ಬೆಂಗಳೂರು : ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ಭಕ್ತ ಮಂಡಳಿ ಟ್ರಸ್ಟ್ ರಾಗಿಗುಡ್ಡ ಜಯನಗರ ಬೆಂಗಳೂರು ಇವರ ವತಿಯಿಂದ 56ನೇ ಹನುಮ ಜಯಂತಿ ಉತ್ಸವ ಪ್ರಯುಕ್ತ ಬಡಗತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಅಮೋಘ ಯಕ್ಷಗಾನ ಕಾರ್ಯಕ್ರಮವನ್ನು ದಿನಾಂಕ 15 ಡಿಸೆಂಬರ್ 2024ರಂದು ಸಂಜೆ 6-00 ಗಂಟೆಗೆ ಬೆಂಗಳೂರಿನ ರಾಗಿಗುಡ್ಡ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಯಕ್ಷಗಾನ ಕಾರ್ಯಕ್ರಮದಲ್ಲಿ ‘ಕರ್ಣಪರ್ವ’ ಪ್ರಸಂಗ ಪ್ರಸ್ತುತಗೊಳ್ಳಲಿದ್ದು, ಭಾಗವತರಾಗಿ ವಿನಯ್ ಆರ್. ಶೆಟ್ಟಿ, ಮದ್ದಳೆಯಲ್ಲಿ ಸಂಪತ್ ಆಚಾರ್, ಚಂಡೆಯಲ್ಲಿ ಮನೋಜ್ ಆಚಾರ್ ಸಹಕರಿಸಲಿದ್ದಾರೆ. ಮುಮ್ಮೇಳದಲ್ಲಿ ಸುಧೀಂದ್ರ ಹೊಳ್ಳ – ಕರ್ಣ, ಭರತ್ ರಾಜ್ ಪರ್ಕಳ – ಶಲ್ಯ, ಶಿಥಿಲ್ ಶೆಟ್ಟಿ ಐರ್ ಬೈಲ್ – ಕೃಷ್ಣ, ಹವ್ಯಕ್ ಮಂಜು – ಅರ್ಜುನ, ದೇವದಾಸ್ ಶೆಟ್ಟಿ ಮರಾಳಿ – ಕೌರವನಾಗಿ ಸಹಕರಿಸಲಿದ್ದು, ವೇಷಭೂಷಣ ಶಂಕರ ಹೊಸೂರು ಹಾಗೂ ಬೆಂಗಳೂರಿನ ಯಕ್ಷರಂಗದ ಅಧ್ಯಕ್ಷರಾದ ಹೆಚ್.ಬಿ. ರಾಜೀವ ಶೆಟ್ಟಿ ಸಂಯೋಜನೆ ಮಾಡಲಿದ್ದಾರೆ.