ಬಾಗಲಕೋಟೆ : ಕನ್ನಡ ಜಾನಪದ ಪರಿಷತ್ ಬೆಂಗಳೂರು ಮತ್ತು ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ಧಾರವಾಡ ಇವರ ವತಿಯಿಂದ ಧಾರವಾಡ ಜಿಲ್ಲಾ ಘಟಕದ ಪದ ಪ್ರದಾನ ಹಾಗೂ ‘ವಿಶ್ವ ಜಾನಪದ ದಿನಾಚರಣೆ ಸಮಾರಂಭ’ವನ್ನು ದಿನಾಂಕ 22 ಸೆಪ್ಟೆಂಬರ್ 2026ರಂದು ಮಧ್ಯಾಹ್ನ 1-00 ಗಂಟೆಗೆ ಹುಬ್ಬಳ್ಳಿ ನವನಗರ ಸರಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಂಗಳೂರಿನ ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷರಾದ ಜಾನಪದ ಡಾ. ಎಸ್. ಬಾಲಾಜಿ ಇವರು ಈ ಸಮಾರಂಭವನ್ನು ಉದ್ಘಾಟನೆ ಮಾಡಲಿದ್ದು, ಪ್ರಾಚಾರ್ಯರಾದ ಪ್ರೊ. ವೈ.ಎಫ್. ಹೊಸಮನಿ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಪೊಲೀಸ್ ಅಧಿಕಾರಿಗಳಾದ ಡಾ. ಜ್ಯೋರ್ತಿರ್ಲಿಂಗ ಹೊಸಕಟ್ಟಿ ಇವರು ‘ಜಾನಪದ ಸಾಹಿತ್ಯ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.

