Subscribe to Updates

    Get the latest creative news from FooBar about art, design and business.

    What's Hot

    ಸಂತ ಅಲೋಶಿಯಸ್‌ನಲ್ಲಿ ‘ಮಾನ್ಸೂನ್ ರಂಗೋತ್ಸವ – 2026’ | ಜುಲೈ 17ರಿಂದ 19

    July 15, 2026

    ಫೇಸ್ಬುಕ್ ಲೈವ್ ಕಾವ್ಯ ಸಂವಾದದ 2ನೇ ಸಂಚಿಕೆ | ಜುಲೈ 18

    July 15, 2026

    ವಿಶೇಷ ಲೇಖನ | ಬಹುಮುಖ ಪ್ರತಿಭೆಯ ಸಾಹಿತಿ ಕೊಳಂಬೆ ಪುಟ್ಟಣ್ಣ ಗೌಡರು

    July 15, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಅಪೂರ್ವ ಸಾಹಿತಿ ಶ್ರೀನಿವಾಸ ವೈದ್ಯ ನಿಧನ
    News

    ಅಪೂರ್ವ ಸಾಹಿತಿ ಶ್ರೀನಿವಾಸ ವೈದ್ಯ ನಿಧನ

    April 25, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು: ಕನ್ನಡದ ಖ್ಯಾತ ಕತೆಗಾರ, ಕಾದಂಬರಿಕಾರ, ‘ಹಳ್ಳ ಬಂತು ಹಳ್ಳ’ ಖ್ಯಾತಿಯ ಹಿರಿಯ ಲೇಖಕ ಶ್ರೀನಿವಾಸ ವೈದ್ಯ ಅವರು ಬೆಂಗಳೂರಿನಲ್ಲಿ ದಿನಾಂಕ 21-04-2023 ಶುಕ್ರವಾರ ನಿಧನರಾದರು. ಮೃತರಿಗೆ 87 ವರ್ಷ ವಯಸ್ಸಾಗಿತ್ತು. ಪ್ರಾರಂಭಿಕ ಶಿಕ್ಷಣದಿಂದ ಹಿಡಿದು ಸ್ನಾತಕೋತ್ತರವರೆಗೂ ಧಾರವಾಡದಲ್ಲೇ ಶಿಕ್ಷಣ ಪೂರ್ಣಗೊಳಿಸಿದರು. ಮುಂಬೈ ಕೆನರಾ ಬ್ಯಾಂಕ್‌ ಅಧಿಕಾರಿಯಾಗಿ ಸೇರಿ 1996ರಲ್ಲಿ ನಿವೃತ್ತಿಯ ನಂತರ ಬೆಂಗಳೂರಿನಲ್ಲಿ ನೆಲೆಸಿದ್ದರು.

    ‘ಹಳ್ಳ ಬಂತು ಹಳ್ಳ’ ಕಾದಂಬರಿ ಕನ್ನಡ ಸಾಹಿತ್ಯದ ಮಹತ್ವದ ಕೃತಿ. ನಿವೃತ್ತಿಯ ನಂತರ ಬರೆಯಲು ಕುಳಿತ ಬ್ಯಾಂಕ್ ನ ಅಧಿಕಾರಿಯೊಬ್ಬರ ಈ ಬರವಣಿಗೆಯನ್ನು ಕನ್ನಡ ಲೋಕ ಅಚ್ಚರಿಯಿಂದ ಆಹ್ವಾನಿಸಿತ್ತು. ನಾನು ‘ಹರಿವ ನೀರು’ ಎಂದು ಅವರು ತನ್ನನ್ನು ಹೇಳಿಕೊಳ್ಳುತ್ತಿದ್ದರು. ‘ಅಪರಂಜಿ’ಯ ಮೂಲಕ ಕನ್ನಡ ಸಾಹಿತ್ಯ ಲೋಕವನ್ನು ಪ್ರವೇಶಿಸಿದ ಶ್ರೀನಿವಾಸ ವೈದ್ಯರು ಲಲಿತ ಪ್ರಬಂಧ, ಕಥೆ, ಕಾದಂಬರಿಗಳನ್ನು ಬರೆದಿದ್ದಾರೆ. ‘ಮನಸುಖರಾಯನ ಮನಸು’,’ ತಲೆಗೊಂದು ತರತರ’, ‘ರುಚಿಗೆ ಹುಳಿಯೊಗರು’, ‘ಕರ್ನಲ್ ಗೆ ಯಾರೂ ಬರೆಯುವುದಿಲ್ಲ’ ಹೀಗೆ ಅನೇಕ ಕೃತಿಗಳನ್ನು ರಚಿಸಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ರಾಜ್ಯೋತ್ಸವ ಪುರಸ್ಕಾರ ಇವರಿಗೆ ಸಂದಿದೆ.

    ಧಾರವಾಡ ಜಿಲ್ಲೆಯ ನವಲಗುಂದದ ಶ್ರೀನಿವಾಸ ವೈದ್ಯರು ಓದಿದ್ದು ಚರಿತ್ರೆ. ಕೆಲಸ ಮಾಡಿದ್ದು ಅರ್ಥಶಾಸ್ತ್ರ ಕ್ಷೇತ್ರದಲ್ಲಿ. ಸಮೀಪವಾದುದು ಸಾಹಿತ್ಯ. ಆದರೆ ಈಗ ಸಾಹಿತ್ಯ ಲೋಕ ಒಂದು ಮಹತ್ವದ ಸಾಹಿತಿಯನ್ನು ಕಳೆದುಕೊಂಡಿದೆ.

    Share. Facebook Twitter Pinterest LinkedIn Tumblr WhatsApp Email
    Previous Articleಕುಕ್ಕುವಳ್ಳಿಯವರ ‘ಏಕಾಂತದಿಂದ ಲೋಕಾಂತರಕೆ’ ಕೃತಿ ಅನಾವರಣ
    Next Article ‘ಯಕ್ಷೋತ್ಸಾಹೀ ಕಲಾಪಟು’ – ಅಜಿತ್ ಪುತ್ತಿಗೆ | ಪರಿಚಯ ಲೇಖನ
    roovari

    Add Comment Cancel Reply


    Related Posts

    ಮಂಗಳೂರಿನ ಪುರಭವನದಲ್ಲಿ ‘ರಿಮ್ಜಿಮ್’ ಸಂಗೀತ ಕಾರ್ಯಕ್ರಮ | ಜುಲೈ 12

    July 11, 2026

    ಸುಜ್ಞಾನ ಮಂಟಪದಲ್ಲಿ ‘ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ’ | ಜುಲೈ 7 ಮತ್ತು 8

    July 6, 2026

    ‘ಕಲಾಧಾರಾ–10’ ಯುವ ಪ್ರತಿಭೆಗಳ ಮನೋಜ್ಞ ನೃತ್ಯ – ಸಾಧಕ ಗುರುಗಳಿಗೆ ಅಪೂರ್ವ ಗೌರವ

    June 30, 2026

    ಕಯ್ಯಾರು ಶಾಲಾ ವಠಾರದಲ್ಲಿ ಅದ್ದೂರಿಯಾಗಿ ನಡೆದ ಕಿಞ್ಞಣ್ಣ ರೈ ಜನ್ಮ ದಿನಾಚರಣೆ

    June 24, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.