ಗೋವಾ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ಗೋವಾ ಘಟಕದ ದ್ವಿತೀಯ ವಾರ್ಷಿಕೋತ್ಸವವು ಗೋವಾ ಪಣಜಿಯಲ್ಲಿರುವ ಇನ್ಸ್ಟಿಟ್ಯೂಟ್ ಮೆನೇಜಸ್ ಬ್ರಗಾನ್ಸಾ ಸಭಾಗೃಹದಲ್ಲಿ ದಿನಾಂಕ 22 ಜೂನ್ 2025ರಂದು ಗೋವಾ ಘಟಕದ ಅಧ್ಯಕ್ಷರಾದ ಗಣೇಶ್ ಶೆಟ್ಟಿ ಇರ್ವತ್ತೂರು ಇವರ ಅಧ್ಯಕ್ಷತೆಯಲ್ಲಿ, ಸ್ಥಾಪಕಾಧ್ಯಕ್ಷರಾದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರ ಉಪಸ್ಥಿತಿಯಲ್ಲಿ ನಡೆಯಿತು.
ಭಾರತದ ಪ್ರವಾಸೋದ್ಯಮ ಬಂದರುಗಳ, ಹಡಗು ಹಾಗೂ ಜಲಮಾರ್ಗಗಳ ರಾಜ್ಯ ಸಚಿವರಾದ ಶ್ರೀಪಾದ ನಾಯಕ್ ಇವರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗೋವಾ ಸರಕಾರದ ಮಾಜಿ ಕಾರ್ಯದರ್ಶಿ ಟಿ.ಎನ್. ಧ್ರುವ ಕುಮಾರ್, ಪಟ್ಲ ಫೌಂಡೇಶನ್ ಗೋವಾ ಘಟಕದ ಗೌರವಾಧ್ಯಕ್ಷರಾದ ವಿಜಯೇಂದ್ರ ಶೆಟ್ಟಿ ಮತ್ತಿತರ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರತಿಭಾನ್ವಿತ ವಿದ್ಯಾರ್ಥಿ ದಕ್ಷ್ ಶೆಟ್ಟಿ ಇವರಿಗೆ ವಿದ್ಯಾನಿಧಿ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಪಾವಂಜೆ ಮೇಳದವರಿಂದ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನ ನಡೆಯಿತು. ನಿತೇಶ್ ಶೆಟ್ಟಿ ಎಕ್ಕಾರು ಇವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.