ಮಂಗಳೂರು : ‘ಯಕ್ಷಗಾನ ಅಭ್ಯಾಸ ಕೇಂದ್ರ ಯು.ಎ.ಇ.’ ಇವರಿಂದ ಯಕ್ಷಗಾನದ ತವರೂರಿನಲ್ಲಿ ದುಬಾಯಿ ಕಲಾವಿದರ ಯಕ್ಷ ಪಯಣ ಶ್ರೀ ಮಂಗಳಾದೇವಿ ಸನ್ನಿಧಿಯಲ್ಲಿ ಗೆಜ್ಜೆಸೇವೆಯನ್ನು ದಿನಾಂಕ 08 ಆಗಸ್ಟ್ 2028ರಂದು ಮಧ್ಯಾಹ್ನ ಗಂಟೆ 1-20ರಿಂದ ಹಮ್ಮಿಕೊಳ್ಳಲಾಗಿದೆ.
ಯಕ್ಷಕವಿ ಬೋಳೂರು ಮಧುಕುಮಾರ್ ಮತ್ತು ಕವಿ ತಿರುಮಲ ವಿರಚಿತ ‘ಸುದರ್ಶನೋಪಖ್ಯಾನ’ ಯಕ್ಷಗಾನ ಪ್ರಸಂಗದ ಹಿಮ್ಮೇಳದಲ್ಲಿ ಸತೀಶ್ ಶೆಟ್ಟಿ ಪಟ್ಲ, ರವಿಚಂದ್ರ ಕನ್ನಡಿಕಟ್ಟೆ, ದಯಾನಂದ ಶೆಟ್ಟಿಗಾರ್ ಮಿಜಾರು, ಆನಂದ ಪಡ್ರೆ, ಯಜ್ಞೇಶ್ ರೈ ಕಟೀಲು, ವಿಘ್ನೇಶ್ ಶೆಟ್ಟಿಗಾರ್ ಕಿನ್ನಿಗೋಳಿ, ಮನ್ವಿತ್ ಎಸ್. ಪದ್ಮಶಾಲಿ ಮೂಡಬಿದ್ರೆ ಭಾಗವಹಿಸಲಿದ್ದಾರೆ.

