ಮಂಗಳೂರು : ವಿಶ್ವ ಕೊಂಕಣಿ ನಾಟಕ ಮಹೋತ್ಸವ ಹಾಗೂ ಪ್ರತಿಷ್ಟಿತ ಡಾ. ಪಿ. ದಯಾನಂದ ಪೈ ವಿಶ್ವ ಕೊಂಕಣಿ ರಂಗಶ್ರೇಷ್ಟ ಹಾಗೂ ಅನುವಾದ ಪ್ರಶಸ್ತಿ ಪದಾನ ಸಮಾರಂಭ -2026ವನ್ನು ದಿನಾಂಕ 31 ಜನವರಿ ಹಾಗೂ 01 ಫೆಬ್ರವರಿ 2026ರಂದು ಮಂಗಳೂರಿನ ಕೊಡಿಯಾಲ್-ಬೈಲ್ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ವಿಶ್ವ ಕೊಂಕಣಿ ನಾಟಕ ಮಹೋತ್ಸವದ ಪ್ರಯುಕ್ತ ನಡೆಯಲಿರುವ ನಾಲ್ಕು ಪ್ರಸಿದ್ಧ ಕೊಂಕಣಿ ನಾಟಕಗಳ ಪ್ರದರ್ಶನ ಜನಮನ ಗೆಲ್ಲಲಿದ್ದು, ನೆರೆಯ ಜಿಲ್ಲೆಗಳಿಂದ ನಾಟಕಪ್ರಿಯರನ್ನು ಆಕರ್ಷಿಸಲಿದೆ. ದಿನಾಂಕ 31 ಜನವರಿ 2026ರಂದು ಸಂಜೆ 5-00 ಗಂಟೆಗೆ ಮಂಗಳೂರು ಸಾಧನಾ ಬಳಗ ಶ್ರೀ ಪ್ರಕಾಶ್ ಶೆಣೈ ನೇತೃತ್ವದ ಮಕ್ಕಳ ಕಲಾತಂಡದವರು ‘ಭಕ್ತ ಪುರಂದರ’ಯೆಂಬ ಕೊಂಕಣಿ ನಾಟಕವನ್ನು ಪ್ರದರ್ಶಿಸಲಿದ್ದಾರೆ. ಅದೇ ದಿನ ಸಂಜೆ 7-00 ಗಂಟೆಗೆ ಮಂಗಳೂರಿನ ರಂಗ ಅಧ್ಯಯನ ಕೇಂದ್ರ ತಂಡದವರು ಅಭಿನಯಿಸುವ ಜನಪ್ರಿಯ ‘ಚಿಕೆ ರಾಬ್’ (ಹ್ಯಾಂಗ್ ಓನ್) ಕೊಂಕಣಿ ನಾಟಕ ಪ್ರದರ್ಶನಗೊಳ್ಳಲಿದೆ.
ದಿನಾಂಕ 01 ಫೆಬ್ರವರಿ 2026ರಂದು ಸಂಜೆ 5-00 ಗಂಟೆಗೆ ಗೋವಾದ ನಟರಂಗ ಕ್ರಿಯೇಶನ್ಸ್ ತಂಡದವರಿಂದ ‘ಹೆಡೋನಿಸ್ಟ್’ ಕೊಂಕಣಿ ನಾಟಕವು ಪ್ರದರ್ಶನಗೊಳ್ಳಲಿದೆ. ಅದೇ ದಿನ 7-00 ಗಂಟೆಗೆ ನಾಟ್ಯ ನಿಕೇತನ ಕೊಲ್ಯದ ವತಿಯಿಂದ ಕರ್ನಾಟಕ ಕಲಾಶ್ರೀ ಗುರು ರಾಜಶ್ರೀ ಉಳ್ಳಾಲ ಇವರ ತಂಡದವರಿಂದ ‘ಪಾರಿಜಾತ ಫೂಲ್’ ಗೀತ ನೃತ್ಯ ನಾಟಕವೂ ಪ್ರದರ್ಶನಗೊಳ್ಳಲಿದೆ. ಸಂಜೆ 6-00 ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದ್ದು, ಹಿರಿಯ ಕೊಂಕಣಿ ರಂಗಕರ್ಮಿ ಶ್ರೀ ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ ಇವರು, ಈ ಬಾರಿಯ ‘ಡಾ. ಪಿ. ದಯಾನಂದ ಪೈ ವಿಶ್ವ ಕೊಂಕಣಿ ರಂಗಶ್ರೇಷ್ಟ ಪ್ರಶಸ್ತಿ’ ಸ್ವೀಕರಿಸಲಿದ್ದಾರೆ. ಹಿರಿಯ ಕೊಂಕಣಿ ಅನುವಾದಕಿ ಶ್ರೀಮತಿ ಮಾಯಾ ಅನಿಲ್ ಖರಂಗಟೆ ಇವರು ಈ ವರ್ಷದ ‘ಡಾ. ಪಿ. ದಯಾನಂದ ಪೈ ವಿಶ್ವ ಕೊಂಕಣಿ ಅನುವಾದ ಪ್ರಶಸ್ತಿ’ ಸ್ವೀಕರಿಸಲಿರುವರು. ಕಲಾಸಕ್ತ ಕೊಂಕಣಿ ಬಾಂಧವರು ಈ ಎರಡೂ ದಿನಗಳ ಕೊಂಕಣಿ ನಾಟಕ ಮಹೋತ್ಸವದಲ್ಲಿ ಭಾಗವಹಿಸಿ ಕೊಂಕಣಿ ಭಾಷೆ ಹಾಗೂ ರಂಗಕಲೆಯನ್ನು ಪ್ರೊತ್ಸಾಹಿಸಬೇಕಾಗಿ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ವಿಶ್ವಸ್ಥ ಮಂಡಳಿಯವರು ವಿನಂತಿಸಿಕೊಂಡಿದ್ದಾರೆ.

