ್ಯಾಸ ಕಾರ್ಯಕ್ರಮ

    June 12, 2025

    ಅಂತರಾಷ್ಟ್ರೀಯ ಮಟ್ಟದ ಬೂಕರ್ ಪ್ರಶಸ್ತಿ ಪುರಸ್ಕೃತರಾದ ದೀಪಾ ಭಾಸ್ತಿಯವರಿಗೆ ಗೌರವ ಸಮರ್ಪಣೆ

    June 12, 2025

    ಕವನ | ಮುಂಗಾರು ಮಳೆ

    June 12, 2025

    ವಿಶೇಷ ಲೇಖನ – ಮಹಾನ್ ವಿದ್ವಾಂಸ ಹೀ. ಚ. ಶಾಂತವೀರಯ್ಯ

    June 11, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.