Subscribe to Updates

    Get the latest creative news from FooBar about art, design and business.

    What's Hot

    ಆಳ್ವಾಸ್ ರಂಗ ತಂಡಕ್ಕೆ ಕಲಾವಿದರಿಂದ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಜೂನ್ 10

    May 31, 2025

    ಮಂಗಳೂರಿನಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯಿಂದ ‘ನೃತ್ಯ, ಗಾನ ವೈಭವ’

    May 31, 2025

    ಕೊಪ್ಪಳದ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯಮಟ್ಟದ ಆರತಕ್ಷತೆ ಕವಿಗೋಷ್ಠಿ

    May 31, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ರಂಗಭೂಮಿಯ ಪ್ರಸಿದ್ಧ ಕಲಾವಿದ ನವೀನ್ ಡಿ. ಪಡೀಲ್ ಇವರಿಗೆ ‘ವಿಶ್ವಪ್ರಭಾ ಪುರಸ್ಕಾರ 2025’
    Awards

    ರಂಗಭೂಮಿಯ ಪ್ರಸಿದ್ಧ ಕಲಾವಿದ ನವೀನ್ ಡಿ. ಪಡೀಲ್ ಇವರಿಗೆ ‘ವಿಶ್ವಪ್ರಭಾ ಪುರಸ್ಕಾರ 2025’

    December 30, 2024Updated:January 7, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ ಇದರ ವತಿಯಿಂದ ಪ್ರಭಾವತಿ ಹಾಗೂ ಉಡುಪಿ ವಿಶ್ವನಾಥ್ ಶೆಣೈ ಪ್ರಾಯೋಜಿತ ‘ವಿಶ್ವಪ್ರಭಾ ಪುರಸ್ಕಾರ – 2025’ವನ್ನು ತುಳು ಹಾಗೂ ಕನ್ನಡ ಚಲನಚಿತ್ರ ಮತ್ತು ರಂಗಭೂಮಿಯ ಪ್ರಸಿದ್ಧ ಕಲಾವಿದ ನವೀನ್ ಡಿ. ಪಡೀಲ್ ಇವರಿಗೆ ನೀಡಿ ಪುರಸ್ಕರಿಸಲಾಗುವುದು. ಈ ಪುರಸ್ಕಾರವು ಪ್ರಶಸ್ತಿ ಪತ್ರ, ಫಲಕ ಹಾಗೂ ಒಂದು ಲಕ್ಷ ರೂಪಾಯಿ ನಗದು ಒಳಗೊಂಡಿರುತ್ತದೆ. ಉಡುಪಿಯ ಯಕ್ಷಗಾನ ಕಲಾರಂಗದ ಐ.ವೈ.ಸಿ. ಸಭಾಂಗಣದಲ್ಲಿ ಫೆಬ್ರವರಿ ತಿಂಗಳಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸದ್ರಿ ಪುರಸ್ಕಾರವನ್ನು ಪ್ರದಾನ ಮಾಡಲಾಗುವುದು.

    ನವೀನ್ ಡಿ. ಪಡೀಲ್ :
    ರಂಗಭೂಮಿ ಮತ್ತು ಚಲನಚಿತ್ರ ನಟರಾಗಿದ್ದು, ತುಳು ಭಾಷೆಯಲ್ಲಿ 15 ಸಾವಿರಕ್ಕೂ ಹೆಚ್ಚು ನಾಟಕ ಪ್ರದರ್ಶನಗಳಲ್ಲಿ ನಟಿಸಿದ್ದಾರೆ. ‘ಮಾಸ್ಟರ್ ಆಫ್ ಕಾಮೆಡಿ ಅಂಡ್ ಟ್ರಾಜಿಡಿ’ನಂತಹ ನಟನಾ ಪ್ರದರ್ಶನಗಳಿಂದ ತುಳು ರಂಗಭೂಮಿ ವಲಯಗಳಲ್ಲಿ ವ್ಯಾಪಕವಾಗಿ ಪ್ರಸಿದ್ಧರಾಗಿರುವ ಇವರನ್ನು ‘ಕುಸಲ್ದ ಅರಸೆ’ (ತಮಾಶೆಯ ರಾಜ) ಎಂದು ಕರೆಯುತ್ತಾರೆ.

