ಮಂಗಳೂರು : ಕೀರ್ತಿಶೇಷ ವರ್ಕಾಡಿ ಲಕ್ಷ್ಮೀನಾರಾಯಣ ಅಲೆವೂರಾಯರು ಯಕ್ಷರಂಗದಲ್ಲಿ ಸಂಘಟಕರಾಗಿ, ಅರ್ಥಧಾರಿಯಾಗಿ, ವೇಷಧಾರಿಯಾಗಿ ಮೆರೆದವರು. ಈಗ ಅವರ ಹೆಸರಿನಲ್ಲಿ ಅಲೆವೂರಾಯ ಸಹೋದರರು ಅಲೆವೂರಾಯ ಪ್ರತಿಷ್ಠಾನದ ಹೆಸರಿನಲ್ಲಿ ‘ಯಕ್ಷತ್ರಿವೇಣಿ’ಯನ್ನು ನಡೆಸುತ್ತಾ ಬರುತ್ತಿದ್ದು, ಈ ಬಾರಿ ಎಂಟನೇ ವರ್ಷಾಚರಣೆಯನ್ನು ಶ್ರೀಕ್ಷೇತ್ರ ಮಂಗಳಾದೇವಿಯ ಅಮ್ಮನವರ ರಾಜಾಂಗಣದಲ್ಲಿ ದಿನಾಂಕ 22ರಿಂದ 24 ಫೆಬ್ರವರಿ 2025ರಂದು ಆಯೋಜಿಸಲಾಗಿದೆ.
ಇದೇ ಸಂದರ್ಭದಲ್ಲಿ ಬಡಗುತಿಟ್ಟಿನ ಶ್ರೀ ಸಾಲಿಗ್ರಾಮ ಮಕ್ಕಳ ಮೇಳದ ಸಂಚಾಲಕರು ಉಪನ್ಯಾಸಕ ಶ್ರೀ ಸುಜಯೀಂದ್ರ ಹಂದೆ, ಬೆಂಕಿನಾಥೇಶ್ವರ ಮೇಳದ ಸಂಚಾಲಕ ಗುರುಪುರ ಶ್ರೀ ಸುರೇಂದ್ರ ಮಲ್ಲಿ ಮತ್ತು ಕಟೀಲು ಮೇಳದ ಪ್ರಧಾನ ಮದ್ದಲೆಗಾರರಾದ ಶ್ರೀ ಸುದಾಸ್ ಕಾವೂರು ಇವರುಗಳನ್ನು ಸನ್ಮಾನಿಸಲಾಗುವುದು. ಸರಯೂ ಬಾಲಯಕ್ಷ ವೃಂದ (ರಿ.) ಮಕ್ಕಳ ಮೇಳ ಇವರಿಂದ ಅನುಕ್ರಮವಾಗಿ ‘ವರಾಹಾವಾತಾರ’, ‘ರಾಮಾವತಾರ’, ‘ಕೃಷ್ಣಾವತಾರ’ಗಳೆಂಬ ಆಖ್ಯಾನಗಳು ಪ್ರದರ್ಶನಗೊಳ್ಳಲಿವೆ.