ಉಡುಪಿ : ನಿಟ್ಟೂರು ಪ್ರೌಢಶಾಲೆಯ ಸನಿಹದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದ 60 ವಿದ್ಯಾರ್ಥಿಗಳಿಗೆ ಯಕ್ಷಶಿಕ್ಷಣ ತರಬೇತಿಯು ದಿನಾಂಕ 21-08-2023ರಂದು ಆರಂಭಗೊಂಡಿತು. ನಿಟ್ಟೂರು ಎಜುಕೇಶನಲ್ ಸೊಸೈಟಿಯ ಅಧ್ಯಕ್ಷರು, ಮಾಜಿ ಶಾಸಕರೂ ಆದ ಶ್ರೀ ಕೆ.ರಘುಪತಿ ಭಟ್ ಇವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿ, “ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ಕರಾವಳಿಯ ಅಪೂರ್ವಕಲೆ ಯಕ್ಷಗಾನವನ್ನು ಅಭ್ಯಾಸ ಮಾಡಿ ತಮ್ಮ ವ್ಯಕ್ತಿತ್ವವನ್ನು ವಿಕಸನಗೊಳಿಸಿ ಸಮಾಜಕ್ಕೆ ಆಸ್ತಿಯಾಗಬೇಕೆಂಬುದು ಯಕ್ಷಶಿಕ್ಷಣದ ಆಶಯ. ಅಂತರಾಷ್ಟ್ರೀಯ ಖ್ಯಾತಿಯ ಸಂಜೀವ ಸುವರ್ಣರು ಗುರುಗಳಾಗಿ ಲಭ್ಯವಾದದ್ದು ವಿದ್ಯಾರ್ಥಿಗಳ ಭಾಗ್ಯ” ಎಂದು ಸಂತಸ ವ್ಯಕ್ತಪಡಿಸಿದರು.
. ಸಭೆಯಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಎಸ್.ವಿ. ಭಟ್, ಶಿಕ್ಷಕರಾದ ಎಚ್.ಎನ್.ಶೃಂಗೇಶ್ವರ, ಸೀಮಾ, ಅಶೋಕ ಎಂ. ಹಳೆ ವಿದ್ಯಾರ್ಥಿಗಳಾದ ಪಿ.ದಿನೇಶ್ ಪೂಜಾರಿ, ಡಾ. ಪ್ರತಿಮಾ ಜಯಪ್ರಕಾಶ್ ಆಚಾರ್ಯ, ಹರೀಶ್ ಆಚಾರ್ಯ ಉಪಸ್ಥಿತರಿದ್ದರು. ಕಾರ್ಯದರ್ಶಿ ಶ್ರೀ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಎಲ್ಲರನ್ನು ಸ್ವಾಗತಿಸಿ,ವಸತಿ ನಿಲಯದ ಮೇಲ್ವಿಚಾರಕರಾದ ಮಂಜುನಾಥ ರಾವ್ ಧನ್ಯವಾದ ಸಲ್ಲಿಸಿದರು.