Subscribe to Updates

    Get the latest creative news from FooBar about art, design and business.

    What's Hot

    ಸಂಗೀತ ನಾಟಕ ಅಕಾಡೆಮಿಯ ಅಕಾಡೆಮಿ ರತ್ನ, ಅಕಾಡೆಮಿ ಮತ್ತು ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ ಪ್ರಕಟ

    June 18, 2026

    ಬೆಂಗಳೂರಿನ ರಮಣ ಮಹರ್ಷಿ ಹೆರಿಟೇಜ್ ಸಭಾಂಗಣದಲ್ಲಿ ವಿಶ್ವ ಸಂಗೀತ ದಿನಾಚರಣೆ | ಜೂನ್ 20 ಮತ್ತು 21

    June 18, 2026

    ಬೆಂಗಳೂರಿನ ನಾಣಿ ಅಂಗಳದಲ್ಲಿ ‘Beg Borrow ಅಳಿಯ’ ಹಾಸ್ಯ ನಾಟಕ | ಜೂನ್ 21

    June 18, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಯಕ್ಷಧ್ರುವ ಪಟ್ಲ ಫೌಂಡೇಶನ್ ನಿಂದ ‘ಯಕ್ಷಗಾನ ಶಿಕ್ಷಕರಿಗೆ ಕಾರ್ಯಾಗಾರ’
    Workshop

    ಯಕ್ಷಧ್ರುವ ಪಟ್ಲ ಫೌಂಡೇಶನ್ ನಿಂದ ‘ಯಕ್ಷಗಾನ ಶಿಕ್ಷಕರಿಗೆ ಕಾರ್ಯಾಗಾರ’

    August 29, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬಂಟ್ವಾಳ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ವತಿಯಿಂದ ನಡೆಯುತ್ತಿರುವ ಯಕ್ಷಧ್ರುವ ಯಕ್ಷ ಶಿಕ್ಷಣ ಯೋಜನೆಯ ನಾಟ್ಯ ತರಗತಿಯ ಅಭಿಯಾನದಡಿ ಯಕ್ಷಗಾನ ತರಬೇತುದಾರ ಶಿಕ್ಷಕರಿಗೆ ಬಿ.ಸಿ.ರೋಡ್ ರಂಗೋಲಿ ಹೊಟೇಲಿನಲ್ಲಿ ಯಕ್ಷಗಾನ ಶಿಕ್ಷಣದ ಕಾರ್ಯಾಗಾರ ದಿನಾಂಕ 22-08-2023ರಂದು ನಡೆಯಿತು.

    ಯಕ್ಷಗಾನ ಸೂರಿಕುಮೇರು ಗೋವಿಂದ ಭಟ್ಟರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಾಗಾರದಲ್ಲಿ ತೆಂಕುತಿಟ್ಟು ನಾಟ್ಯ ಪರಂಪರೆ, ತಾಳ ಪ್ರಸ್ತುತಿಯಲ್ಲಿರುವ ಅಭಿಪ್ರಾಯ ಬೇಧವನ್ನು ಪರಿಗಣಿಸಿ ತೆಂಕುತಿಟ್ಟು ಯಕ್ಷಗಾನ ಲೋಕದಲ್ಲಿ ಏಕರೂಪದ ಯಕ್ಷ ಶಿಕ್ಷಣ ಮುಂದಿನ ಪೀಳಿಗೆಗೆ ದೊರಕಬೇಕೆಂಬ ಸದುದ್ದೇಶದಿಂದ ತಯಾರಿಸಿದ ಯಕ್ಷಧ್ರುವ-ಯಕ್ಷ ಶಿಕ್ಷಣದ ಪಠ್ಯದ ಕೈಪಿಡಿ ಬಿಡುಗಡೆಗೊಳಿಸಲಾಯಿತು. ಕೈಪಿಡಿ ತಯಾರಿಕೆಯ ಹಂತ ಮತ್ತು ಯಕ್ಷಧ್ರುವ ಯಕ್ಷ ಶಿಕ್ಷಣದ ಧ್ಯೇಯೋದ್ದೇಶಗಳ ಬಗ್ಗೆ ಯಕ್ಷಧ್ರುವ ಯಕ್ಷಶಿಕ್ಷಣದ ನಿರ್ದೇಶಕ ಭಾಗವತ ಪಟ್ಲ ಸತೀಶ್‌ ಶೆಟ್ಟಿ ದಿಕ್ಸೂಚಿ ಭಾಷಣ ಮಾಡಿದರು.

