ಮೈಸೂರು : ವಿದುಷಿ ಕುಮಾರಿ ವೃಂದಾ ಜಿ. ರಾವ್ ಇವರು ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾನಿಲಯ ಮೈಸೂರಿನ ಇವರು ನಡೆಸಿದ 2025ನೇ ಸಾಲಿನ ಭರತನಾಟ್ಯ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ 89.83% ನೊಂದಿಗೆ ತೃತೀಯ ರ‍್ಯಾಂಕ್ ಪಡಿದಿರುತ್ತಾರೆ.
ಮಂಗಳೂರಿನ ಉರ್ವದ ನಾಟ್ಯಾರಾಧನಾ ಕಲಾ ಕೇಂದ್ರದ ಗುರು ವಿದುಷಿ ಶ್ರೀಮತಿ ಸುಮಂಗಲಾ ರತ್ನಾಕರ್ ರಾವ್ ಇವರ ಶಿಷ್ಯೆಯಾಗಿರುವ ಈಕೆ ಕಳೆದ 15 ವರ್ಷಗಳಿಂದ ಈ ಸಂಸ್ಥೆಯಲ್ಲಿ ಭರತನಾಟ್ಯ ತರಬೇತಿ ಪಡೆಯುತ್ತಿದ್ದಾಳೆ. ಉರ್ವದ ಶ್ರೀ ಗಣೇಶ್ ರಾವ್ ಮತ್ತು ಶ್ರೀಮತಿ ಜಯಲಕ್ಷ್ಮೀ ರಾವ್ ದಂಪತಿಯ ಸುಪುತ್ರಿಯಾಗಿರುವ ಈಕೆ ಈಗಷ್ಟೆ ತೃತೀಯ ಬಿ.ಕಾಂ. ಪೂರೈಸಿದ್ದು, ಜತೆಗೆ ಸಿ.ಎಸ್. ಪರೀಕ್ಷೆಯನ್ನೂ ಪ್ರಥಮ ಬಾರಿಯೇ ತೇರ್ಗಡೆ ಹೊಂದಿರುತ್ತಾರೆ. ಇವರು ಪ್ರಸ್ತುತ ಬೆಂಗಳೂರಿನ ಮಹೇಶ್ ವಿ. ಅಂಡ್ ಅಸೋಸಿಯೇಟ್ಸ್ ನಲ್ಲಿ ಸಿ.ಎ.ಯ ಆರ್ಟುಕಲ್ಶಿಪ್ ನಡೆಸುತ್ತಿದ್ದಾರೆ.