ಸಾಗರ : ಲಯನ್ಸ್ ಕ್ಲಬ್ ಸಾಗರ, ಎಂ.ಜೆ.ಎಫ್. ಡೋನರ್ ಕ್ಲಬ್ ಮತ್ತು ಕರ್ನಾಟಕ ಜಾನಪದ ಪರಿಷತ್ತು ಸಾಗರ ಘಟಕ ಇವುಗಳ ಸಂಯುಕ್ತಾಶ್ರಯದಲ್ಲಿ ದಿನಾಂಕ 21 ಆಗಸ್ಟ್ 2025ರಂದು ಸಂಜೆ 4-30 ಗಂಟೆಗೆ ಸಾಗರದ ಲಯನ್ಸ್ ಕ್ಲಬ್ ನಲ್ಲಿ ‘ವಿಶ್ವ ಜಾನಪದ ದಿನಾಚರಣೆ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಹಿರಿಯ ಜಾನಪದ ಕಲಾವಿದರಾದ ಬೇಗೂರ್ ಶಿವಪ್ಪ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಜಾನಪದ ಕಲಾವಿದರಾದ ನಾರಾಯಣಪ್ಪ ಕುಗ್ವೆ, ವಸಂತ ಕುಗ್ವೆ, ಲಕ್ಷ್ಮಣ ಕುಗ್ವೆ, ರಾಜು ಜನ್ನೆಹಕ್ಲು ಮತ್ತು ಶ್ರೀಮತಿ ಉಷಾರಾಣಿ ಇವರನನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಕರ್ನಾಟಕ ಜಾನಪದ ಪರಿಷತ್ತಿನ ಕಲಾವಿದರಿಂದ ಜಾನಪದ ಗಾಯನ ಪ್ರಸ್ತುತಗೊಳ್ಳಲಿದೆ.