19 ಫೆಬ್ರವರಿ 2023, ಮಂಗಳೂರು: 05.05.1997ರಂದು ವಿನಯ ಆಚಾರ್ಯ ಹಾಗೂ ಸುಮ ಆಚಾರ್ಯ ಇವರ ಮಗಳಾಗಿ ಅಶ್ವಿನಿ ವಿ ಭಟ್ ಅವರ ಜನನ. MSC chemistry, B.Ed ಇವರ ವಿದ್ಯಾಭ್ಯಾಸ. ತಂದೆ ವಿನಯ ಆಚಾರ್ಯ ಹಾಗೂ ಮನೆಯವರಲ್ಲಿದ್ದ ಯಕ್ಷಗಾನದ ಮೇಲಿನ ಒಲವು ಅಶ್ವಿನಿಯವರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆಯಾಯಿತು. ಪೂರ್ಣಿಮಾ ಯತೀಶ್ ರೈ ಹಾಗೂ ರಮೇಶ್ ಶೆಟ್ಟಿ ಬಾಯಾರು ಇವರ ಯಕ್ಷಗಾನದ ಗುರುಗಳು.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಭಾಗವತರಲ್ಲಿ ಪ್ರಸಂಗ ನಡೆ ಬಗ್ಗೆ ತಿಳಿದು, ಪದ್ಯಗಳನ್ನು ನೋಡಿಕೊಂಡು ಬಳಿಕ ಸಹ ಕಲಾವಿದರಲ್ಲಿ ಪೂರ್ವಭಾವಿ ಚರ್ಚೆ ಮಾಡಿ ತಯಾರಿ ಮಾಡಿಕೊಳ್ತೇನೆ ಎಂದು ಅಶ್ವಿನಿ ಅವರು ಹೇಳುತ್ತಾರೆ.
ಸುಧನ್ವ ಮೋಕ್ಷ, ದಕ್ಷಾಧ್ವರ, ಜಾಂಬವತಿ ಕಲ್ಯಾಣ, ಸುದರ್ಶನ ಗರ್ವ ಭಂಗ, ದೇವಿ ಮಹಾತ್ಮೆ, ಕನಕಾಂಗಿ ಕಲ್ಯಾಣ ಇತ್ಯಾದಿ ಇವರ ನೆಚ್ಚಿನ ಪ್ರಸಂಗಗಳು.
ದಾಕ್ಷಾಯಿಣಿ, ಸುಧನ್ವ, ಕೃಷ್ಣ, ಲಕ್ಷ್ಮೀ, ಸುಭದ್ರೆ ಇತ್ಯಾದಿ ಇವರ ನೆಚ್ಚಿನ ವೇಷಗಳು.
ಶ್ರೀ ಮಹಾ ಗಣಪತಿ ಮಹಿಳಾ ಮತ್ತು ಮಕ್ಕಳ ಯಕ್ಷಗಾನ ಮಂಡಳಿ ಕಾಟಿಪಳ್ಳ, ಕದಳಿ ಕಲಾ ಕೇಂದ್ರ ಕದ್ರಿ, ದುರ್ಗಾಂಬ ಮಹಿಳಾ ಮಂಡಳಿ ತಡಂಬೈಲು ಇತ್ಯಾದಿ ಮೇಳದಲ್ಲಿ ತಿರುಗಾಟ ಮಾಡಿದ ಅನುಭವ ಅಶ್ವಿನಿರವರಿಗೆ ಇದೆ.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಯಕ್ಷಗಾನಕ್ಕೆ ಯುವ ಸಮುದಾಯ ಆಸಕ್ತಿ ತೋರಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಆದರೆ ಸಿನಿಮಾ ಪದ್ಯಕ್ಕೆ ಯಕ್ಷಗಾನ ನಾಟ್ಯ ಮಾಡುವಂತದ್ದು ನಿಂತಲ್ಲಿ ಉತ್ತಮ ಎಂದು ಹೇಳುತ್ತಾರೆ ಅಶ್ವಿನಿ.
ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಸದಭಿರುಚಿಯ ಪ್ರೇಕ್ಷಕರು ಹೆಚ್ಚಾಗುತ್ತಿರುವುದು ಖುಷಿಯ ವಿಚಾರ. ಕಾಲಮಿತಿ ಯಕ್ಷಗಾನಕ್ಕೆ ಈಗಿನ ಪ್ರೇಕ್ಷಕರು ಹೆಚ್ಚಿನ ಒಲವು ತೋರಿಸುತ್ತಾ ಇದ್ದಾರೆ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ಇನ್ನಷ್ಟು ಹೆಚ್ಚು ಯಕ್ಷಗಾನದಲ್ಲಿ ತೊಡಗಿಸಿಕೊಳ್ಳಬೇಕು, ಬೇರೆ ಬೇರೆ ರೀತಿಯ ಪಾತ್ರ ನಿರ್ವಹಿಸಬೇಕು ಎಂದು ಹೇಳುತ್ತಾರೆ ಅಶ್ವಿನಿ.
ಕಲ್ಕೂರ ಪ್ರತಿಷ್ಠಾನದಿಂದ ಕಲ್ಕೂರ ಯುವ ಪ್ರಶಸ್ತಿ, ಜ್ಞಾನಶ್ರೀ ರಾಜ್ಯ ಪ್ರಶಸ್ತಿ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ಸನ್ಮಾನ, ಯಕ್ಷಾರಾಧನ ಕಲಾ ಕೇಂದ್ರ ಉರ್ವ ಇವರಿಂದ ಯಕ್ಷಕಲಾ ಪುರಸ್ಕಾರ, ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಇವರಿಂದ ಸನ್ಮಾನ, ಯಕ್ಷಗಾನ ಸ್ಪರ್ಧೆಯಲ್ಲಿ ಯಕ್ಷ ಪ್ರತಿಭೆ ಪುರಸ್ಕಾರ ಹೀಗೆ ಹಲವು ಸನ್ಮಾನ ಹಾಗೂ ಪ್ರಶಸ್ತಿ ಇವರಿಗೆ ದೊರೆತಿರುತ್ತದೆ.
ಯಕ್ಷಗಾನ, ತಾಳಮದ್ದಳೆ, ಹರಿಕಥೆ, ಕಾರ್ಯಕ್ರಮ ನಿರೂಪಣೆ, ಭರತನಾಟ್ಯ ಇವರ ಹವ್ಯಾಸಗಳು.
ಅಶ್ವಿನಿ ಅವರು ಶ್ರೀವತ್ಸ ಕೆ.ರ್ ಇವರನ್ನು 11.11.2021ರಂದು ಮದುವೆಯಾಗಿ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.