ಉಪ್ಪಿನಂಗಡಿ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ಉಪ್ಪಿನಂಗಡಿ ಘಟಕದ ಆಶ್ರಯದಲ್ಲಿ ಹುಣ್ಣಿಮೆಯ 3ನೇ ಮಖೆ ಜಾತ್ರೆ ಪ್ರಯುಕ್ತ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪವಾಂಜೆ ಇವರಿಂದ ‘ಶ್ರೀದೇವಿ ಲಲಿತೋಪ ಖ್ಯಾನ’ ಯಕ್ಷಗಾನ ಬಯಲಾಟವು ದಿನಾಂಕ 13 ಮಾರ್ಚ್ 2025ರಂದು ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಉಪ್ಪಿನಂಗಡಿ ಘಟಕದ ಅಧ್ಯಕ್ಷರಾದ ಕೆ. ಜಗದೀಶ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಸುಬ್ರಯ ಹೊಳ್ಳ ಕಾಸರಗೋಡು ಮತ್ತು ಉಪ್ಪಿನಂಗಡಿಯ ಯಕ್ಷ ಸಂಗಮದ ಸಂಸ್ಥಾಪಕರಾದ ಯು. ಕೃಷ್ಣ ಕೋಟಿ ಇವರನ್ನು ಸನ್ಮಾನಿಸಲಾಗುವುದು.