ಬದಿಯಡ್ಕ : ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಆಶ್ರಯದಲ್ಲಿ ಯಕ್ಷಗಾನದ ನಾಟ್ಯ ಹಾಗೂ ಹಿಮ್ಮೇಳ ತರಗತಿ ಆರಂಭವಾಗಲಿದೆ. ಪ್ರತಿ ವಾರ ಬದಿಯಡ್ಕದ ನವಜೀವನ ವಿದ್ಯಾಲಯ (ಮೂಕಾಂಬಿಕ ಸರ್ವಿಸ್ ಸ್ಟೇಷನ್ ಮುಂಭಾಗ)ದಲ್ಲಿ ತರಬೇತಿ ನಡೆಯಲಿದೆ.
ವಿದ್ಯಾರ್ಥಿಗಳಿಗೆ ವಯಸ್ಸಿನ ಮಿತಿ ಇಲ್ಲ. ಯಕ್ಷಗಾನದ ಜತೆಗೆ ಯೋಗ, ವ್ಯಕ್ತಿತ್ವ ವಿಕಸನ, ಕ್ರಾಫ್ಟ್ ಮೊದಲಾದ ಕಾರ್ಯಾಗಾರ ಉಚಿತವಾಗಿವೆ. ಜೂನ್ ದ್ವಿತೀಯ ವಾರದಲ್ಲಿ ನೂತನ ತಂಡದ ಉದ್ಘಾಟನೆ ನಡೆಸಲು ಉದ್ದೇಶಿಸಲಾಗಿದೆ. ತರಗತಿಗೆ ಸೇರಲಿಚ್ಛಿಸುವವರು ಶ್ರೀಶ ಕುಮಾರ ಪಂಜಿತಡ್ಕ ಅವರನ್ನು ಸಂಪರ್ಕಿಸಬಹುದು.