ಪ್ರಿಯರೇ ಬಳ್ಕೂರು ಯಕ್ಷ ಕುಸುಮ ಟ್ರಸ್ಟ್ ನಲ್ಲಿ ನಡೆದ ಕೃಷ್ಣ ಗಾರುಡಿ ಮತ್ತು ಜಾಂಬವತಿ ಯಕ್ಷಗಾನವನ್ನು ದೀಪ ಬೆಳಗುವ ಮೂಲಕ ರಂಗ ಸಂಗಾತಿಯ ಅಧ್ಯಕ್ಷರಾದ ಶ್ರೀಯುತ ಗೋಪಾಲ ಶೆಟ್ಟಿ ಅವರು ದೀಪ ಬೆಳಗುವ ಮೂಲ ಉದ್ಘಾಟಿಸಿದರು. ನಿಮ್ಮೆಲ್ಲರ ಸಹಕಾರದಿಂದ ಹಟ್ಟಿಯಂಗಡಿ ಮೇಳದವರಿಂದ ಯಕ್ಷಗಾನ ಕಾರ್ಯಕ್ರಮವು ಯಶ್ವಸಿಯಾಗಿ ಮೂಡಿಬಂದಿದೆ. ತೆಂಕಿನ ನೆಲದಲ್ಲಿ ಬಡಗಿನ ಆಟಕ್ಕೆ ಪ್ರೇಕ್ಷಕರ ಒಲವು ಇದೆ ಎನ್ನುವುದಕ್ಕೆ ಸಾಕ್ಷಿಯಾದ ಪ್ರೇಕ್ಷಕರ ಸಮೂಹವೇ ಸಾಕ್ಷಿ. ತಮಗೆಲ್ಲರಿಗೂ ರಂಗಸ್ಥಳ ಮಂಗಳೂರು, ಭಗವತೀ ದೇವಸ್ಥಾನ ಮತ್ತು ಬಳ್ಕೂರು ಯಕ್ಷ ಕುಸುಮ ಪ್ರತಿಷ್ಠಾನದ ಪರವಾಗಿ ಧನ್ಯವಾದಗಳು , ಎಲ್ಲಾ ಗಣ್ಯರು ಸೇರಿದಂತೆ ಹೋಟೇಲ್ ಓಶಿಯನ್ ಪರ್ಲ್ ವೈಸ್ ಪ್ರೆಸಿಡೆಂಟ್ ಶ್ರೀ ಗಿರೀಶ್ ಮತ್ತು ಉತ್ತರ ದಕ್ಷಿಣ ವಿಭಾಗದ ಶಾಸಕರಾದ ಡಿ ವೇದವ್ಯಾಸ್ ಕಾಮತ್ ಅವರು ಆಗಮಿಸಿ ಶುಭ ಹಾರೈಸಿದರು ಶ್ರೀ ಹಳ್ಳಾಡಿ ಜಯರಾಮ್ ಶೆಟ್ಟಿ ಮತ್ತು ಶ್ರೀ ರಂಜಿತ್ ಕುಮಾರ್ ಅವರಿಗೆ ಬಳ್ಕೂರು ಯಕ್ಷ ಕುಸುಮ ಪುರಸ್ಕಾರ ನೀಡಿ ಪುರಸ್ಕರಿಸಲಾಯಿತು.