ಉಡುಪಿ : ಮಂದಾರ್ತಿ,ಮಡಾಮಕ್ಕಿ, ಅಮೃತೇಶ್ವರಿ,ಸಾಲಿಗ್ರಾಮ ಹಾಗೂ ಮಾರಣಕಟ್ಟೆ ಮೇಳಗಳಲ್ಲಿ ಸುಮಾರು 12 ವರ್ಷ ಸ್ತ್ರೀವೇಷಧಾರಿಯಾಗಿ ಕಲಾಸೇವೆಗೈದ ಗುರುಪ್ರಸಾದ್ ನೀರ್ಜೆಡ್ಡು 30 ಜುಲೈ 2024 ರಂದು ನಿಧನ ಹೊಂದಿದರು. ಅವರಿಗೆ 26 ವರ್ಷ ವಯಸ್ಸಾಗಿತ್ತು.
ಮಂದಾರ್ತಿ ಯಕ್ಷಗಾನ ತರಬೇತಿ ಕೇಂದ್ರದಲ್ಲಿ ಹಾರಾಡಿ ರಮೇಶ ಗಾಣಿಗರಿಂದ ಯಕ್ಷಗಾನ ನೃತ್ಯಾಭ್ಯಾಸ ಮಾಡಿ ಭರವಸೆಯ ಕಲಾವಿದರಾಗಿದ್ದ ಇವರು ಮುಂದಿನ ತಿರುಗಾಟಕ್ಕೆ ಹಾಲಾಡಿ ಮೇಳಕ್ಕೆ ನೇಮಕಗೊಂಡಿದ್ದರು. ಶ್ರೀಯುತರು ತಾಯಿ, ತಮ್ಮ ಹಾಗೂ ಅಭಿಮಾನಿ ಬಳಗವನ್ನು ಅಗಲಿದ್ದಾರೆ.