    ಹಾಸ್ಯಮಯ ಪಾತ್ರಗಳಲ್ಲಿ ಮುಖ್ಯವಾಗಿ ಇವರು ನಟಿಸಿದ್ದು, ದೇವದಾಸ್ ಕಾಪಿಕಾಡ್ ಮತ್ತು ಚಿತ್ರನಟ ಆನಂದ್ ಬೋಳಾರ್ ಜೊತೆ ಸೇರಿ ‘ಚಾ ಪರ್ಕ’ ಎಂಬ ತುಳು ನಾಟಕ ತಂಡದ ಮೂಲಕ 1990 ಮತ್ತು 2000ರ ದಶಕದ ಆರಂಭದಲ್ಲಿ ತುಳು ಹಾಸ್ಯಮಯ ನಾಟಕಗಳಲ್ಲಿ ಕಾಣಿಸಿಕೊಂಡಿರುತ್ತಾರೆ.

    ಪ್ರಸಿದ್ಧ ನಿರ್ದೇಶಕ ಅಡೂರು ಗೋಪಾಲಕೃಷ್ಣನ್ ಇವರ ನಿರ್ದೇಶನದಲ್ಲಿ 1993ರ ಮಲಯಾಳಂ ‘ವಿಧೇಯನ್’ ಚಲನಚಿತ್ರದಲ್ಲಿ ಮಮ್ಮೂಟ್ಟಿಯವರ ಜೊತೆಗೆ ಅಭಿನಯಿಸುವ ಮೂಲಕ ಹಿರಿತೆರೆಗೆ ಕಾಲಿಟ್ಟ ಪಡೀಲ್, 2024ರ ತನಕ ನೂರಾರು ಕನ್ನಡ ಮತ್ತು ತುಳು ಸಿನೆಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ವಾರಾಂತ್ಯದಲ್ಲಿ ಪ್ರಸಾರವಾಗುವ ಸೃಜನ್ ಲೋಕೇಶ್ ನೇತೃತ್ವದ ‘ಮಜಾ ಟಾಕೀಸ್’ ಹಾಸ್ಯ ಕಾರ್ಯಕ್ರಮದ ಪ್ರಧಾನ ಪಾತ್ರದಲ್ಲಿ (ಗುಂಡು ಮಾಮ) ಕಾಣಿಸಿಕೊಂಡರು.

    ಇವರು ‘ಬಿರ್ಸೆ’, ‘ರಂಗ್’, ‘ಓರಿಯಾರ್ದ್ ಒರಿ ಅಸಲ್’, ‘ತೆಲಿಕೆದ ಬೊಲ್ಲಿ’, ‘ಚಾಲಿ ಪೋಲಿಲು’, ‘ಪಿಲಿಬೈಲ್ ಯಮುನಕ್ಕ’, ‘ಏಸ’, ‘ಚಂಡಿಕೋರಿ’, ‘ಏರೆಗಾವುಯೆ ಕಿರಿಕಿರಿ’, ‘ಇಂಗ್ಲೀಷ್’, ‘ಮಗನೆ ಮಹಿಷಾ’, ‘ಸರ್ಕಸ್’, ‘ಕುಡ್ಲ ಕೆಫೆ’, ‘ಜೈ’, ‘ರಾಜ್ ಸೌಂಡ್ ಎಂಡ್ ಲೈಟ್’, ‘ಲವ್ ಮಾಕ್‌ಟೈಲ್’, ‘ಗೌಜಿ ಗಮ್ಮತ್’, ‘ಗೋಸ್ಮಾರಿ ಫಾಮಿಲಿ’, ‘ಜೀಟಿಗೆ’, ‘ಕುರೆಪಟ್’, ‘ಗಂಟ್ ಕಲ್ವೆರ್’ ಮೊದಲಾದ ಜನಪ್ರಿಯ ತುಳು ಚಲನಚಿತ್ರಗಳಲ್ಲಿ ಹಾಗೂ ‘ಐ’, ‘ಶುಗರ್ ಲೆಸ್’, ‘ಅಪರಾಧಿ ನಾನಲ್ಲ’ ಕನ್ನಡ ಚಲನಚಿತ್ರದಲ್ಲೂ ಮಾತ್ರವಲ್ಲದೆ ‘ಮೂಗಜ್ಜನ ಕೋಳಿ’ ಎಂಬ ಅರೆಭಾಷೆ ಚಿತ್ರದಲ್ಲೂ ಕಾಣಿಸಿಕೊಂಡಿರುತ್ತಾರೆ.

    ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಅತ್ಯುತ್ತಮ ಪೋಷಕ ನಟ: ಕುಡ್ಲ ಕೆಫೆ, ರೆಡ್ ಎಫ್.ಎಂ. ತುಳು ಚಲನಚಿತ್ರ ಪ್ರಶಸ್ತಿ – 2014, ಕಾಮಿಕ್ ರೋಲ್ ನಲ್ಲಿ ಅತ್ಯುತ್ತಮ ನಟ, ಒರಿಯರ್ದೋರಿ ಅಸಲ್ ತುಳು ಸಿನಿಮೋತ್ಸವ 2015, ‘ಕಾಮಿಕ್’ ಪಾತ್ರದಲ್ಲಿ ಅತ್ಯುತ್ತಮ ನಟ, ‘ತೆಲಿಕೆದ ಬೊಲ್ಲಿ’ ನಾಟಕದಲ್ಲಿ ಅತ್ಯುತ್ತಮ ನಟ, 2015ರ ಅತ್ಯುತ್ತಮ ನಟ ‘ಚಾಲಿ ಪೋಲಿಲು’, ಮಂಗಳೂರಿನ ಪ್ರತಿಷ್ಠಿತ ಸಂದೇಶ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಇನ್ನಿತರ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ. ‘ಜೀಟಿಕೆ’ ಎನ್ನುವ ತುಳು ಸಿನೆಮಾದಲ್ಲಿನ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ಪಡೆದ ನವೀನ್ ಪಡೀಲ್ ತುಳು ಭಾಷೆಗೆ ಮತ್ತು ತುಳು ಚಿತ್ರರಂಗಕ್ಕೆ ಹೆಮ್ಮೆ ತಂದಿರುತ್ತಾರೆ. ಪಡೀಲ್ ಇವರು ಇಂಗ್ಲೆಂಡ್, ಆಸ್ಟ್ರೇಲಿಯಾ, ನೈಜೀರಿಯ, ಕೀನ್ಯ, ದುಬೈ, ಮಸ್ಕತ್, ಕತಾರ್, ಬೆಹೆರೈನ್, ಸೌದಿ ಅರೇಬಿಯಾ ಹೀಗೆ ಸುಮಾರು 35ಕ್ಕೂ ಹೆಚ್ಚಿನ ರಾಷ್ಟ್ರಗಳಲ್ಲಿ ತಮ್ಮ ನಾಟಕಗಳಲ್ಲಿ ತಮ್ಮ ಪ್ರತಿಭೆಯ ಪ್ರದರ್ಶನ ನೀಡಿ ವಿಶ್ವಪ್ರಸಿದ್ಧಿಯನ್ನು ಪಡೆದಿರುತ್ತಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleಜನ್ಮದಿನ ಸಂಸ್ಮರಣೆ – ದೇವುಡು ನರಸಿಂಹ ಶಾಸ್ತ್ರಿ
    Next Article ತೆಕ್ಕಟ್ಟೆಯ ಹಯಗ್ರೀವದಲ್ಲಿ ‘ಕಣಿವೆಯ ಹಾಡು’
    roovari

    Add Comment Cancel Reply


    Related Posts

    ಆಳ್ವಾಸ್ ರಂಗ ತಂಡಕ್ಕೆ ಕಲಾವಿದರಿಂದ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಜೂನ್ 10

    May 31, 2025

    ನಟನ ರಂಗಶಾಲೆಯಲ್ಲಿ ಮಕ್ಕಳ ‘ಅಭಿನಯ ಮತ್ತು ರಂಗ ತರಬೇತಿ’ | ಜೂನ್ 08

    May 31, 2025

    ಬೆಂಗಳೂರಿನಲ್ಲಿ ಪುರಸ್ಕಾರ ಪ್ರದಾನ ಸಮಾರಂಭ ಮತ್ತು ಭಾರತೀಯ ನಾದ ಸೌರಭ ಸಂಗೀತೋತ್ಸವ | ಜೂನ್ 01

    May 31, 2025

    ಸಮಾರೋಪಗೊಂಡ ‘ವಸಂತ ಚಿಟ್ಟೆಗಳು – 2025’ ಮಕ್ಕಳ ಬೇಸಿಗೆ ಶಿಬಿರ

    May 30, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.