    ಪ್ರಸಕ್ತ ಯೋಜನೆಯ ಬಗ್ಗೆ ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ಪ್ರಸ್ತಾವನೆಗೈದರು. ಯಕ್ಷಗಾನ ವಿದ್ವಾಂಸರಾದ ಡಾ. ಎಂ.ಪ್ರಭಾಕರ ಜೋಶಿ, ಪ್ರೊ. ಎಂ.ಎಲ್.ಸಾಮಗ, ಯಕ್ಷಗಾನ ಹಿರಿಯ ಕಲಾವಿದರಾದ ಬಂಟ್ವಾಳ ಜಯರಾಮ ಆಚಾರ್ಯ, ಸಂಜಯ್‌ ಕುಮಾರ್ ಗೋಣಿಬೀಡು, ಉಮೇಶ್ ಶೆಟ್ಟಿ ಉಬರಡ್ಕ, ಶಿವರಾಮ ಜೋಗಿ, ಪದ್ಮನಾಭ ಉಪಾಧ್ಯಾಯ ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ಚಂದ್ರಹಾಸ ಶೆಟ್ಟಿ ರಂಗೋಲಿ, ಪಣಂಬೂರು ವಾಸುದೇವ ಐತಾಳ್ ಮೊದಲಾದವರು ಉಪಸ್ಥಿತರಿದ್ದರು.

    ಕರ್ನಾಟಕ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್. ಸಾಮಗ ಕಾರ್ಯಾಗಾರ ನಿರ್ವಹಿಸಿದರು. ಯಕ್ಷ ಶಿಕ್ಷಣದ ಹೊಸ ಕೈಪಿಡಿಯನ್ನು ಯಕ್ಷ ಶಿಕ್ಷಕ ದೀವಿತ್‌ ಪೆರಾಡಿ ಪರಿಚಯಿಸಿದರು. ಪಠ್ಯ ಪ್ರಾತ್ಯಕ್ಷಿಕೆಯ ಮುಮ್ಮೇಳದಲ್ಲಿ ರಾಕೇಶ್ ರೈ ಅಡ್ಕ, ರಕ್ಷಿತ್ ಶೆಟ್ಟಿ ಪಡ್ರೆ ಹಿಮ್ಮೇಳದಲ್ಲಿ ಪ್ರಸಾದ್ ಚೇರ್ಕಾಡಿ, ರಾಮ್ ಪ್ರಕಾಶ್ ಕಲ್ಲೂರಾಯ, ಯಜೇಶ್ ರೈ ಕಟೀಲು ಭಾಗವಹಿಸಿದ್ದರು. ಸುಮಾರು 25ಕ್ಕೂ ಅಧಿಕ ಯಕ್ಷಗಾನ ಶಿಕ್ಷಕರ ಪಾಲ್ಗೊಳ್ಳುವಿಕೆಯೇ ಈ ಕಾರ್ಯಾಗಾರದ ವಿಶೇಷತೆ.

    Share. Facebook Twitter Pinterest LinkedIn Tumblr WhatsApp Email
    Previous Articleಸಂಧ್ಯಾ ಕಲಾವಿದರು ಅಭಿನಯಿಸುವ ಹೊಸ ನಾಟಕ ‘ಮುಖವಾಡ’ | ಸೆಪ್ಟೆಂಬರ್ 2ರಂದು
    Next Article ಪುತ್ತೂರು ಶ್ರೀ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನದಲ್ಲಿ ‘ಚೂಡಾಮಣಿ’ ಯಕ್ಷಗಾನ ತಾಳಮದ್ದಳೆ
    roovari

    Add Comment Cancel Reply


    Related Posts

    ಸಂಗೀತ ನಾಟಕ ಅಕಾಡೆಮಿಯ ಅಕಾಡೆಮಿ ರತ್ನ, ಅಕಾಡೆಮಿ ಮತ್ತು ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ ಪ್ರಕಟ

    June 18, 2026

    ರಾಜ್ಯದ ಹತ್ತು ಸಾಧಕರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಗೌರವ

    June 17, 2026

    ಮಾಹೆಯಿಂದ ಯಕ್ಷಗಾನ ಕಲಾರಂಗಕ್ಕೆ ಮನೆಗಳ ಕೊಡುಗೆ

    June 17, 2026

    ಶ್ರೀ ಗುರುನರಸಿಂಹ ದೇವಸ್ಥಾನದಲ್ಲಿ ತಾಳಮದ್ದಳೆ ಸರಣಿ ಕಾರ್ಯಕ್ರಮಕ್ಕೆ ಚಾಲನೆ

    June 16, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.