ಇತ್ತೀಚಿನ ದಿನಗಳಲ್ಲಿ ಡೇರೆ ಮೇಳದ ಯಕ್ಷಗಾನ ಜಾಸ್ತಿ ನೋಡುತ್ತಿದ್ದ ನಾನು ಬಯಲಾಟ ಮೇಳದ ಆಟಕ್ಕೆ ಹೋದರೂ ಕೂಡ ಸ್ವಲ್ಪ ನೋಡಿ ಬರುತ್ತಿದ್ದೆ… ಆದ್ರೆ ಈ ವರ್ಷ ಎಲ್ಲರ ಬಾಯಲ್ಲೂ ಕೂಡ ಹಾಲಾಡಿ ಮೇಳದ ‘ಹಂಸ ಪಲ್ಲಕ್ಕಿ’ ಆಟ ಒಳ್ಳೆ ಉಂಟು ಅಂತ…. ಆಗ ಒಂದು ಕುತೂಹಲ ಮೂಡಿತ್ತು… ಆದ್ರೆ ಹೋಗಲು ಸಮಯ ಆಗ್ಲಿಲ್ಲ… ದಿನಾಂಕ 06-05-24ರಂದು ನಮ್ಮೂರು ಕಟ್ಟ್ ಬೆಲ್ತುರ್ ಅಲ್ಲಿ ಪ್ರದರ್ಶನ ಇದ್ದಿದ್ರಿಂದ ಹೋಗಿ ಸ್ವಲ್ಪ ನೋಡಿ ಬರುವ ಅಂತ ಹೋದೆ…ಆದ್ರೆ ಬಂದಿದ್ದು ಮಾತ್ರ ಆಟ ಮುಗಿದ ನಂತರನೆ…… ವಾವ್ ಅದ್ಭುತ ಪ್ರದರ್ಶನ…. ಪ್ರೊ. ಪವನ್ ಕಿರಣಕೆರೆ ಅವರ ಪ್ರಸಂಗ ಅಂದ್ರೆ ಒಂದು ವಿಶೇಷತೆ ಇರುತ್ತದೆ ಅಂತ ಗೊತ್ತಿತ್ತು… ಆದ್ರೆ ಪ್ರಸಂಗವನ್ನು ಅಚ್ಚುಕಟ್ಟಾಗಿ ವೀಕ್ಷಕರಿಗೆ ಸ್ವಲ್ಪ ಕೂಡ ಬೇಜಾರು ಆಗದ ಹಾಗೆ ಜನರ ಮುಂದೆ ಇಟ್ಟಿದ್ದು ಹಾಲಾಡಿ ಮೇಳದ ಕಲಾವಿದರು. ಹಿಮ್ಮೇಳ ಹಾಗೂ ಮುಮ್ಮೇಳ ಕಲಾವಿದರ ಹೊಂದಾಣಿಕೆ ಅದ್ಭುತ. ಒಂದು ಬಯಲಾಟ ಮೇಳದಲ್ಲಿ ಒಂದು ಪ್ರಸಂಗ 120ಕ್ಕೂ ಅಧಿಕ ಪ್ರದರ್ಶನ ಆಗುತ್ತೆ ಅಂದ್ರೆ… ಅದು ಕಲಾವಿದರ ಸಂಘಟಿತ ಪ್ರಯತ್ನ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಯಾವ ಡೇರೆ ಮೇಳಕ್ಕೂ ಕಮ್ಮಿ ಇಲ್ಲ. ಪ್ರತಿಯೊಬ್ಬರು ಕೂಡ ತಮ್ಮ ಪಾತ್ರದಲ್ಲಿ ತೋರಿದ ಶ್ರದ್ಧೆಗೆ ಸೆಲ್ಯೂಟ್. ತೊಂಬಟ್ಟು ಅಂದ್ರೆ ಅದೇ ಎನರ್ಜಿ.. ಡೇರೆ ಮೇಳ ಆಗಲಿ ಬಯಲಾಟ ಮೇಳ ಆಗಲಿ….. ನಾಗರಾಜ್ ಆಲೂರ್ ಅವರ ಹಾಸ್ಯಭರಿತ ಖಳನಾಯಕ ಪಾತ್ರ ಅಂತೂ ಅದ್ಭುತ. ಇವರ ಎನರ್ಜಿ ಮಂದಾರ್ತಿ ಮೇಳದಲ್ಲಿ ಅಭಿಮನ್ಯು ಮಾಡಿದಾಗಲೇ ನೋಡಿದ್ದೆ. ಬೀಜಮಕ್ಕಿ ಅವರ ಪಾತ್ರ ನಿರ್ವಹಣೆ ಅವರ ಅನುಭವಕ್ಕೆ ಹಿಡಿದ ಕನ್ನಡಿ. ಹಾಸ್ಯದಲ್ಲಿ ಶಂಕರ ದೇವಾಡಿಗ ಹಾಗೂ ಬಸವ ಚೌಕುಲಮಕ್ಕಿ (ಟ್ರೆಂಡಿಂಗ್ ಉಜಿಕಡ್ಡಿ) ಅವರ ಸಮನ್ವಯ, ಅದ್ಭುತ ಟೈಮಿಂಗ್ ನಲ್ಲಿ ನಗುವಿನ ಅಲೆ ಸೃಷ್ಟಿ ಮಾಡಿ, ಪ್ರೇಕ್ಷಕರನ್ನು ಹಾಗೆ ಹಿಡಿದು ಇಟ್ಟಿದಂತೂ ನಿಜ. ಭಾಗವತದ್ವಯರು ಸೂಪರ್…. ಗಣೇಶ್ ಆಚಾರ್ಯ ಬಿಲ್ಲಾಡಿ ಅವರ ಪದ್ಯ ಮನಸಿಗೆ ತುಂಬಾ ಸಂತೋಷ ಕೊಟ್ಟಿತು… ಮುಂದೊಂದಿನ, ಜನ್ಸಾಲೆ ನಂತ್ರ ಪೆರ್ಡೂರು ಮೇಳದ ಪ್ರಧಾನ ಭಾಗವತರು ಆದ್ರೆ ಆಶ್ಚರ್ಯವಿಲ್ಲ. ಎಲ್ಲರ ಬಗ್ಗೆ ಬರೆಯೋಕೆ ಆಗದೆ ಇದ್ರು ಕೂಡ, ಎಲ್ಲರ ಪಾತ್ರ ನಿರ್ವಹಣೆಯೂ ಸೂಪರ್. ತುಂಬಾ ದಿನದ ನಂತ್ರ ನೋಡಿದ ಒಂದು ಅದ್ಭುತ ಪ್ರದರ್ಶನ….. ಎಲ್ಲರಿಗೂ ಧನ್ಯವಾದ…
ಸಂದೀಪ್ ಗಾಣಿಗ
ಪ್ರಾಂಶುಪಾಲರು
ಶ್ರೀ ವೆಂಕಟರಮಣ ಪಿ.ಯು. ಕಾಲೇಜು ಕುಂದಾಪುರ