ಪುತ್ತೂರು: ಡಿಸೆಂಬರ್ -2023ರಲ್ಲಿ ನಡೆಯಲಿರುವ ‘ಶ್ರೀ ಆಂಜನೇಯ 55’ರ ಸಂಭ್ರಮಕ್ಕೆ ಪೂರಕವಾಗಿ, ಸಂಘದ ಅಧ್ಯಕ್ಷರಾದ ಶ್ರೀ ಭಾಸ್ಕರ ಬಾರ್ಯರ ಸಂಯೋಜನೆಯಲ್ಲಿ ರೂಪುಗೊಂಡು ಪ್ರಾರಂಭವಾದ ‘ಯಕ್ಷ ಬಾನುಲಿ ಸರಣಿ ತಾಳಮದ್ದಳೆ’ ಎಂಬ ಕಾರ್ಯಕ್ರಮದಡಿಯಲ್ಲಿ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ವತಿಯಿಂದ ದಿನಾಂಕ 04-08-2023ರಂದು ವಿವೇಕಾನಂದ ಕಾಲೇಜಿನ ಆಡಳಿತಕ್ಕೊಳಪಟ್ಟ ರೇಡಿಯೋ ಪಾಂಚಜನ್ಯದಲ್ಲಿ ‘ಯಕ್ಷ ದಾಂಪತ್ಯ’ ತಾಳಮದ್ದಳೆಯ ಕೊನೆಯ ಕಾರ್ಯಕ್ರಮ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಆನಂದ್ ಸವಣೂರು, ಶ್ರೀ ನಿತೀಶ್ ಎಂಕಣ್ಣಮೂಲೆ, ಚೆಂಡೆ ಮದ್ದಳೆಗಳಲ್ಲಿ ಶ್ರೀ ಪದ್ಯಾಣ ಶಂಕರನಾರಾಯಣ ಭಟ್ ಮತ್ತು ಶ್ರೀ ಶ್ರೀಪತಿ ಭಟ್ ಉಪ್ಪಿನಂಗಡಿ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀಮತಿ ಜಯಂತಿ ಹೆಬ್ಬಾರ್ (ಶ್ರೀ ಕೃಷ್ಣ), ಶ್ರೀಮತಿ ಪ್ರೇಮಲತಾ ರಾವ್ (ಸತ್ಯಭಾಮಾ), ಶ್ರೀ ರಾಮಚಂದ್ರ ಭಟ್ (ವಿಷ್ಣು) ಮತ್ತು ಶ್ರೀ ಅಚ್ಯುತ ಪಾಂಗಣ್ಣಾಯ (ಲಕ್ಷ್ಮೀ) ಸಹಕರಿಸಿದರು. ತೇಜಸ್ವಿನಿ ಕೆಮ್ಮಿಂಜೆ ಹಾಗೂ ಪ್ರಶಾಂತ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.
ಸುಮಾರು 55 ಕಲಾವಿದರನ್ನು ಜೊತೆಗೂಡಿಸಿ ಹತ್ತು ಕಂತುಗಳಲ್ಲಿ ಮೂಡಿಬಂದ ಈ ವಿನೂತನ ಕಾರ್ಯಕ್ರಮದ ಧ್ವನಿ ಮುದ್ರಣ ಮಾಡಿ ಪ್ರಸಾರಗೈಯುವಲ್ಲಿ ಸಹಕರಿಸಿದ ತೇಜಸ್ವಿ ರಾಜೇಶ್ ಕೆಮ್ಮಿಂಜೆ ಹಾಗೂ ಪ್ರಶಾಂತ್ ಇವರಿಗೆ ಸಂಘದ ವತಿಯಿಂದ ಹಿರಿಯ ಯಕ್ಷಗಾನ ಕಲಾವಿದ ಪದ್ಯಾಣ ಶಂಕರನಾರಾಯಣ ಭಟ್ ಶಾಲು ಹೊದಿಸಿ ಗೌರವಿಸಿದರು.